ಬಳ್ಳಾರಿ : ಬಳ್ಳಾರಿಯ ಜಿಲ್ಲೆಯಲ್ಲಿ ಗ್ರಾ.ಪಂ ಸದಸ್ಯ ಸ್ಥಾನಗಳನ್ನು ಹರಾಜ್ ಮಾಡಿದ ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬೈಲೂರು ಗ್ರಾಮದ 13 ಸದಸ್ಯರ ಸ್ಥಾನಗಳು ಹರಾಜ್ ಆಗಿವೆ. 51 ಲಕ್ಷದ 20 ಸಾವಿರ ರೂಪಾಯಿಗಳಿಗೆ ಹರಾಜ್ ಮಾಡಲಾಗಿದ್ದು, 13 ಗ್ರಾಮ ಪಂಚಾಯತ್ ಸದಸ್ಯ ಸ್ಥಾನ ಹರಾಜಾಗಿವೆ. ಒಟ್ಟು 26 ಸದಸ್ಯ ಸ್ಥಾನ ಹೊಂದಿರೋ ಸಿಂದಿಗೇರಿ ಗ್ರಾ.ಪಂ ನಲ್ಲಿ, ಸಿಂದಿಗೇರಿ ಗ್ರಾ.ಪಂ ಗೆ ಸೇರಿದ ಬೈಲೂರು ಗ್ರಾಮದ ಎಲ್ಲ ಸದಸ್ಯ ಸ್ಥಾನಗಳು ಹರಾಜು ಆಗಿವೆ. 2 ರಿಂದ 5.7 ಲಕ್ಷದ ವರೆಗೂ ಹಣ ಪಾವತಿಸಿ ಅವಿರೋಧವಾಗಿ ಪಂಚಾಯತ್ ಸದಸ್ಯತ್ವ ಪಡೆದಿದ್ದಾರೆ.
ಬೈಲೂರು ಗ್ರಾಮದ ಮಾರೆಮ್ಮನ ಗುಡಿ ಮುಂದೆ ರಾತ್ರೋ ರಾತ್ರಿ ಹರಾಜು ಪ್ರಕ್ರಿಯೆ ನಡೆದಿದೆ. ಇದು ಪ್ರಜಾಪ್ರಬುತ್ವಕ್ಕೆ ಮಾಡಿದ ಅಪಮಾನವಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಒಟ್ಟಾರೆ ಈ ಪ್ರಕ್ರೀಯೆಯಲ್ಲಿ ಭಾಗವಹಿಸಿದವರ ಮೇಲೆ ಸ್ವಯಂ ದೂರು ದಾಖಲಿಸುವಂತೆ ತಹಶೀಲ್ದಾರ ರಾಘವೇಂದ್ರ ರಾವ್ ರವರು ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ.
ಇದನ್ನು ನೋಡಿ : https://fb.watch/2dO_OR35wG/
ಮೊನ್ನೆ ಇಂತಹದ್ದೆ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿತ್ತು ಚುನಾವಣಾ ಅಧಿಕಾರಿಗಳ ನಿರ್ಲಕ್ಷ ಹಾಗೂ ಚುನಾವಣೆಯ ಬಗ್ಗೆ ಜನರಿಗಿರುವ ಅಜ್ಞಾನವನ್ನು ಇದು ಪ್ರದರ್ಶಿಸುತ್ತಿದ್ದು, ಜನರನ್ನು ಚುನಾವಣಾ ಪ್ರಕ್ರೀಯೆ ಕುರಿತು ಜಾಗೃತಿಗೊಳಿಸುವ ಅಗತ್ಯತೆ ಇದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಆರ್. ಎಸ್.ಬಸವರಾಜ ಒತ್ತಾಯಿಸಿದ್ದಾರೆ.