ಕಾರ್ಬೋಪುರಾನ್‌ ಕೀಟನಾಶಕದಿಂದಲೇ 5 ಹುಲಿಗಳ ಸಾವು

ಚಾಮರಾಜನಗರ: ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಹೂಗ್ಯಂ ಅರಣ್ಯ ಪ್ರದೆಶದಲ್ಲಿ ಐದು ಹುಲಿಗಳ ಅಸಹಜ ಸಾವಿಗೆ ವಿಷಕಾರಿ ಕೀಟನಾಶಕವೇ ಕಾರಣವೇಂದು ಪ್ರಯೊಗಾಲಯದ ವರದಿ ದೃಢಪಡಿಸಿದೆ. ಕೀಟನಾಶಕ

ಗಾಜನೂರು ಸಮೀಪದ ಮಿಣ್ಯಂ ಅರಣ್ಯದಲ್ಲಿ ಹಸುವನ್ನುಕೊಂದಿದ್ದ ಹುಲಿಯನ್ನು ಸಾಯಿಸಲು ಹಸುವಿನ ಕಳೆಬರದ ಮೇಲೆ ಸಿಂಪಡಿಸಿದರು ಹಸುವನ್ನು ತಿಂದ ಹುಲಿ ಮರಿಗಳು ಕ್ಷಣಾಧರ್ಯದಲ್ಲಿ ಮೃತಪಟ್ಟಿದೆ. ತಾಯಿ ಹುಲಿ ನರಳಾಡಿ ತುಸು ಸಮಯದ ಬಳಿಕ ಮೃತಪಟ್ಟಿರಬಹುದೆಂದು ಅರಣ್ಯಾದಿಕಾರಿಗಳು  ಹೇಳಿದ್ದಾರೆ.

ಇದನ್ನೂ ಓದಿ: ಕಿಟ್ಟಿ ಪಾರ್ಟಿ ಆಯೋಜಿಸಿ 50 ಕೋಟಿ ವಂಚನೆ: ನಕಲಿ ಲಾಯರ್ ಬಂಧನ

ಈ ಬಗ್ಗೆ ಚಾಮರಾಜನಗರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹಿರಲಾಲ್‌ ಮಾಹಿತಿ ನೀಡಿ, ಹುಲಿಗಳ ಸಾವಿಗೆ ಕಾರಣ ತಿಳಿಯಲು ಅಂಗಾಂಗದ ಭಾಗವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಹುಲಿಗಳ ಸಾವಿಗೆ ಕಾಬೊರ್ನಪುರಾನ್‌ ಎಂಬ ವಿಷಕಾರಿ ಕೀಟ ನಾಶಕ ಕಾರಣವೆಂದು ತಿಳಿದು ಬಂದಿದೆ. ಹಸುವಿನ ಮೃತದೆಹದ ಮೆಲೆ ಕಾರ್ಬೋಪುರಾನ್‌ ಸಿಂಪಡಿಸಿರುವುದು ದೃಡವಾಗಿದೆ ಎಂದು ತಿಳಿಸಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರವಿಷಪ್ರಾಶನವೇ ಹುಲಿಗಳ ಸಾವಿಗೆಕಾರಣ ಎಂದು ಶಂಕಿಸಲಾಗಿದೆ. ಎಂಬ ಮಾಹಿತಿ ನಮಗೆ ಸಿಕ್ಕಿದೆ. ಸತ್ಯಾಂಶ ಅರಣ್ಯ ಸಂರಕ್ಷಣಾಧಿಕಾರಿಗಳ  ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಇದನ್ನೂ ನೋಡಿ: ಗ್ರಾಮ ಸಂಕಲ್ಪ ಸಮಾವೇಶ | ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಧರಣಿಯ ನೇರಪ್ರಸಾರ.

Donate Janashakthi Media

Leave a Reply

Your email address will not be published. Required fields are marked *