ಮುಂಬರುವ 25 ವರ್ಷಗಳಲ್ಲಿ ಭಾರತದ ಚಿತ್ರಣ ಬದಲಾಗಲಿದೆ – ಪ್ರಧಾನಿ ಮೋದಿ

  • ದಿಲ್ಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ
  • ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ವಂದನೆ
  • ಮಹಿಳಾ ಶಕ್ತಿಯ, ಬುಡಕಟ್ಟು ಜನರ ಕೊಡುಗೆ ಸ್ಮರಿಸಿದ ಮೋದಿ

ಹೊಸದಿಲ್ಲಿ: ರಾಜಧಾನಿ ದಿಲ್ಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸೋಮವಾರ ಧ್ವಜಾರೋಹಣ ನೆರವೇರಿಸಿದರು. ಅದಕ್ಕೂ ಮುನ್ನ ರಾಜ್‌ಘಾಟ್‌ಗೆ ಭೇಟಿ ನೀಡಿದ ಅವರು, ಮಹಾತ್ಮ ಗಾಂಧಿ ಅವರ ಸಮಾಧಿಗೆ ನಮಿಸಿದರು.

ಪ್ರಧಾನಿ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದರು. ನಾವು ದೇಶವನ್ನು ಮುಂದಕ್ಕೆ ಕರೆದೊಯ್ಯುವ ಸಮಯ ಈಗ ಬಂದಿದೆ. ಪ್ರತಿ ತ್ಯಾಗವನ್ನೂ ಗೌರವಿಸುತ್ತೇವೆ. ಪ್ರತಿ ನಾಯಕರ ಕನಸನ್ನು ಈಡೇರಿಸುತ್ತೇವೆ. ಸ್ವಾತಂತ್ರ್ಯದ ಮಹೋತ್ಸವದ ವೇಳೆ ನಾವು ಅನೇಕ ರಾಷ್ಟ್ರೀಯ ನಾಯಕರನ್ನು ಸ್ಮರಿಸುತ್ತಿದ್ದೇವೆ. ಕಳೆದ 75 ವರ್ಷಗಳಲ್ಲಿ ನಮ್ಮ ದೇಶವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಕೊಡುಗೆ ನೀಡಿದ ಎಲ್ಲ ನಾಗರಿಕರನ್ನು ನೆನಪಿಸಿಕೊಳ್ಳುತ್ತಿದ್ದೇವೆ ಎಂದರು.

ಕರ್ತವ್ಯದ ಹಾದಿಯಲ್ಲಿ ತಮ್ಮ ಪ್ರಾಣ ನೀಡಿದ ಬಾಪು, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕರ್ತವ್ಯದ ಪಥವೇ ಅವರ ಜೀವನದ ಪಥವಾಗಿತ್ತು. ಬ್ರಿಟಿಷರ ಆಡಳಿತದ ವಿರುದ್ಧ ಬಂಡಾಯವೇಳದ ಜಾಗವೇ ಈ ದೇಶದಲ್ಲಿ ಇಲ್ಲ. ರಾಣಿ ಲಕ್ಷ್ಮೀಬಾಯಿ, ಝಲ್ಕಾರಿ ಭಾಯಿ, ಚೆನ್ನಮ್ಮ, ಬೇಗಂ ಹಜರತ್ ಮಹಲ್ ಇರಬಹುದು- ಭಾರತದ ಮಹಿಳೆಯರ ಶಕ್ತಿಯನ್ನು ನೆನಪಿಸಿಕೊಂಡಾಗ ಪ್ರತಿ ಭಾರತೀಯನೂ ಹೆಮ್ಮೆಪಟ್ಟುಕೊಳ್ಳುತ್ತಾರೆ. ಈ ದೇಶವು ಬ್ರಿಟಿಷರ ತಳಹದಿಯನ್ನು ಅಲುಗಾಡಿಸಿದ ಮಂಗಳ್ ಪಾಂಟೆ, ತಾತ್ಯಾ ಟೋಪೆ, ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾ ಖಾನ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ನಮ್ಮ ಅಸಂಖ್ಯಾತ ಕ್ರಾಂತಿಕಾರಿಗಳಿಗೆ ಕೃತಜ್ಞವಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಅಥವಾ ಕಟ್ಟುವಲ್ಲಿ ಕೊಡುಗೆ ನೀಡಿದ- ಡಾ. ರಾಜೇಂದ್ರ ಪ್ರಸಾದ್, ನೆಹರೂ, ಸರ್ದಾರ್ ಪಟೇಲ್, ಎಸ್‌ಪಿ ಮುಖರ್ಜಿ, ಲಾಲ್ ಬಹದ್ದೂರ್ ಶಾಸ್ತ್ರಿ, ದೀನ್‌ದಯಾಳ್ ಉಪಾಧ್ಯಾಯ, ಜೆಪಿ ನಾರಾಯಣ, ರಾಮ್ ಮನೋಹರ್ ಲೋಹಿಯಾ, ವಿನೋಬಾ ಭಾವೆ, ನಾನಾಜಿ ದೇಶ್‌ಮುಖ್, ಸುಬ್ರಮಣ್ಯ ಭಾರತಿ ಇರಬಹುದು- ಇಂದು ಅಂತಹ ಮಹಾನ್ ವ್ಯಕ್ತಿತ್ವಗಳಿಗೆ ತಲೆಬಾಗುವ ದಿನ ಎಂದರು.

