ಶ್ರೀನಗರ: ಲಡಾಖ್‌ನ ತುರ್ತುಕ್ ವಲಯದ ಶ್ಯೋಕ್ ನದಿ ಸಮೀಪದಲ್ಲಿ ಶುಕ್ರವಾರ ರಸ್ತೆಯಿಂದ ಜಾರಿದ ಯೋಧರ ವಾಹನ ಕಂದಕಕ್ಕೆ ಉರುಳಿ ಬಿದ್ದಿದ್ದು, 7 ಮಂದಿ ಯೋಧರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
ಪರ್ತಾಪುರದ ಟ್ರಾನ್ಸಿಟ್ ಕ್ಯಾಂಪ್‌ನ 26 ಯೋಧರ ತುಕಡಿಯು ಉಪ ವಲಯದ ಹನೀಫ್‌ನ ಮುಂದಿನ ಸ್ಥಳಕ್ಕೆ ತೆರಳುತ್ತಿತ್ತು. ಸರಿಸುಮಾರು ಬೆಳಿಗ್ಗೆ 9 ಗಂಟೆಗೆ, ಥೋಯಿಸ್‌ನಿಂದ 25 ಕಿಮೀ ದೂರದಲ್ಲಿದ್ದ ವಾಹನವು ರಸ್ತೆಯಿಂದ ಸ್ಕಿಡ್ ಆಗಿ ಶ್ಯೋಕ್ ನದಿಗೆ ಬಿದ್ದಿದೆ. 50-60 ಅಡಿ ಇದ್ದಿದ್ದರಿಂದ 7 ಮಂದಿ ಸಾವನಪ್ಪಿದ್ದಾರೆ. ಇನ್ನುಳಿದವರಿಗೆ ಗಾಯಗಳಾಗಿವೆ” ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಎಲ್ಲಾ 26 ಸೈನಿಕರನ್ನು ಸೇನಾ ಕ್ಷೇತ್ರ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಲೇಹ್‌ನಿಂದ ಶಸ್ತ್ರಚಿಕಿತ್ಸಾ ತಂಡಗಳನ್ನು ಪಾರ್ತಾಪುರಕ್ಕೆ ರವಾನಿಸಲಾಯಿತು. ಇವರಲ್ಲಿ ಏಳು ಮಂದಿ ಹುತಾತ್ಮರಾಗಿದ್ದಾರೆ.
“ಗಾಯಗೊಂಡವರಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ಒದಗಿಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರನ್ನು ವೆಸ್ಟರ್ನ್ ಕಮಾಂಡ್‌ಗೆ ಸ್ಥಳಾಂತರಿಸಲು ವಾಯುಪಡೆಯಿಂದ ನೆರವನ್ನು ಕೋರಲಾಗಿದೆ” ಎಂದು ಭಾರತೀಯ ಸೇನೆ ತಿಳಿಸಿದೆ.
ಯೋಧರ ಸಾವಿಗೆ ಬೆಲೆ ಇಲ್ವಾ ರಾಜ್ಯ ಮತ್ತು ಕೇಂದ್ರ ಸರ್ಕಾರ ಅಷ್ಟೊಂದು ನಿರ್ಲಕ್ಷಿಸುವುದು ಸರಿಯಲ್ಲ