ಭಾರತ ಇಂಗ್ಲೆಂಡ್‌ ನಡುವಿನ ಇಂದಿನ 5ನೇ ಟೆಸ್ಟ್ ಪಂದ್ಯ ರದ್ದು

ಮ್ಯಾಂಚೆಸ್ಟರ್ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ರದ್ದಾಗಿರುವ ಬಗ್ಗೆ ಉಭಯ ತಂಡಗಳ ಮಂಡಳಿ ತಿಳಿಸಿವೆ. ಮ್ಯಾಂಚೆಸ್ಟರ್​ನಲ್ಲಿ ಇಂದು ಫೈನಲ್‌ನ ಕೊನೆಯ ಪಂದ್ಯ ನಡೆಯಬೇಕಾಗಿತ್ತು.

ಕೋವಿಡ್ ನಿಂದಾಗಿ ಆಟಗಾರರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಇಂಗ್ಲೆಂಡ್- ವೇಲ್ಸ್​​ ಕ್ರಿಕೆಟ್ ಮಂಡಳಿ(ಇಸಿಬಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದವು.

ಭಾರತೀಯ ಆಟಗಾರರ ಎರಡು ಆರ್‌ಟಿ-ಪಿಸಿಐ ಪರೀಕ್ಷೆಗಳ ವರದಿಯು ನೆಗೆಟಿವ್ ಬಂದಿದ್ದರೂ, ಆಟಗಾರರು ಅದರ ಬಗ್ಗೆ ಆತಂಕಗೊಂಡಿದ್ದರು. ಈ ನಿಟ್ಟಿನಲ್ಲಿ, ಮಂಡಳಿಗಳ ನಡುವೆ ಹಲವು ಸುತ್ತಿನ ಚರ್ಚೆ ನಡೆದಿತ್ತು ಎಂದು ಬಿಸಿಸಿಐ ಹೇಳಿದೆ. ಇದರಲ್ಲಿ ಟೆಸ್ಟ್ ಪಂದ್ಯವನ್ನು ಆಡುವ ಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಲಾಯಿತು. ಆದರೆ ಅಂತಿಮವಾಗಿ ಕೊರೊನಾ ಸೋಂಕಿನ ಪ್ರಕರಣಗಳಿಂದಾಗಿ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲು ಭಾರತೀಯ ತಂಡ ಒತ್ತಾಯಿಸಿತು.

ಇದರಿಂದ ಅಭಿಮಾನಿಗಳಿಗೆ ಅಪಾರ ನಿರಾಶೆ ಮತ್ತು ಅನಾನುಕೂಲತೆ ಉಂಟಾಗಿದೆ ಎಂದು ನಮಗೆ ತಿಳಿದಿದೆ. ಈ ಬಗ್ಗೆ ನಾವು ಅಭಿಮಾನಿಗಳು ಮತ್ತು ಪಾಲುದಾರರಿಗೆ ನಮ್ಮ ಕಡೆಯಿಂದ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 2-1ರ ಮುನ್ನಡೆ ಸಾಧಿಸಿತ್ತು. ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.

ರದ್ದಾದ ಪಂದ್ಯವನ್ನು ಮತ್ತೊಮ್ಮೆ ಆಯೋಜಿಸಲು ಸರಿಯಾದ ಸಮಯಕ್ಕಾಗಿ ಹುಡುಕಾಟ ನಡೆದಿದೆ ಎನ್ನಲಾಗಿದೆ. ಬಿಸಿಸಿಐ ಮತ್ತು ಇಸಿಬಿಯ ನಡುವಿನ ಅತ್ಯುತ್ತಮ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು, ರದ್ದಾದ ಟೆಸ್ಟ್ ಪಂದ್ಯವನ್ನು ಮರು-ಸಂಘಟಿಸಲು ಬಿಸಿಸಿಐ ಇಸಿಬಿಗೆ ಪ್ರಸ್ತಾಪಿಸಿದೆ. ಎರಡೂ ಮಂಡಳಿಗಳು ಟೆಸ್ಟ್ ಪಂದ್ಯವನ್ನು ಆಯೋಜಿಸಲು ನಿಗದಿತ ದಿನಾಂಕದ ಬಗ್ಗೆ ಗಮನಹರಿಸಲಿದೆ. ಆಟಗಾರರ ಸುರಕ್ಷತೆ ಮತ್ತು ಆರೋಗ್ಯವು ನಮಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಮಂಡಳಿಯು ಪುನರುಚ್ಚರಿಸಿದ್ದು, ಈ ವಿಷಯದಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಲು ಸಿದ್ಧವಿಲ್ಲ ಎಂದು ಹೇಳಿಕೊಂಡಿದೆ.

2022ರ ಜೂನ್ ನಲ್ಲಿ ಭಾರತ ತಂಡ ಮತ್ತೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದು, ಆಗ 3 ಏಕದಿನ ಮತ್ತು 3 ಟಿ 20 ಪಂದ್ಯಗಳು ನಡೆಯಲಿವೆ. ಈ ಪ್ರವಾಸದ ಸಂದರ್ಭದಲ್ಲಿಯೇ ಐದನೇ ಟೆಸ್ಟ್ ಪಂದ್ಯವನ್ನು ಪರಸ್ಪರ ಸಮನ್ವಯ ಮತ್ತು ಚರ್ಚೆಗಳ ಮೂಲಕ ಆಡಲು ಸಾಧ್ಯವಿದೆಯೇ ಎಂಬ ಅಂಶವು ಇದೆ. ಇದಕ್ಕಾಗಿ, ಪ್ರತ್ಯೇಕ ಸಮಯವನ್ನು ಸಹ ತೆಗೆದುಕೊಳ್ಳಬಹುದು ಅಥವಾ ಏಕದಿನ ಅಥವಾ ಟಿ 20 ಸರಣಿ ನಡೆಯುವ ಒಂದು ಸ್ಥಳದಲ್ಲಿ ಟೆಸ್ಟ್ ಪಂದ್ಯವನ್ನು ಆಡಿಸಬಹುದು.

Donate Janashakthi Media

Leave a Reply

Your email address will not be published. Required fields are marked *