ಚಿಕ್ಕಮಗಳೂರು : ಕಡೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೈಎಸ್‌ವಿ ದತ್ತ ಅವರ ವಿರುದ್ಧ ಚೆಕ್‌ಬೌನ್ಸ್‌ನ 41 ಪ್ರಕರಣಗಳು ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ದಾಖಲಾಗಿವೆ.
ಚೆಕ್ ನಗದು ಆಗದಿರುವ ಕಾರಣ ಈ ಎಲ್ಲ ಪ್ರಕರಣಗಳು ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ (ಎನ್‌ಐ) ಕಾಯ್ದೆ 1881 ರ ಕಲಂ 138ರ ಅಡಿಯಲ್ಲಿ ದಾಖಲಾಗಿವೆ.
2014ರಿಂದ 2020 ಅವಧಿಯಲ್ಲಿ ಈ ಪ್ರಕರಣಗಳು ದಾಖಲಾಗಿದ್ದು, ವಿಚಾರಣೆ ಹಂತದಲ್ಲಿವೆ. ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದಲ್ಲಿ 6 ಪ್ರಕರಣ, ಬೆಂಗಳೂರಿನ ಎಸಿಎಂಎಂ 12, 15,18, 19, 23, 26, 36ನೇ ನ್ಯಾಯಾಲಯಗಳಲ್ಲಿ ತಲಾ ಒಂದು, ಬೆಂಗಳೂರಿನ ಎಸಿಎಂಎಂ 22 ನೇ ನ್ಯಾಯಾಲಯದಲ್ಲಿ ಮೂರು, 42ನೇ ನ್ಯಾಯಾಲಯದಲ್ಲಿ 6 ಪ್ರಕರಣ, ಬೆಂಗಳೂರಿನ ಎಸ್‌ಸಿಸಿಎಚ್ 6ನೇ ಮತ್ತು 8ನೇ ನ್ಯಾಯಾಲಯಗಳಲ್ಲಿ ತಲಾ ಒಂದು, ಮಂಗಳೂರಿನ ಜೆಂಎಫ್‌ಸಿ ನ್ಯಾಯಾಲಯದಲ್ಲಿ 5 ಮತ್ತು 4ನೇ ಜೆಎಂಎಫ್‌ಸಿಯಲ್ಲಿ 3 ಪ್ರಕರಣ, ಅಥಣಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಎರಡು, ಹಾಸನ ನ್ಯಾಯಾಲಯದಲ್ಲಿ ಎರಡು, ಹಾಸನ ಜಿಲ್ಲೆ ಬೇಲೂರು, ಹುಬ್ಬಳ್ಳಿ, ಗದಗ ನ್ಯಾಯಾಲಯಗಳಲ್ಲಿ ತಲಾ ಒಂದು. ಅನಂತಪುರ ನ್ಯಾಯಾಲಯದಲ್ಲಿ ಒಂದು, ಗುಂತಕಲ್ ನ್ಯಾಯಾಲಯದಲ್ಲಿ ಮೂರು ಪ್ರಕರಣ ದಾಖಲಾಗಿವೆ.
ಇದನ್ನೂ ಓದಿ : ಮಾಜಿ ಶಾಸಕ ವೈಎಸ್‌ವಿ ದತ್ತಾ, ಶಾಸಕ ಹೆಚ್.ನಾಗೇಶ್ ಕಾಂಗ್ರೆಸ್ ಸೇರ್ಪಡೆ
ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಈ ಮಾಹಿತಿ ಇದೆ. 2022-23ನೇ ಸಾಲಿನಲ್ಲಿ ಅವರ ವಾರ್ಷಿಕ ಆದಾಯ ₹8.15 ಲಕ್ಷ ಇತ್ತು. ₹17.89 ಲಕ್ಷ ಮೌಲ್ಯದ ಚರಾಸ್ತಿ, ₹2.94 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ₹93.19 ಲಕ್ಷ ಸಾಲ ಇದೆ.