ಗುಲ್ಬರ್ಗ ವಿಶ್ವವಿದ್ಯಾಲಯ ಮೇಲೆ ಲೋಕಾಯುಕ್ತದ 5 ತಂಡಗಳು ದಾಳಿ

ಲಬುರಗಿ: ಇಂದು ಗುರುವಾರ, ಲೋಕಾಯುಕ್ತದ ಐದು ತಂಡಗಳು ಒಂದಿಲ್ಲೊಂದು ಹಗರಣ ಹಾಗೂ ಆರೋಪಗಳಿಂದ ಸದಾ ಸುದ್ದಿಯಲ್ಲಿರುವ ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯ ಮೇಲೆ ದಾಳಿ ನಡೆಸಿದೆ.

ವಿದ್ಯಾರ್ಥಿಗಳಿಗೆ ಅಂಕಪಟ್ಟಿ‌ ನೀಡಲು ವಿನಾಕಾರಣ ವಿಳಂಬ, ನಕಲು ಪ್ರಮಾಣ ಪತ್ರ ನೀಡಿಕೆ, ಎಲ್ಲದಕ್ಕೂ ಲಂಚ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಬಿ.ಕೆ.‌ಉಮೇಶ ನೇತೃತ್ವದಲ್ಲಿ ಏಕಕಾಲಕ್ಕೆ ಐದು ತಂಡಗಳೊಂದಿಗೆ ದಾಳಿ ನಡೆಸಲಾಗಿ ಪರಿಶೀಲನೆ ನಡೆಸಲಾಗುತ್ತಿದೆ.‌

ಹಾಜರಿ ಪುಸ್ತಕ, ರಿಜಿಸ್ಟ್ರಾರ್ ಹಾಗೂ ಇತರ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದ್ದು,‌ ಈ ಸಂದರ್ಭದಲ್ಲಿ ಹಲವು ಅಕ್ರಮ‌ ಅಕ್ರಮಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: ವಲಸಿಗರನ್ನು ಪಂಜರದ ಪಶುಗಳಂತೆ ಕಾಣುವ ಅಮಾನವೀಯತೆ : ಬಂಡವಾಳಶಾಹಿಯ ಸೃಷ್ಟಿ

ಸರಿಯಾಗಿ ಪರೀಕ್ಷೆ ನಡೆಸಲು ಬಾರದ ವಿವಿ ಎಂದೇ ಖ್ಯಾತಿ ಪಡೆಸಿರುವ ಗುಲ್ಬರ್ಗ ವಿವಿಯಲ್ಲಿ ಇತ್ತೀಚೆಗೆ ನಡೆಯಬಾರದ ವಿಷಯಗಳಲ್ಲಾ ರಾಜಾರೋಷವಾಗಿ ನಡೆಯುವ ಮೂಲಕ ವಿವಿ ಗೆ ಕಪ್ಪು ಚುಕ್ಕೆ ತರುವ ದಂಧೆ ನಡೆಯುತ್ತಿರುವುದು ಯಾರಿಗೂ ತಿಳಿಯದ ವಿಚಾರವಲ್ಲ. ಹೀಗಾಗಿ ಲೋಕಾಯುಕ್ತ ಬಿಸಿ ಮುಟ್ಟಿಸಲು ದಾಳಿ ನಡೆಸಿದೆ.

ದಾಳಿಯಲ್ಲಿ ಡಿವೈಎಸ್ಪಿಗಳಾದ ಗೀತಾ ಬೇನಾಳ, ಹನುಮಂತರಾಯ, ಇನ್ಸಪೆಕ್ಟರುಗಳಾದ ರಾಜಶೇಖರ ಹಳಗೋಧಿ, ಸಂತೋಷ, ಅರುಣಕುಮಾರ, ಸಿದ್ದರಾಯ, ರಾಜಶೇಖರ ಹಾಗೂ ಸಿಬ್ಬಂದಿಗಳಾದ ಬಸವರಾಜ, ಪ್ರದೀಪ, ರೇಣುಕಾ, ಜಯಶ್ರೀ, ಮಸೂದ, ಗುಂಡೂರಾಯ ಮುಂತಾದವರು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ಇದನ್ನೂ ನೋಡಿ: ಕೋಲಾರ :- ರಾಜ್ಯಮಟ್ಟದ ಜಾನಪದ ಉತ್ಸವಕ್ಕೆSCSP/TSP ಹಣ ದುರ್ಬಳಕೆ – ಕಾರ್ಯಕ್ರಮ ಬಹಿಷ್ಕರಿಸಿ ಹೊರ ನಡೆದ ಹೋರಾಟಗಾರರು

Donate Janashakthi Media

Leave a Reply

Your email address will not be published. Required fields are marked *