ಬಹಿಷ್ಕಾರ ಪದ್ಧತಿ ಇನ್ನೂ ಜೀವಂತ : ಈ ಕುಟುಂಬಗೊಂದಿಗೆ ಮಾತನಾಡಿದರೆ, ಮನೆಗೆ ಹೋದರೆ 5,000 ದಂಡ

ಶಿವಮೊಗ್ಗ: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಬಹಿಷ್ಕಾರ ಪದ್ಧತಿ  ಇನ್ನೂ ಜೀಂವತವಾಗಿದೆ ಎಂಬ ಘಟನೆಗಳು ಅಲ್ಲಲ್ಲಿ ನಡೆಯುತ್ತಿವೆ.  ಇಂತಹದ್ದೆ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮಡಸೂರು ಗ್ರಾಮದಲ್ಲಿ ನಡೆದಿದೆ. ಬಹಿಷ್ಕಾರಿಸಲ್ಪಟ್ಟ ಈ ಕುಟುಂಬಗೊಂದಿಗೆ ಯಾರಾದರು ಮಾತನಾಡಿದರೆ, ಅವರ ಮನೆಗೆ ಹೋದರೆ,ಸಂಪರ್ಕ ಇಟ್ಟುಕೊಂಡರೇ 5,000 ದಂಡವನ್ನು ವಿಧಿಸುವಂತಹ ಪ್ರಕರಣ ಬೆಳಕಿಗೆ ಬಂದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮಡಸೂರು ಗ್ರಾಮದಲ್ಲಿ ಇಂತಹ ಅನಿಷ್ಠ ಪದ್ಧತಿಯೊಂದು ಜೀವಂತವಿದೆ. ಈ ಗ್ರಾಮದ ಎಂ.ಕೆ ಹುಚ್ಚಪ್ಪ, ಪತ್ನಿ ಹುಚ್ಚಮ್ಮ ಹಾಗೂ ಪುತ್ರ ಎಂ.ಹೆಚ್ ವೀರೇಂದ್ರ ಅವರಿಗೆ ಮಡಸೂರು ಗ್ರಾಮಸ್ಥರು ಬಹಿಷ್ಕಾರ ಹಾಕಿ, ತೊಂದರೆ ಕೊಡುತ್ತಿರೋ ಆರೋಪ ಕೇಳಿ ಬಂದಿದೆ. ಹೀಗಾಗಿ ನಮಗೆ ದಯಾ ಮರಣ ಕಲ್ಪಿಸುವಂತೆ ಕುಟುಂಬ ತಾಲ್ಲೂಕು, ಜಿಲ್ಲಾಡಳಿತ, ಮುಖ್ಯಮಂತ್ರಿ, ಡಿಸಿ ಅವರಲ್ಲಿ ಮನವಿ ಮಾಡಿದ್ದಾರೆ.

ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಳ್ಳೋಕೆ ಅಂದು ಅವಕಾಶ, ಇಂದು ತೊಂದ್ರೆ ಮಡಸೂರು ಗ್ರಾಮದ ಸರ್ವೆ ನಂ.60ರಲ್ಲಿ ಸುಮಾರು 22 ಎಕರೆ 28 ಗುಂಟೆ ಸರ್ಕಾರಿ ಜಾಗವಿದೆ. ಈ ಜಾಗವನ್ನು 2018ರ ಗ್ರಾಮ ಸಮಿತಿಯ ತೀರ್ಮಾನಿಸಿ ಗ್ರಾಮದ ಎಂಟತ್ತು ಕುಟುಂಬಗಳಿಗೆ ಹಂಚಿಕೆ ಕೂಡ ಮಾಡಲಾಗಿತ್ತು. ಈ ಸರ್ಕಾರಿ ಭೂಮಿಯಲ್ಲಿ ಎಂ.ಕೆ ಹುಚ್ಚಪ್ಪ ಅವರಿಗೂ ಮನೆ ಕಟ್ಟಿಕೊಳ್ಳೋದಕ್ಕೆ 150 200 ಅಡಿಯನ್ನು ಹಂಚಿಕೆ ಮಾಡಲಾಗಿತ್ತು.

ಈಗಾಗಲೇ ಸರ್ಕಾರಿ ಭೂಮಿಯಲ್ಲಿ ಮಡಸೂರು ಗ್ರಾಮದ ಅನೇಕರು ಮನೆ, ತೋಟವನ್ನು ಮಾಡಿಕೊಂಡು ವಾಸಿಸುತ್ತಿದ್ದಾರೆ. ಆದರೆ ಈಗ ಎಂ.ಕೆ ಹುಚ್ಚಪ್ಪ ಹಾಗೂ ಹಾಲಿ ಪಡವಗೋಡು ಗ್ರಾಮ ಪಂಚಾಯ್ತಿ ಸದಸ್ಯ ಮತ್ತು ಮಾಜಿ ಉಪಾಧ್ಯಕ್ಷ ಎಂ.ಹೆಚ್. ವೀರೇಂದ್ರ ಅವರು ಮನೆ ನಿರ್ಮಿಸೋದಕ್ಕೆ ಮುಂದಾಗಿದ್ದರೆ, ಗ್ರಾಮಸ್ಥರು ಅಡ್ಡಿ ಮಾಡುತ್ತಿದ್ದಾರೆ ಎಂಬುದಾಗಿ ಕುಟುಂಬಸ್ಥರು ಆರೋಪಿಸುತ್ತಾರೆ.

