ರಿಲೀಸ್ ಆದ ಮೊದಲ ದಿನವೇ ಅಬ್ಬರದ ಕಲೆಕ್ಷನ್ ಮಾಡಿದ ’45’ ಹಾಗೂ ‘ಮಾರ್ಕ್​’ ಸಿನಿಮಾಗಳು

ಬೆಂಗಳೂರು: ಡಿಸೆಂಬರ್‌ 25ರಂದು ಕ್ರಿಸ್​ಮಸ್ ಪ್ರಯುಕ್ತ ರಿಲೀಸ್ ಆದ ’45’ ಹಾಗೂ ‘ಮಾರ್ಕ್​’ ಸಿನಿಮಾಗಳು ಮೊದಲ ದಿನವೇ ಅಬ್ಬರದ ಕಲೆಕ್ಷನ್ ಮಾಡಿವೆ. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸಿವೆ. ಇಂದು ವಾರದ ದಿನ ಆಗಿರುವುದರಿಂದ, ಯಾವುದೇ ರಜೆ ಇಲ್ಲದಿರುವುದರಿಂದ ಕಲೆಕ್ಷನ್ ಕೊಂಚ ತಗ್ಗಬಹುದು.

ಆದರೆ, ಶನಿವಾರ, ಭಾನುವಾರ ಮತ್ತು ಹೊಸ ವರ್ಷದಂದು ಈ ಚಿತ್ರ ಅಬ್ಬರದ ಕಲೆಕ್ಷನ್ ಮಾಡೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಒಟ್ಟಾರೆ ಗಳಿಕೆ ಎಷ್ಟಾಗುತ್ತದೆ ಎಂಬ ಕುತೂಹಲ ಮೂಡಿದೆ.

‘ಮಾರ್ಕ್​’ ಚಿತ್ರದ ಮೊದಲ ದಿನದ ಗಳಿಕೆ

‘ಮ್ಯಾಕ್ಸ್’ ಆದ ಬಳಿಕ ‘ಮಾರ್ಕ್’ ಸಿನಿಮಾ ರಿಲೀಸ್ ಆಯಿತು. ಕಳೆದ ವರ್ಷ ಡಿಸೆಂಬರ್ 25ರಂದು ‘ಮ್ಯಾಕ್ಸ್’ ಬಂದಿದ್ದರೆ ಈ ವರ್ಷ ಅದೇ ದಿನಾಂಕದಂದು ‘ಮಾರ್ಕ್’ ಬಂದಿದೆ. ಈ ಚಿತ್ರ ‘ಮ್ಯಾಕ್ಸ್’ ಸಿನಿಮಾ ಶೇಡ್​​ನಲ್ಲಿ ಇದೆ ಎಂಬ ಅಭಿಪ್ರಾಯವನ್ನು ಅನೇಕರು ಹೊರ ಹಾಕಿದ್ದಾರೆ. ಎರಡು ದಿನದಲ್ಲಿ ನಡೆಯೋ ಕಥೆ ಆಗಿರುವುದರಿಂದ ಸಿನಿಮಾ ವೇಗವಾಗಿ ಸಾಗುತ್ತದೆ. ಈ ಚಿತ್ರ ಮೊದಲ ದಿನ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿದೆ.

ಇದನ್ನೂ ಓದಿ: ಮೈಸೂರು| ಬಲೂನ್ ಗೆ ಹೀಲಿಯಂ ತುಂಬಿಸುವ ವೇಳೆ ಸ್ಟೋಟ; ಓರ್ವ ಸಾವು

‘ಮಾರ್ಕ್​’ ಸಿನಿಮಾ ಮೊದಲ ದಿನ 6.28 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ತಿಳಿದುಬಂದಿದೆ. ಮೊದಲ ದಿನವೇ ಸಿನಿಮಾ ಅಬ್ಬರಿಸಿದಂತಾಗಿದೆ. ಈ ಚಿತ್ರಕ್ಕೆ ಈಗಾಗಲೇ ಎಲ್ಲ ಕಡೆಗಳಲ್ಲಿ ಪಾಸಿಟಿವ್ ವಿಮರ್ಶೆಗಳು ಸಿಕ್ಕಿದ್ದು ಸಿನಿಮಾಗೆ ಸಹಕಾರಿ ಆಗುತ್ತಿದೆ. ಈ ಚಿತ್ರಕ್ಕೆ ಸುದೀಪ್ ಹೀರೋ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ನಿರ್ದೇಶನ ಸಿನಿಮಾಗೆ ಇದೆ.

’45​’ ಚಿತ್ರದ ಮೊದಲ ದಿನದ ಗಳಿಕೆ

45 ಸಿನಿಮಾ ಕೂಡ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿದೆ. ಇದು ಮಲ್ಟಿ ಸ್ಟಾರರ್ ಚಿತ್ರ. ಉಪೇಂದ್ರ, ರಾಜ್ ಬಿ ಶೆಟ್ಟಿ, ಶಿವರಾಜ್​​ಕುಮಾರ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಕೂಡ ಮೊದಲ ದಿನ ಒಳ್ಳೆಯ ಓಪನಿಂಗ್ ಪಡೆದಿದೆ.

ಈ ಸಿನಿಮಾದ ಮೊದಲ ದಿನದ ಗಳಿಕೆ ಬಗ್ಗೆ sacnilk ಲೆಕ್ಕ ಕೊಟ್ಟಿದೆ. ಈ ಚಿತ್ರದ ಮೊದಲ ದಿನದ ಕಲೆಕ್ಷನ್ 4.25 ಕೋಟಿ ರೂಪಾಯಿ ಎನ್ನಲಾಗಿದೆ. ಪ್ರೀಮೀಯರ್ ಶೋಗಳ ಲೆಕ್ಕವೂ ಸೇರಿದರೆ 5 ಕೋಟಿ ರೂಪಾಯಿ ದಾಟಲಿದೆ. ಈ ಸಿನಿಮಾ ಅಭಿಮಾನಿಗಳು ಕೈ ಹಿಡಿಯುವ ಲಕ್ಷಣ ಗೋಚರವಾಗಿದೆ.

ಇದನ್ನೂ ನೋಡಿ: ಕಮ್ಯುನಿಸ್ಟ್‌ ಪಕ್ಷಗಳು ದುಡಿಯುವ ಜನ, ಭೂ ರಹಿತರ ಪರ ಧ್ವನಿಯಾದವರು Janashakthi Media

Donate Janashakthi Media

Leave a Reply

Your email address will not be published. Required fields are marked *