ತೆಲಂಗಾಣ: ಕಳೆದ ಫೆ.22 ರಂದು ಎಂಟು ಕಾರ್ಮಿಕರು ಶ್ರೀಶೈಲಂ ಎಡದಂಡೆ ಕಾಲುವೆ ಸುರಂಗದಲ್ಲಿ ಕುಸಿತ ಉಂಟಾಗಿ ಸುರಂಗದೊಳಗೆ ಸಿಲುಕಿದ್ದು, ಇದೀಗ ಅಷ್ಟು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಶೈಲಂನಿಂದ ದೇವರಕೊಂಡಕ್ಕೆ ನೀರು ಸಾಗಿಸಲು ನಿರ್ಮಿಸಲಾಗುತ್ತಿರುವ ಈ ಸುರಂಗದೊಳಗಿನ ಸೋರಿಕೆ ಸರಿಪಡಿಸಲು 50 ಜನರಿದ್ದ ಕಾರ್ಮಿಕರ ಗುಂಪು ತೆರಳಿತ್ತು. ತೆಲಂಗಾಣ
ಆದರೆ ಕಾರ್ಯಾಚರಣೆ ವೇಳೆ ಸುರಂಗದ ಮೇಲ್ಭಾಗದ 10 ಮೀ. ವ್ಯಾಪ್ತಿಯ ಪ್ರದೇಶ ಏಕಾಏಕಿ ಕುಸಿದಿದ್ದು, 200 ಮೀ.ಗೂ ಹೆಚ್ಚು ಪ್ರದೇಶದಲ್ಲಿ ಮಣ್ಣು ಬಿದ್ದಿತ್ತು.
ಇದನ್ನೂ ಓದಿ: ಖ್ಯಾತ ನಿರ್ದೇಶಕ ರಾಜಮೌಳಿಗೆ ಸ್ನೇಹಿತನಿಂದಲೇ ಸಂಕಷ್ಟ: ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕ
ಈ ಘಟನೆಯಲ್ಲಿ 42 ಕಾರ್ಮಿಕರು ಸುರಂಗದಿಂದ ಹೊರ ಬಂದಿದ್ದು, ಎಂಟು ಜನ ಸುರಂಗದೊಳಗೆ ಸಿಲುಕಿದ್ದರು. ಇದೀಗ ಘಟನೆ ಸಂಭವಿಸಿ 6 ದಿನಕ್ಕೆ ಕಾಲಿಟ್ಟಿದ್ದು, ಸುರಂಗದಲ್ಲಿ ಸಿಲುಕಿದ್ದ ಎಲ್ಲಾ ಎಂಟು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಸ್ಥಳದಲ್ಲಿ ಎನ್ ಡಿ ಆರ್ ಎಫ್, ಸಿಡಿಆರ್ ಎಫ್ ಸಿಬ್ಬಂದಿ ಸೇರಿದಂತೆ ರಕ್ಷಣಾ ತಂಡ ಸುರಂಗದೊಳಗೆ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯಲು ಹರಸಾಹಸ ಪಡುತ್ತಿದ್ದು, ಇಂದು ಹೊರತೆಗೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಎಂಟು ಕಾರ್ಮಿಕರು 13.8 ಕಿಮೀ ಸ್ಥಳದಲ್ಲಿ ಸುಮಾರು 20 ಅಡಿ ಮಣ್ಣಿನ ಕೆಸರು ಮತ್ತು 13.4 ಕಿಮೀ ಸ್ಥಳದಲ್ಲಿ ಸುಮಾರು 6 ಅಡಿ ಕೆಸರನ್ನು ರಕ್ಷಣಾ ತಂಡಗಳು ಮೌಲ್ಯ ಮಾಪನ ಮಾಡಿದೆ.
ಇದನ್ನೂ ನೋಡಿ: ಆಧುನಿಕ ಸಾಧನ ಹಾಗೂ ತಂತ್ರಜ್ಞಾನದಿಂದಾಗಿ ಯುವಪೀಳಿಗೆ ಓದಿನಿಂದ ಸಂಪೂರ್ಣ ವಿಮುಖರಾಗುತ್ತಿದ್ದಾರೆJanashakthi Media