ಇಂದು ನಾವು ಡಿಜಿಟಲ್ ಇಂಡಿಯಾ ಬೆಳವಣಿಗೆಯನ್ನು ಕಾಣುತ್ತಿದ್ದೇವೆ. ದೇಶದಲ್ಲಿ ನವೋದ್ಯಮಗಳು ಬೆಳೆಯುತ್ತಿವೆ. ಟೈರ್ 2 ಮತ್ತು 3ರ ನಗರಗಳಿಂದ ಸಾಕಷ್ಟು ಪ್ರತಿಭೆಗಳು ಬರುತ್ತಿದ್ದಾರೆ. ನಮ್ಮ ಸಾಮರ್ಥ್ಯದ ಬಗ್ಗೆ ನಾವು ನಂಬಿಕೆ ಇರಿಸಬೇಕಿದೆ. ನಾವು ಭಾರತ ಮೊದಲು ಎಂಬ ನೀತಿಯನ್ನು ಮುಂದುವರಿಸಬೇಕು. ಇದು ಒಗ್ಗಟ್ಟಿನ ಭಾರತ ಸೃಷ್ಟಿಯನ್ನು ಸುಗಮಗೊಳಿಸಲಿದೆ. ಕಟ್ಟಕಡೆಯ ವ್ಯಕ್ತಿಯ ಆರೈಕೆಯ ಮಹಾತ್ಮ ಗಾಂಧಿ ಅವರ ಕನಸು, ಕಟ್ಟಕಡೆಯ ವ್ಯಕ್ತಿಯನ್ನು ಸಮರ್ಥಗೊಳಿಸುವ ಅವರ ಆಕಾಂಕ್ಷೆಗೆ ನನ್ನನ್ನು ನಾನು ಸಮರ್ಪಿತಗೊಳಿಸಿದ್ದೇನೆ. ಆ ಎಂಟು ವರ್ಷಗಳ ಫಲಿತಾಂಶವಾಗಿ ಮತ್ತು ಸ್ವಾತಂತ್ರ್ಯದ ಹಲವು ವರ್ಷಗಳ ಅನುಭವದಲ್ಲಿ, 75ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ನಾನು ಈ ಸಾಮರ್ಥ್ಯವನ್ನು

ಮಹಿಳೆಯರನ್ನು ಅಗೌರವಿಸುವುದನ್ನು ನಿಲ್ಲಿಸುತ್ತೇವೆ ಎಂಬ ಪ್ರತಿಜ್ಞೆ ತೆಗೆದುಕೊಳ್ಳುವಂತೆ ದೇಶದ ಜನತೆಗೆ ಮೋದಿ ಮಹತ್ವದ ಸಂದೇಶ ರವಾನಿಸಿದರು. ನಮ್ಮ ಮಾತು ಮತ್ತು ವರ್ತನೆಗಳಲ್ಲಿ ಮಹಿಳೆಯರ ಘನತೆಯನ್ನು ಕೀಳಾಗಿ ನೋಡುವಂತಹ ಏನನ್ನೂ ಮಾಡುವುದಿಲ್ಲ ಎನ್ನುವುದು ಮುಖ್ಯವಾಗಿದೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ಆರೋಗ್ಯ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಬರಲಿವೆ. ಸಣ್ಣ ರೈತರು, ಸಣ್ಣ ಕೈಗಾರಿಕೋದ್ಯಮಿಗಳು ಮತ್ತು ವ್ಯಾಪಾರಿಗಳ ಸಾಮರ್ಥ್ಯವು, ಸಮರ್ಥ ಭಾರತವನ್ನು ಖಚಿತಪಡಿಸುತ್ತದೆ ಎಂದು ಮೋದಿ ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *