ಬೆಂಗಳೂರು | ಸಂಚಾರ ದಂಡ ಪಾವತಿ ಶೇ 50ರಷ್ಟು ರಿಯಾಯತಿ ಆಫರ್  31,87,06,850 ರೂ. ದಂಡ ಸಂಗ್ರಹಣೆ

ಬೆಂಗಳೂರು: ಬೆಂಗಳೂರು ಸಂಚಾರ ಪೊಲೀಸ್​​ ಇಲಾಖೆಯಲ್ಲಿ ಸೆಪ್ಟೆಂಬರ್​​​​​​​ 2ರ ಅಂತ್ಯಕ್ಕೆ ಒಟ್ಟು 11,32,991 ಪ್ರಕರಣಗಳು ಇತ್ಯರ್ಥವಾಗಿದ್ದು,  ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿ ಶೇ 50ರಷ್ಟು ರಿಯಾಯಿತಿ ಆಫರ್​​ನಲ್ಲಿ   31,87,06,850 ರೂ. ದಂಡ ಸಂಗ್ರಹಣೆಯಾಗಿದೆ ಎಂದು ಇಲಾಖೆ ತಿಳಿಸಿದೆ. ಬೆಂಗಳೂರು

ದಂಡ ಪಾವತಿಗೆ ನೀಡಲಾಗಿರುವ ರಿಯಾಯಿತಿಯು ಆಗಸ್ಟ್​ 23ರಿಂದ ಆರಂಭವಾಗಿದ್ದು, ಸೆಪ್ಟೆಂಬರ್​​ 12ರವರೆಗೆ ಇರಲಿದೆ. ಆದರೆ, ಈ ರಿಯಾಯತಿಯು 2023ರ ಫೆಬ್ರವರಿ 11ರೊಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರವೇ ಅನ್ವಯವಾಗಲಿದೆ. ಬಿಟಿಪಿ ಅಸ್ತ್ರಂ, ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್​​​ಪಿ) ಆ್ಯಪ್, ಬೆಂಗಳೂರು ಸಂಚಾರ ಪೊಲೀಸ್​​ ಅಥವಾ ಕರ್ನಾಟಕ ಒನ್ ವೆಬ್‌ಸೈಟ್‌ನಲ್ಲಿ ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಿ ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ತಿಳಿದುಕೊಳ್ಳಬಹುದು. ಬಳಿಕ ಪಾವತಿಸಲು ಇಚ್ಚಿಸುವ ದಂಡದ ಮೊತ್ತವನ್ನು ಆಯ್ಕೆ ಮಾಡಿದರೆ, ರಿಯಾಯಿತಿ ಮೊತ್ತದ ಪಾವತಿಯ ಆಯ್ಕೆ ಲಭ್ಯವಾಗುತ್ತದೆ.

ಇದನ್ನೂ ಓದಿ: ಮುಂಬೈ|ಮರಾಠರಿಗೆ ಕುಣಬಿ ಜಾತಿ ಪ್ರಮಾಣಪತ್ರ ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ ; ನಾವು ಗೆದ್ದುಬಿಟ್ಟೆವು’ ಜರಾಂಗೆ ಘೋಷಣೆ

 ಇದಲ್ಲದೇ ಹತ್ತಿರದ ಸಂಚಾರ ಪೊಲೀಸ್​​ ಠಾಣೆಗಳು, ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರಕ್ಕೆ ತೆರಳಿ ವಾಹನದ ನೋಂದಣಿ ಸಂಖ್ಯೆಯ ವಿವರಗಳನ್ನು ನೀಡುವ ಮೂಲಕವೂ ಸಹ ದಂಡ ಪಾವತಿಸಬಹುದು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ದಂಡ ಪಾವತಿಗೆ ಶೇ50 ರಷ್ಟು ರಿಯಾಯಿತಿ ಘೋಷಿಸಿದ ಮೊದಲ ವಾರದಲ್ಲಿ ಬರೋಬ್ಬರಿ 24 ಕೋಟಿ ರೂ. ದಂಡ ಸಂಗ್ರಹವಾಗಿತ್ತು. ಆಗಸ್ಟ್ 30 ರ ಅಂತ್ಯಕ್ಕೆ ಒಟ್ಟು 8,52,201 ಪ್ರಕರಣಗಳು ಇತ್ಯರ್ಥವಾಗಿತ್ತು. ಒಟ್ಟು 24,00,06,850 ರೂ. ದಂಡ ಸಂಗ್ರಹಣೆಯಾಗಿತ್ತು. ಅದಕ್ಕೂ ಮೊದಲು ಎರಡೇ ದಿನದಲ್ಲಿ ಒಟ್ಟು 2,56,102 ಪ್ರಕರಣಗಳು ಇತ್ಯರ್ಥವಾಗಿದ್ದವು. ಜೊತೆಗೆ, 7,19,51,500 ರೂ. ದಂಡ ಸಂಗ್ರಹವಾಗಿತ್ತು.

ಇ-ಚಲನ್ ಎಂಬುದು ಸಂಚಾರಿ ನಿಯಮಗಳ ಉಲ್ಲಂಘನೆ ಹಾಗೂ ದಂಡದ ವಿವರಗಳನ್ನೊಳಗೊಂಡ ಡಿಜಿಟಲ್ ದಾಖಲೆಯಾಗಿದೆ. ಇದನ್ನು ಪಡೆಯಲು ಸಂಚಾರಿ ಪೊಲೀಸ್ ಸಿಬ್ಬಂದಿ ನಿರ್ದಿಷ್ಟ ಸ್ವೈಪಿಂಗ್ ಸಾಧನವನ್ನು ಹೊಂದಿದ್ದಾರೆ.

ಇದನ್ನೂ ನೋಡಿ: ವಚನಾನುಭವ 33 | ಉದಕ ಮಜ್ಜನವಲ್ಲ ಪತ್ರೆ ಪೂಜೆಯಲ್ಲ Janashakthi Media

Donate Janashakthi Media

Leave a Reply

Your email address will not be published. Required fields are marked *