ಬಾಗಲಕೋಟೆಯಲ್ಲಿ ಲಾಕ್​ಡೌನ್​ ನಡುವೆ ಬಾಲ್ಯ ವಿವಾಹ; 28 ಬಾಲ್ಯ ವಿವಾಹಗಳನ್ನು ತಡೆದ ಅಧಿಕಾರಿಗಳು

ಬಾಗಲಕೋಟೆ: ಲಾಕ್​ಡೌನ್​ ನಡುವೆಯೂ ಬಾಲ್ಯ ವಿವಾಹಗಳು ಅನೇಕ ಕಡೆಗಳಲ್ಲಿ ನಡೆಯುತ್ತಿವೆ. ಬಾಗಲಕೋಟೆಯಲ್ಲಿ ಬಾಲ್ಯ ವಿವಾಹಗಳು ನಿಗದಿಯಾಗಿದ್ದವು, ಆದರೆ ಅಧಿಕಾರಿಗಳು ಸರಿಯಾದ ಸಮಯಕ್ಕೆ ಹೋಗಿ ವಿವಾಹಗಳನ್ನು ತಡೆದಿದ್ದಾರೆ.

ಮಕ್ಕಳು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಕನಸು ಕಟ್ಟಿರುತ್ತಾರೆ. ಆದರೆ ಕಂಡ ಕನಸು ಕನಸಾಗಿ ಉಳಿಯುವುದಕ್ಕೆ ಮುಖ್ಯ ಕಾರಣ ಪೋಷಕರೇ ಆಗಿರುತ್ತಾರೆ. ಬಾಲ್ಯ ವಿವಾಹದಂತಹ ಕೆಟ್ಟ ಪದ್ಧತಿಯಲ್ಲಿ ಮಕ್ಕಳನ್ನು ಸಿಲುಕಿ ಅವರ ಭವಿಷ್ಯವನ್ನೇ ಹಾಳುಮಾಡುತ್ತಾರೆ. ಈಗಲೂ ರಾಜ್ಯದ ಹಲವು ಜನರಿಗೆ ಅರಿವಿಲ್ಲ. ಬಾಲ್ಯ ವಿವಾಹದಿಂದ ಮಕ್ಕಳ ಮೇಲಾಗುವ ಪರಿಣಾಮ ಇನ್ನು ತಿಳಿದಿಲ್ಲ. ಈ ಬಗ್ಗೆ ಎಷ್ಟು ಅರಿವು ಮೂಡಿಸಿದರೂ  ಹೊಳೆಯಲ್ಲಿ ಹುಣಸೆಹಣ್ಣು ತೊಳದಂತಾಗುತ್ತಿದೆ.

ಇದನ್ನೂ ಓದಿ : ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಹೆಚ್‌ ಎಸ್‌ ದೊರೆಸ್ವಾಮಿ ನಿಧನ

ಬಾಗಲಕೋಟೆಯಲ್ಲಿ ಲಾಕ್​ಡೌನ್​ ನಡುವೆ ಬಾಲ್ಯ ವಿವಾಹ ನಿಗದಿಯಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಏಪ್ರಿಲ್, ಮೇನಲ್ಲಿ ಸುಮಾರು 35 ಬಾಲ್ಯ ವಿವಾಹಗಳು ನಿಗದಿಯಾಗಿತ್ತು. ಈ ಪೈಕಿ 28 ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ. ಅದಾಗ್ಯೂ 7 ಬಾಲ್ಯ ವಿವಾಹಗಳು ನಡೆದಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಅಶೋಕ ಬಸವಣ್ಣವರ ಮಾಹಿತಿ ನೀಡಿದ್ದಾರೆ. ಏಪ್ರಿಲ್, ಮೇ ತಿಂಗಳು ನಡೆದ 7 ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ಕಳೆದ ವರ್ಷವೂ ಜಿಲ್ಲೆಯಲ್ಲಿ ನೂರಕ್ಕೂ ಅಧಿಕ ಬಾಲ್ಯ ವಿವಾಹಕ್ಕೆ ತಯಾರಿ ನಡೆದಿತ್ತು. 113 ಬಾಲ್ಯ ವಿವಾಹಗಳ ಬಗ್ಗೆ ಇಲಾಖೆ ಗಮನಕ್ಕೆ ಮಾಹಿತಿ ಬಂದಿತ್ತು. ಈ ಪೈಕಿ 95 ಬಾಲ್ಯ ವಿವಾಹಗಳನ್ನು ಜಿಲ್ಲಾಡಳಿತ ತಡೆದಿತ್ತು. ಅದಾಗ್ಯೂ ಸುಮಾರು 18 ಬಾಲ್ಯ ವಿವಾಹ ನಡೆದು ಹೋಗಿದೆ. ಈ ಪೈಕಿ ಪ್ರಕರಣ ಮಾತ್ರ ದಾಖಲಾಗಿದ್ದು, ಉಳಿದ ಎಂಟು ಪ್ರಕರಣ ದಾಖಲಾಗಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.

ಇದನ್ನೂ ಓದಿ : ಮತ್ತೆ ಸಿಎಂ ಖುರ್ಚಿ ಅಲುಗಾಡುತ್ತಿದೆ : ಮುಂದನ ನಾಯಕ “ಬೆಲ್ಲ”ದ?

Donate Janashakthi Media

Leave a Reply

Your email address will not be published. Required fields are marked *