ಗ್ರಾಮಗಳ ನೈರ್ಮಲ್ಯ ಕಾಪಾಡುವುದು ಪಿಡಿಒಗಳ ಕರ್ತವ್ಯ – ಸಿಇಒ ಎಸ್.ಎಂ. ನಾಗರಾಜ

ಕೋಲಾರ: ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾಗಿ ನೇಮಕವಾದ ಪ್ರಾರಂಭದಲ್ಲಿ ಹಾಕಿಕೊಳ್ಳಕ್ಕೆ ಸರಿಯಾದ ಬಟ್ಟೆ, ಊಟ ಇರಲಿಲ್ಲ ಕನಿಷ್ಠ ಅ ಸಂದರ್ಭದಲ್ಲಿ ಸೈಕಲ್ ಕೂಡ ಇರಲಿಲ್ಲ ಇವತ್ತು ತಮಗೆಲ್ಲ ಕಾರು ಸೇರಿದಂತೆ ಐಶಾರಾಮಿ ಜೀವನಕ್ಕೆ ಬೇಕಾದ ಎಲ್ಲಾ ವಸ್ತುಗಳು ಸಿಕ್ಕಿದೆ ಕನಿಷ್ಠ ಪಕ್ಷ ತಮ್ಮ ಅಧಿಕಾರದ ಅವಧಿಯಲ್ಲಿ ಸಮಾಜಕ್ಕೆ ಜನಕ್ಕೆ ಏನಾದರೂ ಕೊಡುಗೆ ನೀಡಬೇಕಾದ ಜವಾಬ್ದಾರಿ ನಿಮ್ಮ ಮೇಲೆ ಇದೆ ಎಂದು ಪಿಡಿಒಗಳ ವರ್ತನೆಗೆ ಜಿಪಂ ಸಿಇಒ ಎಸ್.ಎಂ ನಾಗರಾಜ್ ಬೇಸರ ವ್ಯಕ್ತಪಡಿಸಿದರು

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಸ್ವಚ್ಚ ಭಾರತ್ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಮ್ಮ ಸ್ವಂತ ಕೆಲಸಕ್ಕೆ ಬೇಕಾದರೆ ಒಂದು ದಿನದಲ್ಲಿ ಮಾಡಿಸಿಕೊಂಡು ಬರತ್ತೀರ ಪಂಚಾಯತಿ ಕೆಲಸವಾದರೇ ವರ್ಷಗಳಾದರೂ ಬೇಕಾಗುತ್ತದೆ ಪಿಡಿಒಗಳು ಮನಸ್ಸು ಮಾಡಿದರೆ ಹಳ್ಳಿಗಳನ್ನು ಹೇಗೆ ಬೇಕಾದರೂ ಅಭಿವೃದ್ಧಿ ಮಾಡಬಹುದು ಎಂಬುದನ್ನು ತಾವುಗಳು ಅರ್ಥ ಮಾಡಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಗ್ರಾಮಗಳ ನೈರ್ಮಲ್ಯ ಕಾಪಾಡುವುದು ನಮ್ಮ ಹೊಣೆ ಕಸದಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ತಪ್ಪಿಸಬೇಕು ಒಣ ಕಸ ಮತ್ತು ಹಸಿ ಕಸ ಎಂದು ಸಂಗ್ರಹಿಸುವ ಸಂದರ್ಭದಲ್ಲೇ ವಿಂಗಡಿಸುವಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು ಗ್ರಾಮ ಪಂಚಾಯತಿ ಸಭೆಗಳಲ್ಲಿ ಸ್ವಚ್ಚತೆಯ ಬಗ್ಗೆ ಪ್ರತ್ಯೇಕ ಅಜೆಂಡಾ ಇಟ್ಟು ಜಾರಿ ಮಾಡಿಸಬೇಕು ಕಸ ಸಂಗ್ರಹಿಸುವ ವಾಹನಕ್ಕೆ ಜಲಗಾರರಿಗೆ ವಾಹನ ಚಾಲನಾ ತರಬೇತಿ ನೀಡಿ ಅವರನ್ನೇ ಬಳಸಿಕೊಳ್ಳಬೇಕು ಯೋಜನೆಯ ಅನುಷ್ಠಾನಕ್ಕೆ 15 ನೆಯ ಹಣಕಾಸಿನ ಯೋಜನೆಯಲ್ಲಿ ಮತ್ತು ಕಸವನ್ನು ಮಾರಾಟ ಮಾಡಿದ ಹಣದಿಂದ ಖರ್ಚು ಮಾಡುವ ಮೂಲಕ ಸ್ವಚ್ಚ ಭಾರತ ಮಿಷನ್ ದಿಂದ ಗ್ರಾಮಗಳನ್ನು ಸ್ವಚ್ಚತೆ ಮಾಡಬೇಕಾಗಿದೆ ಎಂದರು.

ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರತಿಯೊಂದು ಗ್ರಾಮವನ್ನು ಸ್ವಚ್ಚವಾಗಿಡಲು ಆಗಸ್ಟ್ 11,12,ಮತ್ತು 13 ರಂದು ಮೂರು ದಿನಗಳ ಕಾಲ ಹಳ್ಳಿಗಳಲ್ಲಿ ಅಭಿಯಾನದ ಮೂಲಕ ಅಧಿಕಾರಿಗಳು ಸಾರ್ವಜನಿಕರು ಸೇರಿದಂತೆ ಸ್ವಚ್ಛತಾ ಕಾರ್ಯದಲ್ಲಿ ಸ್ವಪ್ರೇರಣೆಯಿಂದ ಪಾಲ್ಗೊಂಡರೆ ಮಾತ್ರ ಸ್ವಚ್ಛ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಅ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ನಾವು ಸಂಗ್ರಹಿಸುವ ಕಸವನ್ನು ಕಸ ಎಂದು ಭಾವಿಸದೇ ಕಸದಿಂದ ಪಂಚಾಯತಿಯ ಆದಾಯದ ಮೂಲ ಎಂದು ಭಾವಿಸಬೇಕು ಗ್ರಾಮ ಪಂಚಾಯತಿಗಳಲ್ಲಿ ಕಸ ಸಂಗ್ರಹಿಸುವ ವಾಹನ, ಕಸದ ಬುಟ್ಟಿಗಳು ಸೇರಿದಂತೆ ಉಪಯೋಗಿಸುವ ವಸ್ತುಗಳು ಗುಣಮಟ್ಟದಿಂದ ಕೂಡಿರಬೇಕು ಪಂಚಾಯತಿ ವಾಹನ ನಮ್ಮದೇ ಸ್ವಂತ ವಾಹನ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದರು

ಕಸ ಸಂಗ್ರಹಣೆಯಲ್ಲಿ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವವರು ಮತ್ತು ಮಹಿಳೆಯರನ್ನು ಆಯ್ಕೆ ಮಾಡಿದರೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಹಾಯವಾಗುತ್ತದೆ ಸ್ವಚ್ಛತೆ ಮಾಡುವರು ಪಕ್ಕದ ಗ್ರಾಪಂಯಲ್ಲಿ ಸಂಗ್ರಹಿಸುವ ಅವಕಾಶವಿದೆ ಪಿಡಿಒಗಳು ಮನಸ್ಸು ಮಾಡಬೇಕು ಹಳ್ಳಿಗಳಲ್ಲಿ ಕಡ್ಡಾಯವಾಗಿ ಶೌಚಾಲಯ ಹೊಂದಿ ಬಳಕೆ ಮಾಡುತ್ತಿರಬೇಕು ರಾಜ್ಯ ಮತ್ತು ಕೇಂದ್ರ ಸರಕಾರದ ಅಧಿಕಾರಿಗಳ ತಂಡ ಯಾವಾಗಲೂ ಬೇಕಾದರೂ ಭೇಟಿ ನೀಡಲಿದ್ದಾರೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು

ಸ್ವಚ್ಚ ಭಾರತ್ ಮಿಷನ್ ಯೋಜನೆಯನ್ನು ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಜಾರಿ ಮಾಡಬೇಕು ಕೆಲವು ಗ್ರಾಮ ಪಂಚಾಯತಿಯಲ್ಲಿ ಜಾಗದ ಸಮಸ್ಯೆ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಜನ ಹೇಳಿದ ಹಾಗೇ ಕೇಳಬೇಕು ಎಂಬುದನ್ನು ಬಿಟ್ಟು ಸರಕಾರದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು

ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ಯೋಜನಾ ನಿರ್ದೇಶಕಿ ಶೃತಿ, ಸ್ವಚ್ಚ ಭಾರತ್ ಮಿಷನ್ ಜಿಲ್ಲಾ ಸಂಯೋಜಕ ಜಗದೀಶ್, ಜಿಲ್ಲೆಯ ತಾಪಂ ಇಒಗಳು, ಪಿಡಿಒಗಳು ಇದ್ದರು

Donate Janashakthi Media

Leave a Reply

Your email address will not be published. Required fields are marked *