ವೈದ್ಯರು – ದಾದಿಯರಿಗೆ ಶೇ. 55 ರಷ್ಟು ವೇತನ ಪರಿಷ್ಕರಣೆ: ದಿನೇಶ್ ಗುಂಡೂರಾವ್

ಬೆಂಗಳೂರು: ವೈದ್ಯರು ಮತ್ತು ದಾದಿಯರಿಗೆ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ ಶೇ. 55 ರಷ್ಟು ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ದಾದಿ

ನಗರದಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಯೋಜನೆಯಡಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ವೇತನವನ್ನು ಪರಿಷ್ಕರಿಸಲಾಗಿದೆ. ಈ ವೇತನ ಹೆಚ್ಚಳ ಹೊಸದಾಗಿ ನೇಮಕವಾಗುವ ಸಿಬ್ಬಂದಿಗೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ. ದಾದಿ

ಈಗಿರುವ ಸಿಬ್ಬಂದಿಗೆ ಇದೇ ವೇತನ ಮುಂದುವರೆಯಲಿದೆ. ಅವರು ಕೂಡ ಹೊಸ ವೇತನಕ್ಕೆ ಅರ್ಹರಾಗಬೇಕಾದರೆ, ಈಗಿರುವ ಸ್ಥಾನಕ್ಕೆ ರಾಜೀನಾಮೆ ನೀಡಿ, ಪುನಃ ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಿದಾಗ ಈಗಾಗಲೇ ಕೆಲಸ ಮಾಡಿದ ವೈದ್ಯರಿಗೆ ಹೊಸ ಹುದ್ದೆಗಳನ್ನು ನೀಡಲಾಗುತ್ತದೆ ಎಂಬ ಭರವಸೆಯನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದಾದಿ

ಇದನ್ನೂ ಓದಿ: ಇಬ್ಬರು ಉದ್ಯೋಗಿಗಳಿಂದ 2 ಕೋಟಿ ರೂ. ದರೋಡೆ; ಪೊಲೀಸ್ ಅಧಿಕಾರಿ ಬಂಧನ

ರಾಜ್ಯದಲ್ಲಿ ಈಗಾಗಲೇ ಒಟ್ಟು 9,041 ಹುದ್ದೆಗಳಿವೆ. ಇದರಲ್ಲಿ 1,398 ಎಂಬಿಬಿಎಸ್ ವೈದ್ಯರು, 899 ತಜ್ಞ ವೈದ್ಯರು ಹಾಗೂ 936 ಸ್ಟಾಫ್ ನರ್ಸ್‌ಗಳ ಹುದ್ದೆಗಳಿವೆ. ಇದರಲ್ಲಿ ಪ್ರಸ್ತುತವಾಗಿ 579 ಎಂಬಿಬಿಎಸ್ ವೈದ್ಯರು, 305 ತಜ್ಞ ವೈದ್ಯರು ಹಾಗೂ 936 ಸ್ಟಾಫ್ ನರ್ಸ್ ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ವೈದ್ಯಕೀಯ ಸಿಬ್ಬಂದಿಗೆ ವೇತನ ಕಡಿಮೆ ಇರುವ ಕಾರಣದಿಂದ, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದರೂ ವೈದ್ಯರು ಹಾಗೂ ನರ್ಸ್‌ಗಳು ಸರ್ಕಾರಿ ಆಸ್ಪತ್ರೆಗೆ ಬಂದು ಕೆಲಸ ಮಾಡುವುದಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಈ ಕಾರಣದಿಂದಲೇ ಕೇಂದ್ರ ಸರ್ಕಾರದ ಅನುದಾನದ ಒಳಗೆ ವೇತನ ಪರಿಷ್ಕರಣೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ. ಕಳೆದ ಎಂಟು ತಿಂಗಳಿಂದ ಈ ಕುರಿತು ಮನವಿ ಮಾಡುತ್ತಾ ಬಂದಿದ್ದು, ಇದೀಗ ಕೇಂದ್ರದಿಂದ ಒಪ್ಪಿಗೆ ಲಭಿಸಿದೆ ಎಂದರು.

