ಠಾಣೆಯಲ್ಲಿ ಸಂಘಪರಿವಾರ ಕಾರ್ಯಕರ್ತರಿಂದ ಹಲ್ಲೆ: ಐವರು ಪೊಲೀಸರಿಗೆ ಗಾಯ

ನೋಯ್ಡಾ: ಪೊಲೀಸ್ ಠಾಣೆಯೊಳಗೆ ಗುರುವಾರ(ಏಪ್ರಿಲ್‌ 28) ಸಂಜೆ ಪೊಲೀಸರು ಮತ್ತು ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿಯಲ್ಲಿ ಐವರು ಪೊಲೀಸರು ಗಾಯಗೊಂಡಿರುವ ಘಟನ ನಡೆದಿದೆ. ಮಾರಾಮಾರಿ ಹಿನ್ನೆಲೆಯಲ್ಲಿ ಪೊಲೀಸರು ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 17ರ ಹರೆಯದ ಬಾಲಕಿಯನ್ನು ಅತ್ಯಾಚಾರಗೈದ ಆರೋಪದ ಮೇರೆಗೆ 13 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದರು. ಗುರುವಾರ ಸಂಜೆ 4 ಗಂಟೆಗೆ, ವಿಎಚ್‌ಪಿ ಮತ್ತು ಬಜರಂಗದಳದ 50-60 ಮಂದಿ ಸೆಕ್ಟರ್ 39 ಪೊಲೀಸ್ ಠಾಣೆಗೆ ಪೊಲೀಸರೊಂದಿಗೆ ʼಮಾತನಾಡಲುʼ ಬಂದಿದ್ದರು. ಮಾತುಕತೆ ತಾರಕ್ಕೇರಿ ಘರ್ಷಣೆಯಾಗಿ ಮಾರ್ಪಟ್ಟಿತು. ಪೋಲೀಸರ ಮೇಲೆ ಸಂಘಪರಿವಾರ ಕಾರ್ಯಕರ್ತರು ದಾಳಿ ನಡೆಸಿದ್ದರು. ಪ್ರತಿಯಾಗಿ ಪೊಲೀಸರೂ ಕೆಲವರನ್ನು ಥಳಿಸಿದ್ದರು ಎನ್ನಲಾಗಿದೆ.  ಘಟನೆಯಲ್ಲಿ ಐವರು ಪೊಲೀಸರಿಗೆ ಗಾಯಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ: ಠಾಣೆಯ ಮೇಲೆ ಬೀಳೋ ಮುಸ್ಲೀಂ ಕಲ್ಲಿಗೂ, ಹಿಂದೂ ಕಲ್ಲಿಗೂ ಏನು ವ್ಯತ್ಯಾಸ ?

ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. “ಎಫ್‌ಐಆರ್‌ನಲ್ಲಿ 50-60 ಅಪರಿಚಿತ ವ್ಯಕ್ತಿಗಳು ಶಾಮೀಲಾಗಿರುವುದನ್ನು ಉಲ್ಲೇಖಿಸಲಾಗಿದೆʼʼ ಎಂದು ಅಧಿಕಾರಿ ಹೇಳಿದರು.

ಕಾನ್‌ಸ್ಟೆಬಲ್ ಅನಿಲ್ ಕುಮಾರ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. “ಸಂಜೆ 4 ಗಂಟೆ ಸುಮಾರಿಗೆ ಅವರು ಪೊಲೀಸ್ ಠಾಣೆಯ ಹೊರಗೆ ಧರಣಿ ಆರಂಭಿಸಿದರು. ನಾನು ಮತ್ತು ನನ್ನ ನಾಲ್ವರು ಸಹೋದ್ಯೋಗಿಗಳು ಅವರೊಂದಿಗೆ ಶಾಂತಗೊಳಿಸಲು ಪ್ರಯತ್ನಿಸಿದೆವು, ಆದರೆ ಅವರು ಘೋಷಣೆಗಳನ್ನು ಕೂಗುತ್ತಲೇ ಇದ್ದರು. ಗಂಗಾ ನೇತೃತ್ವದಲ್ಲಿ ನಡೆದ ಈ ಧರಣಿಯಲ್ಲಿ ಅವರು ಆರಂಭದಲ್ಲಿ ನಮ್ಮ ಮೇಲೆ ನಿಂದನೆಗಳನ್ನು ಮಾಡಿದರು ಮತ್ತು ನಂತರ ನಮ್ಮ ಮೇಲೆ ಹಲ್ಲೆ ನಡೆಸಿದರು. ಅವರು ನಮ್ಮ ಸಮವಸ್ತ್ರವನ್ನು ಹರಿದಿದ್ದಾರೆʼʼ ಎಂದು ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: ಮಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಅನೈತಿಕ ಪೊಲೀಸ್‌ಗಿರಿ ಸಂಘಪರಿವಾರದವರ ಬಗ್ಗೆ ಪೊಲೀಸರಿಗೆ ಸಾಫ್ಟ್‌ ಕಾರ್ನರ್‌ ಯಾಕೆ?

ದಾಳಿಕೋರರಲ್ಲಿ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೆಚ್ಚುವರಿ ಡಿಸಿಪಿ ರಣವಿಜಯ್ ಸಿಂಗ್ ತಿಳಿಸಿದ್ದಾರೆ. “ಘರ್ಷಣೆಯಲ್ಲಿ ಇತರರು ಭಾಗಿಯಾಗಿರುವ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ. ವಿಸ್ತೃತ ತನಿಖೆ ನಡೆಸಲಾಗುತ್ತಿದೆʼʼ ಎಂದು ಸಿಂಗ್ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *