ಪಾಟ್ನಾ: ಸಿವಾನ್ ಜಿಲ್ಲೆಯ ಹಸನ್ಪುರ ಗ್ರಾಮದ ನಿವಾಸಿ 56 ವರ್ಷದ ನಸೀಮ್ ಖುರೇಷಿ ಗೋಮಾಂಸ ಸಾಗಿಸುತ್ತಿದ್ದಾನೆ ಎಂದು ಶಂಕಿಸಿ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿ, ಕೊಲೆ ಮಾಡಿರುವ ಘಟನೆ ನಡೆದಿದೆ.
ಬಿಹಾರದ ಪಾಟ್ನಾದಿಂದ 110 ಕಿಲೋ ಮೀಟರ್ ದೂರದ ವಾಯುವ್ಯ ಭಾಗದಲ್ಲಿರುವ ಜೋಗಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಸೀಮ್ ಖುರೇಷಿ ತನ್ನ ಸೋದರಳಿಯ ಫಿರೋಜ್ ಅಹ್ಮದ್ ಖುರೇಷಿ ಅವರೊಂದಿಗೆ ಪರಿಚಯಸ್ಥರನ್ನು ಭೇಟಿಯಾಗಲು ಹೋಗುತ್ತಿದ್ದ ವೇಳೆ ಗುಂಪೊಂದು ಹಲ್ಲೆ ನಡೆಸಿದೆ.
ಇದನ್ನು ಓದಿ: ಹಿಂದೂ ಮತಗಳ ಕ್ರೊಢೀಕರಣಕ್ಕಾಗಿ ಗೋಮಾಂಸ ನಿಷೇಧದ ಹುನ್ನಾರ
ಮಸೀದಿಯೊಂದರ ಬಳಿ ಅಡ್ಡಗಟ್ಟಿದ ಗುಂಪೊಂದು ದನದ ಮಾಂಸ ಸಾಗಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಆಹ್ಮದ್ ಖುರೇಷಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಗುಂಪಿಗೆ ಸಿಕ್ಕಿಕೊಂಡ ನಸೀಮ್ ಖುರೇಷಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಂತರ ಅದೇ ಗುಂಪು ಆತನನ್ನು ರಸೂಲ್ಪುರ್ ಪೊಲೀಸರಿಗೆ ಒಪ್ಪಿಸಿದ್ದರು.
ಘಟನೆಯಿಂದ ಅಘಾತಕ್ಕೆ ಒಳಗಾದ ನಸೀಮ್ ಸೋದರಳಿಯ ಫಿರೋಜ್ ಖುರೇಷಿ ಪೊಲೀಸರಿಗೆ ದೂರು ದಾಖಲಿಸಿದ್ದಾನೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳೀಯ ಸರಪಂಚ ಸುಶೀಲ್ಸಿಂಗ್ ಮತ್ತು ಇತರ ಇಬ್ಬರನ್ನು ಬಂಧಿಸಿ ವಿಚಾರಣೆ ನಡಸಿದ್ದಾರೆ.
ಇದನ್ನು ಓದಿ: ಜಾನುವಾರು ಹತ್ಯಾ ನಿಷೇಧ : ಕಾರ್ಪೋರೇಟ್ ಲೂಟಿಯನ್ನು ವಿಸ್ತರಿಸಿ ವೇಗಗೊಳಿಸುವ ಹುನ್ನಾರ
ಪರಾರಿಯಾಗಿರುವ ಮತ್ತಿತರ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿರುವ ಪೊಲೀಸ್ ಅಧಿಕಾರಿಗಳು ಮೃತ ವ್ಯಕ್ತಿ ದನದ ಮಾಂಸ ಸಾಗಿಸುತ್ತಿದ್ದರೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ತೀವ್ರ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಖುರೇಷಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