ಇದನ್ನೂ ಓದಿ: 87 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವೈದ್ಯ – 14 ವರ್ಷದಿಂದ 67 ವರ್ಷಗಳ ವಯಸ್ಸಿನವರ ಮೇಲೂ ಅತ್ಯಾಚಾರ

ಗ್ರಾಮಸ್ಥರ ಕಿರಿಕಿರಿ ತಾಳಲಾರದೇ ಎಂ.ಹೆಚ್ ವೀರೇಂದ್ರ ಅವರ ಕುಟುಂಬಸ್ಥರು ಸಾಗರ ನ್ಯಾಯಾಲಯದ ಮೊರೆ ಹೋಗಿ ಮನೆ ಕಟ್ಟಲು ಅವಕಾಶವಿದ್ದರೂ, ಕೃಷಿ ಚಟುವಟಿಕೆಗಳಿಗೆ ಭೂಮಿಯನ್ನು ಬಳಕೆ ಮಾಡಲು ಅಡ್ಡಿಪಡಿಸದಂತೆ ಇಂಜೆಕ್ಷನ್ ಆರ್ಡರ್ ಕೂಡ ಪಡೆದಿದ್ದಾರೆ. ಹೀಗಿದ್ದರೂ ಮಡಸೂರು ಗ್ರಾಮಸ್ಥರಿಂದ ಎಂ.ಕೆ ಹುಚ್ಚಪ್ಪ ಅವರ ಕುಟುಂಬಕ್ಕೆ ತೊಂದರೆ ಕೊಡುವುದು ಮಾತ್ರ ತಪ್ಪಿಲ್ಲವಂತೆ.

ಇವರೊಂದಿಗೆ ಮಾತಾಡಿದೆ 5,000 ದಂಡವಂತೆ ಮಡಸೂರು ಗ್ರಾಮದ ಜನರು ಎಂ.ಕೆ ಹುಚ್ಚಪ್ಪ, ಅವರ ಪತ್ನಿ ಹುಚ್ಚಮ್ಮ ಹಾಗೂ ಪುತ್ರ ಎಂ.ಹೆಚ್. ವೀರೇಂದ್ರ ಅವರೊಂದಿಗೆ ಮಾತನಾಡದಂತೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರಂತೆ. ಒಂದು ವೇಳೆ ಯಾರಾದರೂ ಅವರೊಂದಿಗೆ ಮಾತನಾಡಿದರೆ 5,000 ದಂಡ ವಿಧಿಸೋದಾಗಿ ಎಚ್ಚರಿಕೆ ನೀಡಿದ್ದಾರೆ ಅಂತ ಎಂ.ಕೆ ಹುಚ್ಚಪ್ಪ ಹಾಗೂ ಪುತ್ರ ಎಂ.ಹೆಚ್.ವೀರೇಂದ್ರ ಆರೋಪಿಸಿದ್ದಾರೆ.

ನಮ್ಮ ಇಡೀ ಕುಟುಂಬಕ್ಕೆ ಸಮಾಜಿಕ ಬಹಿಷ್ಕಾರದಿಂದ ಬೇಸತ್ತು ಹೋಗಿದೆ. ಸರ್ಕಾರಿ ಜಮೀನಿನಲ್ಲಿ ಮಡಸೂರು ಗ್ರಾಮಸ್ಥರೆಲ್ಲ ಮನೆ, ತೋಟ ಮಾಡಿಕೊಂಡು ಜೀವಿಸುತ್ತಿದ್ದಾರೆ. ಆದರೇ ನಾವು ಈಗ ಮನೆ ಕಟ್ಟಿಕೊಳ್ಳೋಕೆ ಹೋದ್ರೆ ಬಿಡುತ್ತಿಲ್ಲ. ಬದುಕಿದ್ದು ಸತ್ತಂತೆ ನಮ್ಮ ಕುಟುಂಬ ವಾಸಿಸುತ್ತಿದೆ. ಈ ಬಗ್ಗೆ ಸಾಗರ ಉಪ ವಿಭಾಗಾಧಿಕಾರಿಗಳು, ಡಿವೈಎಸ್ಪಿ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ನಮ್ಮ ಕುಟುಂಬಕ್ಕೆ ದಯಾ ಮರಣ ಕರುಣಿಸುವಂತೆ ತಾಲ್ಲೂಕು ಆಡಳಿತಕ್ಕೆ ಎಂ.ಕೆ ಹುಚ್ಚಪ್ಪ, ಪತ್ನಿ ಹುಚ್ಚಮ್ಮ, ಪುತ್ರ ಎಂ.ಹೆಚ್. ವೀರೇಂದ್ರ ನೊಂದು ಮನವಿ ಮಾಡಿದ್ದಾರೆ.

ಇದನ್ನೂ ನೋಡಿ : ದಲತರಿಂದ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು Janashakthi Media

Donate Janashakthi Media

Leave a Reply

Your email address will not be published. Required fields are marked *