ಬೈಲಹೊಂಗಲ | 7ನೇ ವೇತನ ಆಯೋಗದ ಹೆಚ್ಚುವರಿ ಹಣ ಬಾಕಿ: ನಿವೃತ್ತ ಶಿಕ್ಷಕಿಯ ಅಲೆದಾಟ

ಬೈಲಹೊಂಗಲ: ಕೆನರಾ ಬ್ಯಾಂಕ್‌ನ ಬೈಲಹೊಂಗಲ ಶಾಖೆಯವರು ನನ್ನ  ಏಳನೇ ವೇತನ ಆಯೋಗದ ಹೆಚ್ಚುವರಿ ಹಣ ಮಂಜೂರಾದರೂ, ಖಾತೆಗೆ ಜಮೆ ಮಾಡುತ್ತಿಲ್ಲ’ ಎಂದು ಪ್ರಭುನಗರದ ನಿವೃತ್ತ ಶಿಕ್ಷಕಿ ಅಕ್ಕುತಾಯಿ ಕೋರಿ ಆಪಾದಿಸಿದ್ದಾರೆ.

ಇದನ್ನೂ ಓದಿ : ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ‘ಮಿಯಾವಾಕಿ’ ಮಾದರಿ ಅರಣ್ಯ ನಿರ್ಮಾಣ – ಡಾ. ಎಚ್.ಜಿ. ಮಂಜುನಾಥ್

ಬ್ಯಾಂಕ್‌ನವರು ‘ದಾಖಲೆಗಳ ಸಮಸ್ಯೆಯಿಂದ ನಿಮಗೆ ಹಣ ಸಂದಾಯವಾಗಿಲ್ಲ’ ಎನ್ನುತ್ತಿದ್ದಾರೆ. ಆದರೆ, 2025ರ ಮೇ 13ರಂದು ಬೆಂಗಳೂರಿನ ಕಚೇರಿಯಿಂದ ಅಕ್ಕುತಾಯಿ ಅವರಿಗೆ ಏಳನೇ ವೇತನ ಆಯೋಗದ ಹಣ ಮಂಜೂರಾಗಿದೆ.

ಇದರಿಂದಾಗಿ ಗೊಂದಲಕ್ಕೆ ಒಳಗಾದ ನಿವೃತ್ತ ಶಿಕ್ಷಕಿ, ನ್ಯಾಯ ಕೋರಿ ಸ್ಥಳೀಯ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಮನವಿ ಸಲ್ಲಿಸಿದರು. ‘ಇಲಾಖೆಯಿಂದ ಎಲ್ಲ ದಾಖಲೆ ನೀಡಿದರೂ ಬ್ಯಾಂಕ್‌ನವರು ಅಲೆದಾಡಿಸುತ್ತಿದ್ದಾರೆ.  ಬ್ಯಾಂಕ್ ವ್ಯವಸ್ಥಾಪಕರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ನನಗೆ ಹೆಚ್ಚುವರಿ ಹಣ ಕೊಡಿಸಬೇಕು’ ಎಂದು ಕೋರಿದರು.

ಬ್ಯಾಂಕ್ ವ್ಯವಸ್ಥಾಪಕರ ಜತೆಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಶಾಸಕರು ಭರವಸೆ ನೀಡಿದರು.

ಇದನ್ನೂ ನೋಡಿ :  ಪುಸ್ತಕ ಬಿಡುಗಡೆ | ʻ ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?ʼ | ಕ್ರಿಯಾ ಮಾಧ್ಯಮ | ಎಂ.ಜಿ. ಹೆಗಡೆ

Donate Janashakthi Media

Leave a Reply

Your email address will not be published. Required fields are marked *