ಕೋಲಾರ: ಆರೋಗ್ಯ ಸಿಬ್ಬಂದಿಯ ನಿರಂತರ ಶ್ರಮದಿಂದ ಜಿಲ್ಲೆಯಾದ್ಯಂತ ಕೊರೊನಾ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಾ ಇದ್ದು ನಮ್ಮೆಲ್ಲರ ಶ್ರಮಕ್ಕೆ ಎಷ್ಟು ಗೌರವಿಸಿದರೂ ಸಾಲದಾಗಿದೆ ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ತಿಳಿಸಿದರು
ನಗರದ ಎಸ್ ಎನ್ ಆರ್ ಆಸ್ಪತ್ರೆಯಲ್ಲಿ ಮಂಗಳವಾರ ಜಾತ್ಯತೀತ ಜನತಾದಳ ತಾಲ್ಲೂಕು ಘಟಕದಿಂದ ಆರೋಗ್ಯ ಸಿಬ್ಬಂದಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು ಕೊರೊನಾ ಸೋಂಕಿತರ ನಿಷ್ಠುರದ ವಿರೋಧದ ಮಧ್ಯೆ ತಾಳ್ಮೆ ಮತ್ತು ಸಹನೆಯಿಂದ ತಮ್ಮ ಕಾರ್ಯನಿರ್ವಹಿಸಿ ಸೋಂಕಿತರ ಹಾರೈಕೆ ಮಾಡುತ್ತಾ ಅವರನ್ನು ಮನೆಗೆ ಕಳಸುವ ಕಾರ್ಯದಲ್ಲಿ ಮುಂಚೂಣಿ ವಾರಿಯರ್ಸ್ ಆಗಿದ್ದುನ್ನು ಸ್ಮರಿಸಿದರು
ಕೊರೊನಾ ಹೋಗಲಾಡಿಸಲು ಹಗಲುರಾತ್ರಿ ಎನ್ನದೇ ತಮ್ಮ ಆರೋಗ್ಯಕ್ಕೆ ಆಪತ್ತು ಇದ್ದರೂ ಮತ್ತೊಬ್ಬರ ಆರೋಗ್ಯದ ಬಗ್ಗೆ ಕಾಳಜಿವಹಿಸುತ್ತಾರೆ ಇಂತಹವರನ್ನು ಹಸಿವಿನಿಂದ ವಿರಬಾರದು ಎಂದು ಜೆಡಿಎಸ್ ಪಕ್ಷದ ವರಿಷ್ಠರಾದ ಎಚ್ ಡಿ ದೇವೇಗೌಡ ಹಾಗೂ ಎಚ್.ಡಿ ಕುಮಾರಸ್ವಾಮಿ ಆದೇಶದಂತೆ ಪಕ್ಷ ದಿನನಿತ್ಯ ಕಷ್ಟದಲ್ಲಿ ಇರುವರನ್ನು ಗುರುತಿಸುವ ಜೊತೆಗೆ ಇಂತಹ ಆರೋಗ್ಯ ಸಿಬ್ಬಂದಿ ವಾರಿಯರ್ಸ್ ಗೆ ಪೋತ್ಸಾಹಿಸುವ ಕೆಲಸ ಮಾಡುತ್ತಾ ಇದ್ದೇವೆ ಕೊರೊನಾ ವಾರಿಯರ್ಸ್ ಗೆ ಶಕ್ತಿ ತುಂಬುವ ಜೊತೆಗೆ ಉತ್ಸಾಹ ನೀಡುವ ಮೂಲಕ ಜೆಡಿಎಸ್ ಕಷ್ಟದಲ್ಲಿ ಇರುವರಿಗೆ ನೆರವಾಗುವಂತೆ ರಾಜ್ಯದಾದ್ಯಂತ ಯಾವ ಪಕ್ಷವರು ಮಾಡದ ಕೆಲಸವನ್ನು ನಮ್ಮ ಪಕ್ಷ ಮಾಡುತ್ತಾ ಇದೆ ಎಂದರು
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಮೂರಂಡಹಳ್ಳಿ ಗೋಪಾಲಪ್ಪ ಮಾತನಾಡಿ, ಸುಮಾರು ಒಂದು ವರ್ಷದಿಂದ ಕರೋನ ಮಹಾಮಾರಿ ರೋಗವನ್ನು ಹೋಗಲಾಡಿಸಲು ಹಗಲಿರುಳು ಸೇವೆ ಸಲ್ಲಿಸುತ್ತಿರುವ ಆರೋಗ್ಯ ಸಿಬ್ಬಂದಿಯನ್ನು ಗೌರವಿಸುವ ಕೆಲಸವನ್ನು ಜೆಡಿಎಸ್ ಪಕ್ಷದಿಂದ ಮಾಡುತ್ತಾ ಇದ್ದು ಮುಂದೆ ಮೂರನೇ ಅಲೆ ಬರುತ್ತದೆ ಎಂದು ತಜ್ಞರ ಸಮಿತಿ ಈಗಾಗಲೇ ಸೂಚಿಸಿದ್ದು ಯಾರು ಧೃತಿಗೆಡದೆ ಮೂರನೇ ಅಲೆಯನ್ನು ಧೈರ್ಯದಿಂದ ಎದುರಿಸಬೇಕಾಗುತ್ತದೆ ಎಂದರು
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ ರವಿಕುಮಾರ್ ಕೋವಿಡ್ ಬಂದಾಗಿನಿಂದ ನಮ್ಮ ಸಿಬ್ಬಂದಿ ಆಸ್ಪತ್ರೆಯಲ್ಲಿ ಸಾಕಷ್ಟು ನ್ಯೂನತೆಗಳ ನಡುವೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಇದ್ದಾರೆ ಸೋಂಕಿತರಿಗೆ ನೇರವಾಗಿ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಸೇರಿದಂತೆ ಹಾರೈಕೆ ಮಾಡುವ ಮೂಲಕ ಎಸ್ ಎನ್ ಆರ್ ಆಸ್ಪತ್ರೆಯನ್ನು ಮುಂಚೂಣಿಗೆ ಬರುವಂತೆ ಮಾಡಿರುವ ಸಿಬ್ಬಂದಿಗೆ ಜೆಡಿಎಸ್ ಪಕ್ಷದಿಂದ ಗೌರವಿಸುತ್ತಿರುವುದು ಮತ್ತಷ್ಟು ಕೆಲಸ ಮಾಡಲು ಪೇರಣೆ ನೀಡಿದ್ದಾರೆ ಎಂದರು
ಈ ಸಂದರ್ಭದಲ್ಲಿ ಡಾ ಪುಷ್ಪಲತಾ, ಡಾ.ಗೋಪಾಲಕೃಷ್ಣ, ಸುಮತಿ ಸೇರಿದಂತೆ ಆರೋಗ್ಯ ಸಿಬ್ಬಂದಿ ಇದ್ದರು