ಬಿಜೆಪಿ ಮುಖಂಡ ಹತ್ಯೆ ಪ್ರಕರಣ: 6 ಅಪರಾಧಿಗಳಿಗೆ ಗಲ್ಲು ಶಿಕ್ಷೆ

ಗಂಗಾವತಿ: ಬಿಜೆಪಿ ಮುಖಂಡ ವೆಂಕಟೇಶ ಕುರುಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಗಂಗಾವತಿ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯ ಏಪ್ರಿಲ್‌ 30ರಂದು ಆದೇಶಿಸಿದೆ. ಬಿಜೆಪಿ

ಶಿಕ್ಷೆಗೆ ಗುರಿಯಾದವರು ರವಿ, ವಿಜಯ ಅಲಿಯಾಸ್ ಮೈಲಾರಿ, ಧನರಾಜ್, ಭೀಮ ಅಲಿಯಾಸ್ ಭರತ್, ಸಲೀಂ ಮಹಮ್ಮದ್ ರಫೀಕ್, ಗಂಗಾಧರ ಗೌಳಿ ಎಂದು ತಿಳಿದುಬಂದಿದೆ.

ಇದನ್ನೂ ಓದಿ: 5 ರಾಜ್ಯಗಳ ಎಕ್ಸಿಟ್‌ ಪೋಲ್‌ ಮುನ್ನೋಟ : ಯಾರಿಗೆ ಗೆಲುವು..?

ಆರೋಪಿಗಳಾಗಿದ್ದ ಕಾರ್ತಿಕ್, ದಾದಾಪೀರ್, ಮಹಮ್ಮದ್ ಅಲ್ತಾಪ್, ಮಲ್ಲಿಕಾರ್ಜುನ , ಹತೋರ್ಟಿ ಶರಣ, ಚೈತ್ರಾ ನಿರಪರಾಧಿಗಳೆಂದು ಘೋಷಣೆ ಮಾಡಲಾಗಿದೆ. ಏ.23 ರಂದು ಆರು ಜನರು ದೋಷಿಗಳೆಂದು ತಿಳಿಸಿದ್ದ ನ್ಯಾಯಾಲಯ ಶಿಕ್ಷೆ ಕಾಯ್ದಿರಿಸಿತ್ತು. ಗುರುವಾರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ ಶಿಕ್ಷೆ ಪ್ರಕಟಿಸಿದರು. 2025 ಅಕ್ಟೋಬರ್ 7ರಂದು ಗಂಗಾವತಿ ನಗರದಲ್ಲಿ ವೆಂಕಟೇಶ ಹತ್ಯೆ ಮಾಡಲಾಗಿತ್ತು.

ಇಂದು ಗಲ್ಲು ಶಿಕ್ಷೆ ಪ್ರಕಟ

ಹಳೆ ದ್ವೇಷ ಹಿನ್ನಲೆಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ 12 ಆರೋಪಿಗಳನ್ನು ಬಂಧಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು 927 ಪುಟಗಳ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಏ.23ರಂದು ಆರು ಜನರನ್ನು ದೋಷಿಗಳೆಂದು ಘೋಷಿಸಿತ್ತು. ಇಂದು ಗಲ್ಲು ಶಿಕ್ಷೆ ಜತೆಗೆ ದಂಡ ವಿಧಿಸಿದೆ.

ಇದನ್ನೂ ನೋಡಿ: ಪಕ್ಷಾಂತರನಿಷೇಧ ಕಾಯ್ದೆ: ಪ್ರಜಾಪ್ರಭುತ್ವದ ರಕ್ಷಕವೇ, ಪಕ್ಷಾಂತರದ ದ್ವಾರವೇ? Janashakthi Media

Donate Janashakthi Media

Leave a Reply

Your email address will not be published. Required fields are marked *