ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಮೂಲಕ ಬಿ.ಎಸ್‌ಸಿ ಕೃಷಿ ಕೋರ್ಸ್ ಸೀಟುಗಳನ್ನು ಪಡೆಯಲು ಸಲ್ಲಿಕೆಯಾಗಿದ್ದ 5,288 ಅರ್ಜಿಗಳನ್ನು ತಿರಸ್ಕರಿಸಿದೆ.
2025-26ನೇ ಸಾಲಿನಲ್ಲಿ ಕೃಷಿ ಕೋಟಾದಡಿ ಸೀಟು ಪಡೆಯಲು 18,244 ಅರ್ಜಿಗಳು ಸಲ್ಲಿಕೆಯಾಗಿದ್ದೂ, ಕೃಷಿ ಕೋಟಾದ ಸೀಟುಗಳನ್ನು ಪಡೆಯಲು ಅಗತ್ಯವಾದ ದಾಖಲೆಗಳನ್ನು ಸಲ್ಲಿಸದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
ಇದನ್ನೂ ಓದಿ: ಹಿಮಾಚಲ ಪ್ರದೇಶ ಹೈಕೋರ್ಟ್‌ನ ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್
ಕೃಷಿ ಪ್ರಮಾಣಪತ್ರ, ವಂಶವೃಕ್ಷ, ವಿದ್ಯಾರ್ಥಿ ಅವಿಭಜಿತ ಕುಟುಂಬಕ್ಕೆ ಸೇರಿದ್ದರೆ ಅಂತಹ ಕುಟುಂಬದ ಸದಸ್ಯರ ಮಾಹಿತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಕೃಷಿಯೇ ಕುಟುಂಬದ ಏಕೈಕ ಆದಾಯದ ಮೂಲ ಎಂದು ಘೋಷಣಾ ಪ್ರಮಾಣಪತ್ರ ಸೇರಿದಂತೆ ಕೆಲ ದಾಖಲೆಗಳನ್ನು ಸಲ್ಲಿಸಬೇಕು.
ಶೇ 50ರಷ್ಟು ಕೃಷಿ ಕೋಟಾದ ಸೀಟುಗಳನ್ನು ಪಡೆಯಲು ಪೋಷಕರ ವಾರ್ಷಿಕ ಆದಾಯ ಮಿತಿ ₹8 ಲಕ್ಷ ಮೀರಬಾರದು. ಈ ದಾಖಲೆಗಳನ್ನು ಸಿಇಟಿ ಅರ್ಜಿ ಜತೆಗೇ ಸಲ್ಲಿಸಬೇಕು.
ಪ್ರಾಥಮಿಕ ಪರಿಶೀಲನೆಯ ನಂತರ ಕೆಇಎ ಎಲ್ಲ ಅರ್ಜಿಗಳನ್ನು ಪ್ರಾಯೋಗಿಕ ಪರೀಕ್ಷೆಗಾಗಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯಕ್ಕೆ ಕಳುಹಿಸುತ್ತದೆ. ಆಗ ಎರಡನೇ ಹಂತದ ಪರಿಶೀಲನೆ ನಡೆಸುತ್ತದೆ. ಈ ಸಮಯದಲ್ಲಿ ಹಲವು ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಕೆಇಎ ಹೇಳಿದೆ.
ಇದನ್ನೂ ನೋಡಿ: ಪಹಲ್‍ಗಾಂಮ್ ಹತ್ಯಾಕಾಂಡ| ಕುಟುಂಬದವರನ್ನು ಕಳೆದುಕೊಂಡವರ ಪ್ರಶ್ನೆಗಳಿಗೆ ಉತ್ತರಿಸುವಿರಾ? Janashakthi Media