ಸಾರ್ವಜನಿಕ ಬ್ಯಾಂಕುಗಳ ವಿಲೀನ ವಿರೋಧಿಸಿ ಗ್ರಾಮಾಣ ಬ್ಯಾಂಕ್‌ ನೌಕರರ ಪ್ರತಿಭಟನೆ

ಕೋಲಾರ: ಕೇಂದ್ರ ಸರ್ಕಾರ ತನ್ನ ಪಾಲಿನ ಶೇರು ಬಂಡವಾಳವನ್ನು ಪ್ರವರ್ತಕ ಬ್ಯಾಂಕುಗಳಿಗೆ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಬ್ಯಾಂಕ್ ನೌಕರರ ಮತ್ತು ಅಧಿಕಾರಿಗಳ ಸಂಘಟನೆಯ ವತಿಯಿಂದ ನಗರದ ವಿಭಾಗೀಯ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಚ್.ಬಿ ಕೃಷ್ಣಪ್ಪ ಮಾತನಾಡಿ. ದೇಶದಲ್ಲಿರುವ 43 ಗ್ರಾಮೀಣ ಬ್ಯಾಂಕುಗಳನ್ನು ಒಂದುಗೂಡಿಸಿ ರಾಷ್ಟಿಯ ಗ್ರಾಮೀಣ ಬ್ಯಾಂಕ್ ಸ್ಥಾಪಿಸಬೇಕು. ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಾದ 11ನೇ ವೇತನ ಒಪ್ಪಂದವನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಭಾರತ ಸರಕಾರ ಜಾರಿಗೊಳಿಸಿದ ಮಿತ್ರಾ ಕಮಿಟಿಯ ಶಿಫಾರಸಿನಂತೆ ಗ್ರಾಮೀಣ ಬ್ಯಾಂಕುಗಳಲ್ಲಿ ಮಾನವ ಸಂಪನ್ಮೂಲ ವರದಿಯನ್ನು ಅನುಷ್ಠಾನಗೊಳಿಸಬೇಕು ಪ್ರವರ್ತಕ ಬ್ಯಾಂಕುಗಳಲ್ಲಿರುವಂತೆ ಸೇವಾ ನಿಯಮ ಹಾಗೂ ಬಡ್ತಿ ನಿಯಮಗಳನ್ನು ಅನುಷ್ಠಾನಗೊಳಿಸುವ ಜೊತೆಗೆ ನಿವೃತ್ತಿ ವೇತನ ಜಾರಿಯಲ್ಲಾದ ನ್ಯೂನ್ಯತೆಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕ ಬ್ಯಾಂಕುಗಳ ವಿಲೀನ ಕಾರ್ಯ ನಿಲ್ಲಿಸಬೇಕು ದೇಶದ ಮೂಲೆ, ಮೂಲೆಗೂ ಬ್ಯಾಂಕಿಂಗ್ ಸೌಲಭ್ಯ ವಿಸ್ತರಿಸಬೇಕು, ಕೃಷಿ ಮತ್ತು ಆಧ್ಯತಾ ವಲಯಗಳಿಗೆ ಹೆಚ್ಚು ಹೆಚ್ಚು ಹಣಕಾಸು ನೆರವನ್ನು ಬ್ಯಾಂಕುಗಳ ಮೂಲಕ ಒದಗಿಸುವುದಲ್ಲದೇ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು, ದೇಶದಲ್ಲಿನ ಎಲ್ಲ ಖಾಸಗಿ ಮತ್ತು ವಿದೇಶಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಬೇಕು, ಬ್ಯಾಂಕಿಂಗ್ ವಲಯದಲ್ಲಿ ಹೊರ ಗುತ್ತಿಗೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ವೇತನ ತಾರತಮ್ಯ ನಿವಾರಿಸಿ ಬ್ಯಾಂಕಿಂಗ್ ವಲಯದಲ್ಲಿ ಗರಿಷ್ಟ ಮಟ್ಟದಲ್ಲಿ ನೌಕರರನ್ನು ನೇಮಕಾತಿ ಮಾಡಿಕೊಳ್ಳಬೇಕು ಮತ್ತು ಅನುಕಂಪದ ನೇಮಕಾತಿ ಪುನಃ ಜಾರಿಗೊಳಿಸಬೇಕು, ದೇಶದ ಅತಿ ದೊಡ್ಡ ಖಾಸಗಿ ಸಂಸ್ಥೆಗಳು ಬ್ಯಾಂಕಿಂಗ್ ವಲಯಕ್ಕೆ ಪ್ರವೇಶಿಸುವುದನ್ನು ತಡೆಗಟ್ಟಬೇಕು, ದೇಶದ ಸರ್ವ ಪ್ರಜೆಯು ಬ್ಯಾಂಕ್ ಖಾತೆ ಹೊಂದುವುದು ಮೂಲಭೂತ ಹಕ್ಕಾಗಬೇಕು. ಖಾಸಗಿ ವ್ಯವಹಾರ ಪ್ರತಿನಿಧಿಗಳು ಬ್ಯಾಂಕಿಂಗ್ ವಲಯ ಪ್ರವೇಶಿಸುವುದನ್ನು ನಿಲ್ಲಿಸಬೇಕು ಕೇಂದ್ರ ಮತ್ತು ರಾಜ್ಯ ಸರಕಾರದ ಕಾರ್ಮಿಕ ವಿರೋಧಿ ನೀತಿ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಉಪಾಧ್ಯಕ್ಷರಾದ ನವೀನ್ ಕುಮಾರ್ ಮತ್ತು ನಿವೃತ್ತಿ ನೌಕರರ ಸಂಘದ ಉಪಾಧ್ಯಕ್ಷರಾದ ಸಿ.ವೆಂಕಟರವಣಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *