ಕೋವಿಡ್‌ ಸೃಷ್ಟಿಸಿದ ಹೃದಯ ವಿದ್ರಾವಕ ದೃಶ್ಯಗಳನ್ನು ಸೆರೆ ಹಿಡಿದಿದ್ದ ದನಿಶ್‌ ಸಿದ್ದಿಕಿ

ದನಿಶ್ ಸಿದ್ದಿಕಿ ರೈಟರ್ ಸುದ್ದಿ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದ ಪೋಟೋಜರ್ನಲಿಸ್ಟ್. ಈ ದಿಟ್ಟ ವ್ಯಕ್ತಿ ಕದನ ನಡೆಯುವ ಆಯಕಟ್ಟಿನ ಅಪಾಯಕಾರಿ ಜಾಗೆಗಳಿಗೆ ತೆರಳಿ ಅಪರೂಪದ ಸನ್ನಿವೇಶಗಳನ್ನು ಸೆರೆಹಿಡಿಯುತ್ತಿದ್ದರು. ಇರಾಕ್ ಯುದ್ಧ, ರೊಹಿಂಗ್ಯಾ ನಿರಾಶ್ರಿತರ ಸಂಕಟ, ನೇಪಾಳದ ಭೂಕಂಪ, ಹಾಂಕಾಂಗಿನ ಪ್ರಜಾಪ್ರಭುತ್ವಪರ ಪ್ರತಿಭಟನೆಗಳು, ಭಾರತದಲ್ಲಿ ಕೋವಿಡ್ ಸೃಷ್ಟಿಸಿದ ಹೃದಯ ವಿದ್ರಾವಕ ದೃಶ್ಯಗಳು ಹೀಗೆ ಅನೇಕ ಜಗತ್ತಿನ ಗಮನ ಸೆಳೆದ ಎಡೆಗಳಲ್ಲೆಲ್ಲ ಸಂಚರಿಸಿ ಜೀವವನ್ನು ಪಣಕ್ಕಿಟ್ಟು ಫೋಟೋ ತೆಗೆಯುತ್ತಿದ್ದ ಸಿದ್ದಿಕಿ ಇನ್ನು ನೆನಪು ಮಾತ್ರ.

ನಿನ್ನೆ ಅಫಘಾನಿಸ್ತಾನದಲ್ಲಿ ಸರ್ಕಾರಿ ಪಡೆಗಳು ಮತ್ತು ತಾಲಿಬಾನುಗಳ ನಡುವಿನ ಸಂಘರ್ಷವನ್ನು ದಾಖಲಿಸುತ್ತಿದ್ದಾಗ (ತಾಲಿಬಾನುಗಳ ಸ್ಫೋಟಕಕ್ಕೆ ಸಿಕ್ಕಿ) ಸಾವನ್ನಪ್ಪಿದ್ದಾರೆ. ಕೆಲವು ದಿನಗಳ ಹಿಂದೆ ಅಫ್ಘನ್ ಸೇನೆಯ ಜೊತೆ ಇವರು ಪಯಣಿಸುತ್ತಿದ್ದ ವಾಹನದ ಮೇಲೆ ತಾಲಿಬಾನುಗಳು ಹಲವು ಬಾರಿ ದಾಳಿ ನಡೆಸಿದ್ದರು.

ನೀವಿಲ್ಲಿ ಅವರ ಕೆಲವು ಪೋಟೋಗಳನ್ನು ಗಮನಿಸಬಹುದು. ಈ ಪೋಟೋಗಳಿಗಾಗಿ 2018ರಲ್ಲಿ ಇವರ ಏಳು ಜನರ ಸುದ್ದಿ ತಂಡಕ್ಕೆ ಪುಲಿಟ್ಜರ್ ಪ್ರಶಸ್ತಿ ಬಂದಿತ್ತು. ಸಿದ್ದಿಕಿ ನಿಮ್ಮ ತ್ಯಾಗ ವ್ಯರ್ಥವಾಗದು. ಮತಾಂಧರು ಮುಂದೆಯೂ ಬಯಲಾಗುತ್ತಾರೆ. ಜಗತ್ತು ವಾಸ್ತವ ಹಾಗೂ ಮನುಷ್ಯತ್ವದ ಜೊತೆ ಚಲಿಸುತ್ತದೆ.

  • ವಿಶೇಷ ಮಾಹಿತಿ : ಸುಬ್ಬಾರಾವ್‌ ರವಿಕುಮಾರ
Donate Janashakthi Media

Leave a Reply

Your email address will not be published. Required fields are marked *