ಗೃಹಮಂಡಳಿ ವತಿಯಿಂದ 500 ಎಕರೆಯಲ್ಲಿ ನೂತನ ಬಡಾವಣೆ (ಮಿನಿ ಟೌನ್ ಶಿಪ್)

ಬೆಂಗಳೂರು : ಕರ್ನಾಟಕ ಗೃಹಮಂಡಳಿ ವತಿಯಿಂದ ರಾಜಧಾನಿ ಬೆಂಗಳೂರು ಹೊರವಲಯದಲ್ಲಿ 500 ಎಕರೆ ಪ್ರದೇಶದಲ್ಲಿ ನೂತನ ಬಡಾವಣೆ (ಮಿನಿ ಟೌನ್ ಶಿಪ್ ) ನಿರ್ಮಾಣ ಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಗೃಹಮಂಡಳಿ

ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿ ಹಾಗೂ ರಾಮನಗರ ಜಿಲ್ಲೆ ಬಿಡದಿ ಹೋಬಳಿ ಯ ಏಳು ಗ್ರಾಮಗಳ 500 ಎಕರೆ ಪ್ರದೇಶದಲ್ಲಿ 50:50 ಅನುಪಾತದಲ್ಲಿ ಬಡಾವಣೆ ನಿರ್ಮಾಣ ವಾಗಲಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ಗೃಹಮಂಡಳಿ

ಇದನ್ನು ಓದಿ : ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ಗೆ ಅಭ್ಯರ್ಥಿಗಳು ಸಿಗುತ್ತಿಲ್ಲ- ಬಸವರಾಜ ಬೊಮ್ಮಾಯಿ

1066.50ಕೋಟಿ ರೂ. ಮೊತ್ತದ ಯೋಜನೆಗೆ ರೈತರು ಜಮೀನು ನೀಡಲು ರೈತರು ಒಪ್ಪಿಗೆ ಪತ್ರ ನೀಡಿದ್ದಾರೆ. ಈ ಯೋಜನೆ ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿ ಯಿಂದ 5.5 ಕಿ. ಮೀ. ವ್ಯಾಪ್ತಿಯಲ್ಲಿ ಬರಲಿದೆ. ರೈತರ ಜತೆ ಪಾಲುದಾರಿಕೆ ಯಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಸತಿ ಯೋಜನೆ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದ್ದಾರೆ.

ಈ ಹಿಂದೆ ಕೆಂಗೇರಿ ಹೋಬಳಿ ಹಾಗೂ ಬಿಡದಿ ಹೋಬಳಿಯಲ್ಲಿ ನಿವೇಶನ ಬೇಡಿಕೆ ಸಮೀಕ್ಷೆ ಮಾಡಿದ್ದು, 2666 ಅರ್ಜಿಗಳು ಬಂದಿದ್ದು, ಈ ಹಿಂದೆ ನಿವೇಶನ ಬಯಸಿ ಸಲ್ಲಿಸಿರುವ 3881 ಅರ್ಜಿಗಳು ಕೂಡಾ ಹಂಚಿಕೆಗೆ ಬಾಕಿ ಇದ್ದು ಪ್ರಸ್ತಾಪಿತ ಯೋಜನೆಗೆ ಪರಿಗಣಿಸಲಾಗುವುದು ಎಂದು ವಿವರಿಸಿದ್ದಾರೆ.

ಇದನ್ನು ನೋಡಿ : ಸುಳ್ಳು ಹೇಳುವ ಜ್ಯೋತಿಷ್ಯವನ್ನು ದಿಕ್ಕರಿಸಿವಿಜ್ಞಾನವನ್ನು ನಂಬಿ, ಬೆಳಸಿ – ಎಂಆರ್‌ಎನ್‌ ಮೂರ್ತಿ Janashakthi Media

Donate Janashakthi Media

Leave a Reply

Your email address will not be published. Required fields are marked *