ಸಾಮಾನ್ಯವಾಗಿ ನಾವು ಬಸ್ ಕಾರ್ ಗಳಲ್ಲಿ ಪ್ರಯಾಣಿಸುತ್ತಿರುವಾಗ ಹಾಡು ಹಾಡುತ್ತ ಹಾಡು ಕೇಳುತ್ತಾ ಪ್ರಯಾಣಿಸುವುದು ನಮ್ಮೆಲ್ಲರಿಗೂ ಪ್ರಯವಾದದ್ದೆ. ಆದರೆ ನಮ್ಮ ಗಾಡಿ ಸಾಗುವುದರಿಂದಾಗಿ ರಸ್ತೆಯೇ ಸಂಗೀತ ಹಾಡುವುದನ್ನು ನೀವು ಎಲ್ಲಾದರು ನೋಡಿದ್ದೀರಾ? ಹೌದು, ಇಂತಹ ರಸ್ತೆಯ ವೀಡಿಯೋ ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ರಸ್ತೆಗಳಲ್ಲಿ ಸೆಂಟರ್ ಲೈನ್ ರಂಬಲ್ ಸ್ಟ್ರಿಪ್ ಗಳು ತಮ್ಮ ವಾಹನವು ತಮ್ಮ ಲೇನ್ ಗಳ ಅಂಚಿಗೆ ತುಂಬಾ ಹತ್ತಿರವಾಗುತ್ತಿದೆ ಎಂದು ಅಜಾಗರೂಕ ಚಾಲಕರನ್ನು ಎಚ್ಚರಿಸಲು ಮತ್ತು ವೇಗದ ಎಚ್ಚರಿಕೆಯ ಸಂಕೇತವಾಗಿ ಕೆಲಸ ಮಾಡುತ್ತವೆ. ಆದರೆ ಈ ರಸ್ತೆಯ ಮೇಲಿರುವ ಲೈನ್ ಗಳು ಸಂಗೀತವನ್ನು ನುಡಿಸುವುದರಿಂದ ಇದು ಚಾಲಕರನ್ನು ಚಾಲನೆ ಮಾಡುವಾಗ ಎಚ್ಚರವಾಗಿರಿಸುತ್ತದೆ ಮತ್ತು ಮನಸ್ಸಿಗೆ ಒಂದು ರೀತಿಯ ಹಿತವನ್ನು ಸಹ ನೀಡುತ್ತದೆ ಎಂದು ಹೇಳಬಹುದು.
Lovely wknd to you all.
I am sorry for delay. I am sick again.Musical road.
Credit By Reddit chocolat_ice_cream – owner of video. pic.twitter.com/8JzFyGKgXm— Ou (@Ou_Prg) May 23, 2020
ಸೈನ್ಸ್‌ಗರ್ಲ್ ಎಂಬ ಹೆಸರಿನ ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದಂತಹ ಒಂದು ವಿಡಿಯೋ ಇತ್ತೀಚೆಗೆ ನೆಟ್ಟಿಗರ ಗಮನವನ್ನು ಸೆಳೆದಿದೆ. ಈ ವೀಡಿಯೋದಲ್ಲಿ, ಕಾರು ರಸ್ತೆಯ ಮೇಲೆ ಚಿತ್ರಿಸಲಾದ ಬಿಳಿ ಬಣ್ಣದ ಸಾವಿರಾರು ದೊಡ್ಡ ದೊಡ್ಡ ಗೆರೆಗಳ ಮೇಲೆ ಚಲಿಸುತ್ತಿದ್ದಂತೆ, ಅದು ಹಿತವಾದ ಸಂಗೀತವನ್ನು ಸೃಷ್ಟಿಸುತ್ತದೆ. ಈ ವಿಡಿಯೋಗೆ ಇದುವರೆಗೆ 21,000ಕ್ಕೂ ಹೆಚ್ಚು ಲೈಕ್ ಗಳು ಸಹ ಬಂದಿವೆ, ಏಳು ಲಕ್ಷ ಜನ ಈ ವಿಡಿಯೋ ವೀಕ್ಷಿಸಿದ್ದಾರೆ. 1437 ಬಾರಿ ರೀ ಟ್ವೀಟ್ ಮಾಡಲಾಗಿದೆ.
ಗ್ರೂವ್ ಗಳು ಅಥವಾ ರಂಬಲ್ ಸ್ಟ್ರಿಪ್ ಗಳನ್ನು ನಿರ್ದಿಷ್ಟ ಮಧ್ಯಂತರಗಳಲ್ಲಿ ಹೊಂದಿಸಲಾಗಿದೆ ಮತ್ತು ಒಂದು ನಿರ್ದಿಷ್ಟ ವೇಗದ ಮಿತಿಯಲ್ಲಿ ಅವುಗಳ ಮೇಲೆ ಕಾರು ಚಾಲನೆ ಮಾಡುವುದರಿಂದ ಸಂಗೀತವು ಉತ್ಪತ್ತಿಯಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋದಲ್ಲಿ ತೋರಿಸಲಾದ ಆ ರಸ್ತೆ ಹಾಗೂ ಸ್ಥಳ ಯವುದೆಂದು ತಿಳಿದುಬಂದಿಲ್ಲ.