ಬೆಂಗಳೂರು: ಎಂಇಎಸ್ ನಿಷೇಧ ಮಾಡುವುದಕ್ಕೆ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ. ಕರ್ನಾಟಕ ಬಂದ್ ಹಿಂಪಡೆಯುವಂತೆ ಸಿಎಂ ಕೋರಿಕೊಂಡರು. ಸಿಎಂ ಮನವಿಯ ಮೇರೆಗೆ ನಾವೆಲ್ಲಾ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಒಕ್ಕೂಟದ ಮುಖಂಡರು ತೀರ್ಮಾನ ಕೈಗೊಂಡು, ಹೊಸ ವರ್ಷಕ್ಕೆ ತೊಂದರೆಯಾಗಲಿದೆ, ಅದು ಸರಿಯಿಲ್ಲ ಎಂಬುದಾಗಿ ತೀರ್ಮಾನ ಕೈಗೊಂಡ ಕಾರಣ, ನಾಳಿನ ಕರ್ನಾಟಕ ಬಂದ್ ಮುಂದೂಡಿಕೆ ಮಾಡಲಾಗಿರೋದಾಗಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.
ನಾಳಿನ ಕರ್ನಾಟಕ ಬಂದ್ ವಾಪಾಸ್ ಪಡೆಯುವಂತೆ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡಪರ ಸಂಘಟನೆಗಳ ಮುಖಂಡರಿಗೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದರು. ಅಲ್ಲದೇ ಈ ವಿಚಾರವಾಗಿ ಚರ್ಚಿಸೋದ್ಕಕೆ ಭೇಟಿ ಮಾಡುವಂತೆಯೂ ತಿಳಿಸಿದ್ದರು. ಈ ಮನವಿಗೆ ಒಪ್ಪಿದ್ದಂತ ವಾಟಾಳ್ ನಾಗರಾಜ್ ಕನ್ನಡ ಪರ ಸಂಘಟನೆಗಳ ನಾಯಕರಿಗೆ ಕೆಲವು ಕಂಡೀಷನ್ ಹಾಕಿ, ಸಿಎಂ ಭೇಟಿಗೆ ಒಪ್ಪಿ ತೆರಳಿದ್ದರು.
ವಾಟಾಳ್ ನಾಗರಾಜ್ ಅವರು ಜನವರಿ 20ರ ಒಳಗಾಗಿ ಎಂಇಎಸ್ ನಿಷೇಧಿಸುವಂತ ನಿರ್ಧಾರವನ್ನು ಸಿಎಂ ಪ್ರಕಟಿಸಬೇಕು. ಒಂದು ವೇಳೆ ಈ ನಿರ್ಧಾರ ತೆಗೆದುಕೊಳ್ಳದೇ ಇದ್ದರೇ ಜನವರಿ 22ರಂದು ಕರ್ನಾಟಕ ಬಂದ್ ನಡೆಸಲಾಗುತ್ತದೆ. ಅದಕ್ಕೆ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಕೆ.ಆರ್.ಕುಮಾರ್, ಮಂಜುನಾಥ್ ಬೆಂಬಲಿಸಿದ್ರೇ ಮಾತ್ರ ಸಿಎಂ ಭೇಟಿಗೆ ಬರೋದಾಗಿ ತಿಳಿಸಿದ್ದರು.
ಈ ಮಾತಿಗೆ ಕನ್ನಡಪರ ಸಂಘಟನೆಗಳ ಮುಖಂಡರು ಒಪ್ಪಿದ್ದರಿಂದ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗೋದಕ್ಕೆ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡಪರ ಸಂಘಟನೆಗಳ ಮುಖಂಡರು ತೆರಳಿದ್ದರು. ಇಲ್ಲಿ ಸಿಎಂ ಎದುರು ಮಹತ್ವದ ವಿಚಾರಗಳನ್ನು ಚರ್ಚಿಸಿಲಾಗಿದೆ. ಎಂಇಎಸ್ ಸಂಘಟನೆ ನಿಷೇಧಿಸುವಂತೆಯೂ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದಂತ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಅವರು, ಎಂಇಎಸ್ ನಿಷೇಧ ಮಾಡುವುದಕ್ಕೆ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ. ಕರ್ನಾಟಕ ಬಂದ್ ಹಿಂಪಡೆಯುವಂತೆ ಸಿಎಂ ಕೋರಿಕೊಂಡರು. ಸಿಎಂ ಮನವಿಯ ಮೇರೆಗೆ ನಾವೆಲ್ಲಾ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಒಕ್ಕೂಟದ ಮುಖಂಡರು ತೀರ್ಮಾನ ಕೈಗೊಂಡು, ಹೊಸ ವರ್ಷಕ್ಕೆ ತೊಂದರೆಯಾಗಲಿದೆ, ಅದು ಸರಿಯಿಲ್ಲ ಎಂಬುದಾಗಿ ತೀರ್ಮಾನ ಕೈಗೊಂಡ ಕಾರಣ, ನಾಳಿನ ಕರ್ನಾಟಕ ಬಂದ್ ಮುಂದೂಡಿಕೆ ಮಾಡಲಾಗಿರೋದಾಗಿ ತಿಳಿಸಿದರು.
ನನ್ನ ಜೀವನದಲ್ಲಿ ಇಂದು ಬಂದಂತ ಒತ್ತಡಗಳು, ಈ ಹಿಂದೆ ಎಂದಿಗೂ ಬಂದಿರಲಿಲ್ಲ. ಅನೇಕರು ನನ್ನ ಬಗ್ಗೆ ಟೀಕೆಗಳನ್ನು ಮಾಡಿದ್ರು. ಅವರದ್ದೇ ಆದಂತ ಮಾತುಗಳಲ್ಲಿ ಆಡಿದ್ರು. ಇವರು ಸಂಪೂರ್ಣವಾಗಿ ಬಂದ್ ಮಾಡೋದಕ್ಕೆ ಹೊರಟಿದ್ದಾರೆ. ಈ ಬಂದ್ ತೊಂದರೆಯಾಗುತ್ತೆ ಅಂತ ಹೇಳಿದ್ರು. ಚಲನಚಿತ್ರ ವಾಣಿಜ್ಯ ಮಂಡಳಿಯವರು ಧ್ವನಿಯೆತ್ತಿ ಬಂದ್ ಗೆ ಬೆಂಬಲವಿಲ್ಲ ಎಂಬುದಾಗಿ ಹೇಳಿದ್ರು. ಈ ಎಲ್ಲಾ ನಾನಾ ಕಾರಣದಿಂದಾಗಿ ನಾಳಿನ ಕರ್ನಾಟಕ ಬಂದ್ ಮುಂದೂಡಿಕೆ ಮಾಡಲಾಗಿದೆ ಎಂಬುದಾಗಿ ಘೋಷಿಸಿದರು.
Waiting for january 20 !!!!