ಬೆಂಗಳೂರು| ಒಂದು ವರ್ಷದಲ್ಲಿ 623 ನಕಲಿ ವೈದ್ಯರು ಪತ್ತೆ

ಬೆಂಗಳೂರು: ನಕಲಿ ವೈದ್ಯರ ಹಾವಳಿ ರಾಜ್ಯದಲ್ಲಿ ಅತೀಯಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಒಂದೇ ವರ್ಷದಲ್ಲಿ ರಾಜ್ಯದಲ್ಲಿ 623 ನಕಲಿ ವೈದ್ಯರು ಆರೋಗ್ಯ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಬೆಂಗಳೂರು

ಕರ್ನಾಟಕದಲ್ಲಿ ನಕಲಿ ವೈದ್ಯರನ್ನು ಮಟ್ಟ ಹಾಕಲು ಆರೋಗ್ಯ ಇಲಾಖೆಯು ಸಾಕಷ್ಟು ಕ್ರಮ ಕೈಗೊಂಡಿದ್ದರೂ ನಕಲಿ ಕ್ಲಿನಿಕ್‌ಗಳು ಹುಟ್ಟಿಕೊಳ್ಳುತ್ತಲೇ ಇವೆ.

ನಕಲಿ ವೈದ್ಯರು ಅವೈಜ್ಞಾನಿಕವಾಗಿ ನೀಡುವ ಚಿಕಿತ್ಸೆಯು ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಎದುರಾಗಿದೆ. ಒಂದು ವರ್ಷದಲ್ಲಿ 623 ನಕಲಿ ವೈದ್ಯರನ್ನು ಆರೋಗ್ಯ ಇಲಾಖೆಯು ಪತ್ತೆ ಹಚ್ಚಿದೆ. ಈ ಪೈಕಿ 89 ನಕಲಿ ವೈದ್ಯರಿಗೆ ದಂಡ ವಿಧಿಸಲಾಗಿದೆ.

ಇದನ್ನೂ ಓದಿ: ಈ 35 ಔಷಧ ಉತ್ಪಾದನೆ ನಿಲ್ಲಿಸುವಂತೆ ಕೇಂದ್ರ ಸೂಚನೆ

163 ಕ್ಲಿನಿಕ್‌ಗಳಿಗೆ ನೋಟಿಸ್‌ ಜಾರಿಗೊಳಿಸಲಾಗಿದ್ದು, 193 ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ. 142 ಕ್ಲಿನಿಕ್‌ಗಳನ್ನು ಮುಟ್ಟುಗೋಲು ಹಾಕಲಾಗಿದೆ. ಇದಲ್ಲದೆ 2 ವರ್ಷಗಳಲ್ಲಿ ನಕಲಿ ಆಯುರ್ವೇದ ಚಿಕಿತ್ಸೆ ಹೆಸರಿನಲ್ಲಿ ಸಾವಿರಾರು ರೂ. ಪೀಕುತ್ತಿದ್ದ 833 ಪ್ರಕರಣ ದಾಖಲಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆಯು ರಾಜ್ಯದೆಲ್ಲೆಡೆ ನಕಲಿ ವೈದ್ಯರ ಮೇಲೆ ಕಣ್ಣಿಡಲು ಶುರುಮಾಡಿದೆ.

ಕೋಲಾರ, ತುಮಕೂರಿನಲ್ಲಿ ಅತೀ ಹೆಚ್ಚಿನ ನಕಲಿ ವೈದ್ಯರು ಸಿಕ್ಕಿಬಿದ್ದಿದ್ದಾರೆ. ಉಳಿದಂತೆ ವಿಜಯನಗರ, ರಾಯಚೂರು, ಕಲಬುರಗಿ, ಕೊಪ್ಪಳ, ಬಾಗಲಕೋಟೆ ಸಹಿತ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ನಕಲಿ ವೈದ್ಯರು ಪತ್ತೆಯಾಗಿದ್ದಾರೆ.

ಸಮಿತಿ ರಚನೆ

ನಕಲಿ ವೈದ್ಯರ ಹಾವಳಿಗೆ ತಡೆ ಹಾಕುವ ನಿಟ್ಟಿನಲ್ಲಿ ಪ್ರತೀ ಜಿಲ್ಲೆಯಲ್ಲಿ ನೋಂದಣಿ ಮತ್ತು ಕುಂದುಕೊರತೆ ನಿವಾರಣ ಪ್ರಾಧಿಕಾರ ಸಮಿತಿ ರಚಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಜಿಲ್ಲಾಧಿಕಾರಿಗಳು, ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಇರುತ್ತಾರೆ.

ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪರಿಶೀಲನೆ ವೇಳೆ ನಕಲಿ ವೈದ್ಯರು ಪತ್ತೆಯಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಕಾನೂನು ಪ್ರಕಾರ ಇಂತಹವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಹಾಗೂ ದಂಡ ವಿಧಿಸಲು ಅವಕಾಶವಿದೆ.

ಇದನ್ನೂ ನೋಡಿ: ಹಿಂದೂ ಕೋಡ್‌ ಬಿಲ್‌ ಮತ್ತು ಅಂಬೇಡ್ಕರ್‌ | ಡಾ. ರವಿಕುಮಾರ್‌ ಬಾಗಿ Janashakthi Media

Donate Janashakthi Media

Leave a Reply

Your email address will not be published. Required fields are marked *