ಇಂದು ಇಂಡಿಯನ್ ಪ್ರೇಮಿಯರ್ ಲೀಗ್ 49 ನೇ ಪಂದ್ಯ, ಪುಣೆಯ ಮಹಾರಾಷ್ಟ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿದ್ದು,ಚನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜೆರ್ಸ್ ಬೆಂಗಳೂರು ಉಭಯ ತಂಡಗಳು ಮುಕಾಮುಖಿಯಾಗಲಿವೆ,
ಈ ಬಾರಿಯೂ ಪಂದ್ಯದಲ್ಲಿ ಚನ್ನೈ ನ ಮಾಜಿ ಓಪನರ್ ಬ್ಯಾಟ್ಸಮನ್ ಫಾಫ್ ಡು ಪ್ಲೆಸಿ ರಾಯಲ್ ಚಾಲೆಂಜೆರ್ಸ್ ತಂಡದ ನಾಯಕನಾಗಿ ಪಂದ್ಯದಲ್ಲಿ ಚನ್ನೈ ತಂಡ ನೀಡುವ ಸವಾಲನ್ನು ಚಾಲೆಂಜಿಂಗ್ ಆಗಿ ಸ್ವೀಕರಿಸಿ, ತಂಡವನ್ನು ಗೆಲುವಿನತ್ತ ಕರೆದೋಯ್ಯಬೇಕಾಗಿದೆ, ಕಳೆದ ಪಂದ್ಯದಲ್ಲಿ ಫಾಫ್ ಡು ಪ್ಲೆಸಿ ನಾಯಕತ್ವ ಸಾರತ್ಯದಲ್ಲಿ
ಬೆಂಗಳೂರು ತಂಡವು ಚನ್ನೈ ವಿರುದ್ದ ಸವಾಲಿನ ಮೊತ್ತ ಕಲೆ ಹಾಕುವುದರಲ್ಲಿ ವಿಫಲವಾಗಿ ಸೋಲನ್ನು ಅನುಭವಿಸಿತ್ತು, ಆದರೆ ಇಂದಿನ ಪಂದ್ಯದಲ್ಲಿ ನಾಯಕ ಡು ಪ್ಲೆಸಿ ತಂಡವನ್ನು ಗೆಲುವಿನತ್ತ ಕರೆದೋಯ್ಯಬೇಕಾಗಿದೆ, ಹಾಗಾಗಿ ಇಂದು ನಡೆಯುವ ಪಂದ್ಯದಲ್ಲಿ ಚನ್ನೈ ತಂಡಕ್ಕೆ ಬೆಂಗಳೂರು ತಂಡವು ಗೆಲುವಿನ ಚಾಲೆಂಜ್ ಹಾಕಲಿದೆ, ಈಗಾಗಲೇ ಉಭಯತಂಡಗಳು ಸರಣಿಗತವಾಗಿ ಸೋಲನ್ನು ಅನುಭವಿಸಿಕೊಂಡು ಬಂದಿವೆ, ರಾಯಲ್ ಚಾಲೆಂಜೆರ್ಸ್ ಈಗಾಗಲೇ ಹತ್ತು ಪಂದ್ಯದಲ್ಲಿ ಐದು ಪಂದ್ಯ ಗೆದ್ದಿದ್ದು ಉಳಿದ ಐದು ಪಂದ್ಯದಲ್ಲಿ ಸೋತಿದೆ, ಅದೇ ರೀತಿ ಚನ್ನೈ ತಂಡವು 9 ಪಂದ್ಯದಲ್ಲಿ 3 ಪಂದ್ಯಗಳಲ್ಲಿ ಮಾತ್ರ ಜಯಗಳಿಸಿದ್ದು, ಎರೆಡು ತಂಡಗಳು ಗೆಲುವಿನ ನಿರೀಕ್ಷೆಗಾಗಿ ಕಾದುಕುಳಿತಿವೆ,
ಆದರೆ ಹಿಂದಿನ ಪಂದ್ಯದಲ್ಲಿ ಚನ್ನೈ ತಂಡದ ನಾಯಕನಾಗಿ ರವೀಂದ್ರ ಜಡೇಜಾ ತಂಡವನ್ನು ಮೊದಲು ಗೆಲುವಿನತ್ತ ಕರೆದೋಯ್ದಿದ್ದರು ಆದರೆ ಇಂದಿನ ಪಂದ್ಯದಲ್ಲಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಸಾರಾತ್ಯದಲ್ಲಿ ತಂಡವನ್ನು ಮುನ್ನಡೆಸುತ್ತಿರುವುದು ರಾಯಲ್ ಚಾಲೆಂಜೆರ್ಸ್ ಗೆ ದೊಡ್ಡ ಸವಾಲಾಗಿದೆ, ಒಟ್ಟಾರೆ ಚನ್ನೈ ಮತ್ತು ಆರ್ ಸಿ ಬಿ ತಂಡವು ಐ ಪಿ ಎಲ್ ನಲ್ಲಿ 30 ಬಾರಿ ಮುಕಾಮುಖಿಯಾಗಿದ್ದು, ಚನ್ನೈ ತಂಡವು 20 ಬಾರಿ ವಿಜಯವನ್ನು ಸಾಧಿಸಿದೆ ಅದೇ ರೀತಿ ಬೆಂಗಳೂರು ತಂಡವು 9 ಬಾರಿ ಜಯಗಳಿಸಿದ್ದು 1 ಬಾರಿ ಡ್ರಾ ಅನುಭವಿಸಿವೆ, ಹಾಗಾಗಿ ಎರೆಡು ತಂಡಗಳು ಗೆಲುವಿನ ಅಂಕಿಗಳನ್ನ ತಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಲು ಇಂದು ಸಜ್ಜಾಗಿವೆ.