ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ‌ʼಚಾಟಿʼ ಬೀಸಿದ ಹೆಚ್‌ ಕೆ ಪಾಟೀಲ್

ಬೆಂಗಳೂರು: ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕಾಂಗ್ರೆಸ್‌ ಶಾಸಕ ಹೆಚ್‌ ಕೆ ಪಾಟೇಲ್‌ ಕಿಡಿಕಾರಿದ್ದು, ಹಿಗಾಗಲೆ ಕರ್ನಾಟಕದಲ್ಲಿ 40% ಕಮಿಷನ್‌ ಸರ್ಕಾರ ಆಡಳಿತದಲ್ಲಿದೆ ಎನ್ನುವ ವಿಷಯ ನಿಮಗೆ ಗೊತ್ತಿಲ್ಲವೇ, ಕರ್ನಾಟಕಕ್ಕೆ ನೀವು ಏಕೆ ಬರುತ್ತೀರಿ, ಆ 40% ಕಮಿಷನ್‌ ಅನ್ನು ಹೆಚ್ಚಳ ಮಾಡುವುದಕ್ಕಾಗಿ  ನೀವು ಬಂದಿದ್ದೀರಾ ಎಂದು ಟೀಕಿಸಿದರು,

ರಾಜ್ಯದೆಲ್ಲಡೆ 40% ಕಮಿಷನ್‌ ಮತ್ತು ಪಿಎಸ್‌ ಐ ಹಗರಣ ಕೇಳಿಬರುತ್ತಿದ್ದು ಆ ಹಗರಣಗಳಲ್ಲಿ ಆಡಳಿತ ಸರ್ಕಾರದ ಕೆಲವು ಶಾಸಕರ ಕೈ ಸೇರಿದ್ದು ದಿನದಿಂದ ದಿನಕ್ಕೆ ಈ ಪ್ರಕರಣಗಳು ಹೆಚ್ಚು ತಿರುವು ಪಡೆದುಕೊಳ್ಳುತ್ತಿವೆ, ಹಾಗಾಗಿ  ರಾಜ್ಯದಲ್ಲಿ ಆಡಳಿತ ಸರಿಯಾಗಿಲ್ಲ ಕರ್ನಾಟಕದಲ್ಲೇ  ಇದುವರೆಗೂ ಇಷ್ಟೋಂದು ಭ್ರಷ್ಟಾಚಾರ ನಡೆದಿಲ್ಲ, ಇದೆ ಮೊದಲ ಬಾರಿ ಕರ್ನಾಟಕವು ಭ್ರಷ್ಟಾಚಾರದಲ್ಲಿ ಇತಿಹಾಸ ಮೂಡಿಸಿದೆ, ಕೇವಲ ಗುತ್ತಿಗೆದಾರರ ಬಳಿ ಕಮಿಷನ್‌ ತೆಗೆದುಕೊಳ್ಳುತ್ತಿದ್ದವರು ಈಗ ಪಿಎಸ್‌ ಐ ನೇಮಕಾತಿಗೂ ಕೈ ಹಾಕಿದ್ದಾರೆ,

ಇದೇ ರೀತಿ ರಾಜ್ಯದಲ್ಲಿ ಭ್ರಷ್ಟಾಚಾರ ಮುಂದುವರೆದರೆ ಜನಸಾಮಾನ್ಯರ ಪರಿಸ್ಥಿತಿ ಏನಾಗಬೇಕು, ಈ ವಿಚಾರವಾಗಿ  ಸಂತೋಷ್‌ ಪಾಟೀಲ್‌ ಅವರ ಸಾವಿನ ವಿಷಯವನ್ನ ಇಟ್ಟುಕೊಂಡು ಮಾತನಾಡಿದ ಅವರು ಈ ವಿಷಯವಾಗಿ ಸರ್ಕಾರ ಕೇವಲ ಶಾಸಕರ ರಾಜಿನಾಮೆ ನಿಡಿಸಿದರೆ ಇದು ಸಾಲಲ್ಲ, ಸರ್ಕಾರ ಇದರ ಬಗ್ಗೆ ಯಾವ ಕ್ರಮ ಕೈಗೊಂಡಿಲ್ಲ ಇದರ ಬಗ್ಗೆ ಈಗಾಗಲೆ ಪ್ರಧಾನಮಂತ್ರಿ ಮೋದಿಯವರಿಗೆ ಪತ್ರ ಹೋಗಿದೆ, ಹಾಗಾಗಿ ಈ ವಿಚಾರಾದ ಕುರಿತು ಜನರಿಗೆ ಉತ್ತರಿಸಬೇಕು ಎಂದು ಮಂಗಳವಾರ  ನಗರದಲ್ಲಿ ಸುದ್ದಿಗಾರರ ಜೊತೆ ಕಾಂಗ್ರೇಸ್‌ ಶಾಸಕ ಹೆಚ್‌ ಕೆ ಪಾಟೀಲ್‌  ಸರ್ಕಾರದ ಇತ್ತೀಚಿನ ಬೇಳವಣಿಗೆಯನ್ನ ವಿರೋಧಿಸಿ ಮಾತನಾಡಿದರು.

Donate Janashakthi Media

Leave a Reply

Your email address will not be published. Required fields are marked *