ಸಂಗಮದಲ್ಲಿ ಮುಳುಗಿ 5 ವಿದ್ಯಾರ್ಥಿಗಳು ಸಾವು; ಪ್ರವಾಸದ ವೇಳೆ ದುರಂತ

ರಾಮನಗರ: ಬೆಂಗಳೂರಿನಿಂದ ಕನಕಪುರದ ಮೇಕೆದಾಟು ನೋಡಲು ಹೋಗಿದ್ದ ಕಾಲೇಜು ವಿದ್ಯಾರ್ಥಿಗಳು ಕಾಲು ಜಾರಿ ನದಿಯಲ್ಲಿ ಸಾವನ್ನಪ್ಪಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಇವರನ್ನು ಪೀಣ್ಯಾ ಸೆಕೆಂಡ್​ ಸ್ಟೇಜ್​ನ ಇಂಜಿನಿಯರಿಂಗ್ ಕಾಲೇಜ್​ನ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. ಒಟ್ಟು 12 ಜನ ವಿದ್ಯಾರ್ಥಿಗಳು ಪ್ರವಾಸ ಬಂದಿದ್ದರಂತೆ, ಈ ಪೈಕಿ 5 ಜನ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಅದೃಷ್ಟವಶಾತ್ 7 ವಿದ್ಯಾರ್ಥಿಗಳು ಬದುಕುಳಿದಿದ್ದಾರೆ ಎಂದು ದೃಢವಾಗಿದೆ. ಸಂಗಮ

ಬೇಸಿಗೆಯ ಬಿಸಿ ತಾಳಲಾರದೆ, ಈ ವಿದ್ಯಾರ್ಥಿಗಳು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಾವೇರಿ ನದಿ ಹರಿಯುವ ಸಂಗಮಕ್ಕೆ ಪ್ರವಾಸ ಕೈಗೊಂಡಿದ್ದರು. ಅದೇ ರೀತಿ ಇದರಲ್ಲಿ 12 ಜನ ವಿದ್ಯಾರ್ಥಿಗಳು, ಟಿಟಿ ವಾಹನದಲ್ಲಿ ಮೇಕೆದಾಟಿಗೆ ತೆರಳಿದ್ದರು. ಈ ವೇಳೆ ಘಟನೆ ಸಂಭವಿಸಿದೆ.

ಇದನ್ನು ಓದಿ : ಪೂರ್ಣ ಬರಪರಿಹಾರ ಬಿಡುಗಡೆಯಾಗುವವರೆಗೆ ಹೋರಾಟ ನಡೆಸಿ, ನಿಮ್ಮ ಜೊತೆ ನಾವಿದ್ದೇವೆ – ಮುಖ್ಯಮಂತ್ರಿ ಚಂದ್ರು

ಬೆಂಗಳೂರಿನಿಂದ ಮೇಕೆದಾಟು ನೋಡಲೆಂದು ಹೋಗಿದ್ದ 12 ಕಾಲೇಜು ವಿದ್ಯಾರ್ಥಿಗಳ ಪೈಕಿ 5 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಅಭಿಷೇಕ್, ತೇಜಸ್, ಹರ್ಷಿತ್, ವರ್ಷಾ, ನೇಹ ಸಾವನ್ನಪ್ಪಿರುವ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.

ಕನಕಪುರದ ಸಂಗಮದಲ್ಲಿ ಕೈ ಹಿಡಿದು ಒಬ್ಬರೊಬ್ಬರು ಮತ್ತೊಂದು ದಡಕ್ಕೆ ಹೋಗುವ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಮೃತ ಪಟ್ಟವರಲ್ಲಿ ವರ್ಷ (20), ಕೆಎಲ್ಇ ಕಾಲೇಜು ರಾಜಾಜಿನಗರ 2ನೇ ಹಂತ, ಅಭಿಷೇಕ್ (20) ಬಿಹಾರ ಮೂಲದವರಾಗಿದ್ದು ಮಲ್ಲೇಶ್ವರ ಸರ್ಕಾರಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ, ಹರ್ಪಿತ ಎನ್.ಎಲ್ (20) ಎಂಜಿನಿಯರಿಂಗ್ 2nd ಇಯರ್ ಚಿಕ್ಕಬಾಣವಾರ ಆರ್.ಆರ್ ಕಾಲೇಜು (ಮಂಡ್ಯ ಮೂಲ), ತೇಜಸ್ (21) bca 2nd year vijayanagara govt clg (ಚಿತ್ರದುರ್ಗ ಮೂಲ), ನೇಹ (19) ಕೆಮಿಸ್ಟ್ರಿ ಕೆಎಲ್ಇ ಕಾಲೇಜು ಆರ್.ಆರ್ ನಗರ (ಚಿತ್ರದುರ್ಗ ಮೂಲ) ಎಂದು ಗುರುತಿಸಲಾಗಿದೆ.

ಇದನ್ನು ನೋಡಿ : ಕೇಳಿರಣ್ಣ, ಕೇಳಿರಕ್ಕ ಕಥೆಯ ಹೇಳುವೆ, ಸುಳ್ಳಿನ ಸರಮಾಲೆಯ ವ್ಯಥೆಯ ಹೇಳುವೆ – ಹಾಡಿದವರು : ಲವಿತ್ರ ಮತ್ತು ಮೇಘ

Donate Janashakthi Media

Leave a Reply

Your email address will not be published. Required fields are marked *