ಕಲಬುರಗಿ: ಕೆಂಪು ಮಣ್ಣು ತುಂಬಿಕೊಂಡು ರಾಜಶ್ರೀ ಸಿಮೆಂಟ್ ಕಾರ್ಖಾನೆ ಒಳಗಡೆ ತೆರಳುತ್ತಿದ್ದ ಖಾಸಗಿ ಲಾರಿಯೊಂದು ಬಾಲಕ ಮೇಲೆ ಹರಿದು ಸ್ಥಳದಲ್ಲೇ ಐದು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಮಳಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಚಿತ್ತಾಪೂರ ತಾಲೂಕಿನ ಅಲೂರ (ಬಿ) ಗ್ರಾಮದ ಕೂಲಿ ಕಾರ್ಮಿಕನ ಮಗು ಅಯ್ಯಪ್ಪ ಬಸವರಾಜ (5) ಸ್ಥಳದಲ್ಲೇ ಮೃತಪಟ್ಟಿರುವ ಬಾಲಕ. ಮೂರು ತಿಂಗಳಿಂದ ರಾಜಶ್ರೀ ಸಿಮೆಂಟ್ ಕಾರ್ಖಾನೆ ಮೆನ್ ಗೆಟ್ ಪಕ್ಕದಲ್ಲೇ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಇದನ್ನು ಓದಿ:ಬೆಂಗಳೂರು| ರೈಲಿನಲ್ಲಿ ಹೋಳಿ ಆಚರಣೆ; ಇಬ್ಬರ ಬಂಧನ
ಸೋಮವಾರ ಬೆಳಗ್ಗೆ 7.30ಕ್ಕೆ ಹೊರಗಡೆ ತೆರಳಿ ಮನೆಗೆ ಬರುವ ವೇಳೆ ಕೆಂಪು ಮಣ್ಣಿನ ಖಾಸಗಿ ಲಾರಿ ಬಾಲಕನ ಮೇಲೆ ಹರಿದು ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರಾಜಶ್ರೀ ಸಿಮೆಂಟ್ ಕಾರ್ಖಾನೆ ಮೆನ್ ಗೆಟ್ ಬಳಿ ಸುಮಾರು ವರ್ಷಗಳಿಂದ ರಸ್ತೆ ಹದಗೆಟ್ಟು ಸಂಪೂರ್ಣ ಹಾಳಾಗಿದೆ, ಮೂರ್ನಾಲ್ಕು ಜೀವಗಳ ಮ್ರತಪಟ್ಪಿದ್ದಾರೆ ಎಂದು ಮಳಖೇಡ ಗ್ರಾಪಂ ಸದಸ್ಯ ಉಮೇಶ್ ಪಾಂಡುಸಿಂಗ್ ಚೌವ್ಹಾಣ್ ಅವರು ಆರೋಪಿಸಿದ ಅವರು ಸಂಚರಿಸುವ ರಸ್ತೆ ಬೇರೆಡೆ ಸ್ಥಾಳಾಂತರಿಸಬೇಕೆಂದು ಆಗ್ರಹಿಸಿದ್ದಾರೆ.
ಇದನ್ನು ಓದಿ:ಶ್ರೀಗಂಧ ಕಳ್ಳತನ -ಮಾಲು ಸಮೇತ ಮೂವರ ಬಂಧನ
ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ: ಮಳಖೇಡ ತಾಂಡದ ಸ್ಥಳೀಯರು ರಾಜಶ್ರೀ ಸಿಮೆಂಟ್ ಕಾರ್ಖಾನೆ ಮೆನ್ ಗೆಟ್ ಮುಂದೆ ಬಾಲಕನ ಶವವಿಟ್ಟು ರಾಜಶ್ರೀ ಸಿಮೆಂಟ್ ಕಾರ್ಖಾನೆ ವಿರುದ್ಧ ಪ್ರಕರಣ ದಾಖಲಿಸಿ, 40 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಕಾರ್ಖಾನೆಯಲ್ಲಿ ಉದ್ಯೋಗ ನೀಡಬೇಕೆಂದು ಪಟ್ಟು ಹಿಡಿದು ಬೆಳಗ್ಗೆಯಿಂದ ಪ್ರತಿಭಟನೆ ನಡೆಸಿದ್ದಾರೆ.
ಸ್ಥಳಕ್ಕೆ ಚಿಂಚೋಳಿ ಡಿವೈಎಸ್ಪಿ ಸಂಗಮನಾಥ ಹಿರೇಮಠ್, ಸೇಡಂ ಪಿಎಸ್ಐ ಹಾಗೂ ಸಂಘಟನೆ ನಾಯಕರು ಉಪಸ್ಥಿತರಿದ್ದಾರೆ.