ಸಿಡಿಲು ಬಡಿದು ಶಾಲಾ ಮಕ್ಕಳು ಸೇರಿ 8 ಜನ ಸಾವು: ಛತ್ತೀಸಗಢದಲ್ಲಿ ಘಟನೆ

ಛತ್ತೀಸಗಢ: ‌ಸಿಡಿಲು ಬಡಿದು ಕೆಲವು ಶಾಲಾ ಮಕ್ಕಳು ಸೇರಿದಂತೆ 8 ಜನ ಮೃತಪಟ್ಟು, ಒಬ್ಬರು ಗಾಯಗೊಂಡಿದ್ದಾರೆ.

ಛತ್ತೀಸಗಢ ರಾಜನಂದಗಾಂವ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸೋಮವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಜೋರತರಾಯ್ ಗ್ರಾಮದಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ : ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಬಿದ್ದ ಖಾಸಗಿ ಬಸ್, ನಾಲ್ವರ ಸಾವು

ಪ್ರಾಥಮಿಕ ಮೂಲಗಳ ಪ್ರಕಾರ, ‘ಸಿಡಿಲು ಬಡಿದು ಶಾಲಾ ಮಕ್ಕಳು ಸೇರಿದಂತೆ 8 ಜನ ಸಾವಿಗೀಡಾಗಿದ್ದಾರೆ.

ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದು ರಾಜನಂದಗಾಂವ್ ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಗಾರ್ಗ್ ತಿಳಿಸಿದ್ದಾರೆ.

ಇದನ್ನು ನೋಡಿ : ಗುಡಿಸಲಿನಲ್ಲಿ ಅರಳುವ ಗುಲಾಭಿ ನಕ್ಷತ್ರ ನನ್ನ ಕವನ | ಸಿದ್ದಲಿಂಗಯ್ಯ | ಸೀತಾರಾಂ ಯೆಚೂರಿJanashakthi Media

Donate Janashakthi Media

Leave a Reply

Your email address will not be published. Required fields are marked *