ಈ ಹಿಂದೆ 46,895 ರಿಂದ 50,000 ರೂ.ಗಳವರೆಗೆ ವೇತನ ಪಡೆಯುತ್ತಿದ್ದ MBBS ವೈದ್ಯರು ಈಗ ತಿಂಗಳಿಗೆ 60,000 ರೂ.ಗಳನ್ನು ಪಡೆಯುತ್ತಾರೆ. ತಜ್ಞ ವೈದ್ಯರು 1,40,000 ರೂ.ಗಳನ್ನು ಪಡೆಯಲಿದ್ದಾರೆ, ಇದು ಹಿಂದಿನ 1,10,000 ರೂ.ಗಳಿಂದ 1,30,000 ರೂ.ಗಳಿಗೆ ಏರಿಕೆಯಾಗಿದೆ. 14,186 ರೂ.ಗಳಿಂದ 18,774 ರೂ.ಗಳವರೆಗೆ ಪಡೆಯುತ್ತಿದ್ದ ಸ್ಟಾಫ್ ನರ್ಸ್‌ಗಳಿಗೆ ಈಗ 22,000 ರೂ.ಗಳನ್ನು ಪಾವತಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಅನುಭವ ಹೊಂದಿರುವ ಅಭ್ಯರ್ಥಿಗಳು ನೇಮಕಾತಿಯ ಸಮಯದಲ್ಲಿ ಪ್ರತಿ ವರ್ಷದ ಅನುಭವಕ್ಕೆ ಹೆಚ್ಚುವರಿಯಾಗಿ 2.5% ವೇತನ ಹೆಚ್ಚಳವನ್ನು ಪಡೆಯುತ್ತಾರೆ.

ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಮಕ್ಕಳ ವೈದ್ಯಕೀಯ, ಅರಿವಳಿಕೆ, ಜನರಲ್ ಮೆಡಿಸಿನ್, ಮೂಳೆಚಿಕಿತ್ಸೆ, ಶಸ್ತ್ರಚಿಕಿತ್ಸೆ ಮತ್ತು ನೇತ್ರವಿಜ್ಞಾನದಂತಹ ವಿಭಾಗಗಳಲ್ಲಿನ ಪ್ರಮುಖ ಕ್ಲಿನಿಕಲ್ ತಜ್ಞರಿಗೆ ನಿಗದಿತ ಆರಂಭಿಕ ವೇತನವನ್ನು 1,40,000 ರೂ.ಗಳಿಗೆ ನಿಗದಿಪಡಿಸಲಾಗಿದೆ ಎಂದು ಗುಂಡೂ ರಾವ್ ಮಾಹಿತಿ ನೀಡಿದ್ದಾರೆ.

ಈ ಪರಿಷ್ಕರಣೆಯು NHM ಹುದ್ದೆಗಳಿಗೆ ಹೆಚ್ಚಿನ ವೈದ್ಯರು ಮತ್ತು ನರ್ಸ್‌ಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ, ಇದು ರಾಜ್ಯಾದ್ಯಂತ ಆರೋಗ್ಯ ಸೇವೆಗಳನ್ನು ಬಲಪಡಿಸುತ್ತದೆ ಎಂದು ಗುಂಡೂ ರಾವ್ ಹೇಳಿದರು. “SNCUಗಳು, ICUಗಳು ಮತ್ತು ಇತರ ನಿರ್ಣಾಯಕ ಆರೈಕೆ ಘಟಕಗಳಲ್ಲಿ ಉತ್ತಮ ಸಿಬ್ಬಂದಿ ನೇಮಕವು ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳು, ಶಸ್ತ್ರಚಿಕಿತ್ಸೆಗಳು ಮತ್ತು ಸರ್ಕಾರಿ ಸೌಲಭ್ಯಗಳಲ್ಲಿ ಒಟ್ಟಾರೆ ರೋಗಿಗಳ ಆರೈಕೆಯನ್ನು ಸುಧಾರಿಸುವ ನಿರೀಕ್ಷೆಯಿದೆ” ಎಂದು ಸಚಿವರು ಹೇಳಿದರು.

ರಾಜ್ಯದ ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ವೈದ್ಯರು ಹಾಗೂ ಇತರೆ ವೈದ್ಯಕೀಯ ಸಹಾಯಕ ಸಿಬ್ಬಂದಿ ಸೇರಿ 28,250ಕ್ಕೂ ಅಧಿಕ ಸಿಬ್ಬಂದಿ ಕಾರ್ಯು ನಿರ್ವಹಿಸುತ್ತಿದ್ದಾರೆ. ಆದರೆ, ಈ ಎಲ್ಲಾ ಸಿಬ್ಬಂದಿಗೆ ಕಳೆದ 3 ತಿಂಗಳಿಂದ ವೇತನವನ್ನೇ ಪಾವತಿ ಮಾಡಿಲ್ಲ. ಇದರಿಂದ ಎಲ್ಲ ವೈದ್ಯಕೀಯ ಸಿಬ್ಬಂದಿ ವೇತನ ಸಿಗದೇ ಕುಟುಂಬ ನಿರ್ವಹಣೆಗೆ ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ಈ ಸಮಸ್ಯೆ ಬಗೆ ಹರಿಸಲಾಗುವುದು ಎದು ಭರವಸೆ ನೀಡಿದರು.

ಇದನ್ನೂ ನೋಡಿ: ಪ್ರೀತಿಪದಗಳ ಸಹಯಾನಿ ಡಾ. ವಿಠ್ಠಲ ಭಂಡಾರಿ ನೆನಪು Janashakthi Media

Donate Janashakthi Media

Leave a Reply

Your email address will not be published. Required fields are marked *