ಉಡುಪಿ: ಉಡುಪಿ ಶಾಖೆಯ ಕೆನರಾ ಬ್ಯಾಂಕ್ನಲ್ಲಿ 500ರೂ. ಮುಖ ಬೆಲೆಯ ಐದು ಖೋಟಾ ನೋಟುಗಳು ಪತ್ತೆಯಾ ಗಿರುವ ಬಗ್ಗೆ ವರದಿಯಾಗಿದೆ.
ಅನಾಮಧೇಯ ವ್ಯಕ್ತಿಯೊಬ್ಬ ಆ.30 ರಂದು ಬೆಳಗ್ಗೆ ಬಂದು ರೇವು ಎಂಬವರ ಖಾತೆಗೆ 50,000ರೂ. ಹಣವನ್ನು ಡೆಪಾಸಿಟ್ ಮಾಡಿದ್ದನು. ಆ ವೇಳೆ ಬ್ಯಾಂಕ್ನಲ್ಲಿ ತುಂಬಾ ಜನರು ಇದ್ದ ಕಾರಣ ಕ್ಯಾಶಿಯರ್ ಮುರುಳಿ ಎಂಬುವವರಿಗೆ ಇದು ಗಮನಕ್ಕೆ ಬಂದಿರಲಿಲ್ಲ.
ಬಿಡುವಿನ ವೇಳೆಯಲ್ಲಿ ಕ್ಯಾಶಿಯರ್ ಎಲ್ಲ ಹಣವನ್ನು ಮೆಷಿನ್ನಲ್ಲಿ ಹಾಕಿ ಪರಿಶೀಲಿಸುವಾಗ 500 ರೂ. ಮುಖಬೆಲೆಯ 5 ಖೋಟಾ ನೋಟುಗಳು ಇರುವುದು ಕಂಡುಬಂದಿದೆ.
ಬ್ಯಾಂಕ್ನ ಚಿಫ್ ಮ್ಯಾನೇಜರ್ ಜೆಸ್ಸಿನ್ ಮ್ಯಾಥ, ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪುಕರಣ ದಾಖಲಾಗಿದೆ.
ಇದನ್ನೂ ನೋಡಿ: ಮೆಟ್ರೋ ರೈಲಿಗಾಗಿ 1 ಕಿಮೀ ಕ್ಯೂ ನಿಂತ ಪ್ರಯಾಣಿಕರು Janashakthi Media