ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಿಂಗಳಿಗೆ 400 ಯುನಿಟ್‌ ಉಚಿತ ವಿದ್ಯುತ್: ದೇವಂದ್ರ ಭರವಸೆ

ದೆಹಲಿ: ವಿಧಾನಸಭೆ ಚುನಾವಣೆಗೆ ಇನ್ನೆರಡು ತಿಂಗಳು ಇರುವಂತೆಯೇ ಕಾಂಗ್ರೆಸ್ ಘಟಕದ ಅಧ್ಯಕ್ಷ ದೇವಂದ್ರ ಯಾದವ್, ‘ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳಿಗೆ 400 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ಪೂರೈಸಲಾಗುವುದು’ ಎಂಬ ಭರವಸೆ ನೀಡಿದ್ದಾರೆ.

ಪ್ರಸ್ತುತ ದೆಹಲಿಯಲ್ಲಿ ಎಎಪಿ ನೇತೃತ್ವದ ಸರ್ಕಾರವು ತಿಂಗಳಿಗೆ 200 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ಪೂರೈಸುತ್ತಿದೆ. ‘ವಿದ್ಯುತ್ ಬಿಲ್‌ಗೆ ಸಂಬಂಧಿಸಿದಂತೆ ಗ್ರಾಹಕರ ಲೂಟಿ ತಡೆಯಲಾಗುವುದು’ ಎಂದು ಅವರು ಹೇಳಿದ್ದಾರೆ.

‘ದೆಹಲಿ ನ್ಯಾಯ ಯಾತ್ರೆ’ಯಲ್ಲಿ ಭಾಗವಹಿಸಿ ಮಾತನಾಡಿದ ದೇವೇಂದ್ರ, ‘ಪಕ್ಷವು ಅಧಿಕಾರಕ್ಕೆ ಬಂದಿರುವ ಎಲ್ಲ ರಾಜ್ಯಗಳಲ್ಲೂ ಚುನಾವಣಾ ಪೂರ್ವ ನೀಡಿದ ಭರವಸೆಗಳನ್ನು ಈಡೇರಿಸಲಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚಲನಚಿತ್ರ ವಾಣಿಜ್ಯ ಮಂಡಳಿ | ಲೈಂಗಿಕ ದೌರ್ಜನ್ಯ ತಡೆ? ಸಮಿತಿ ರಚಿಸಿ ತಡೆ ಹಿಡಿದದ್ದು ಯಾಕೆ? – ಫೈರ್ ಸಂಸ್ಥೆ ಪ್ರಶ್ನೆ

‘ಆದರೆ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜಿವಾಲ್, ತಮ್ಮ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ವಿಫಲರಾಗಿದ್ದಾರೆ. ತಮ್ಮ ಅಸಮರ್ಥತೆಗಾಗಿ ಲೆ.ಗವರ್ನರ್ ಹಾಗೂ ಇತರರ ಮೇಲೆ ಆರೋಪ ಹೊರಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

‘ದೆಹಲಿಯನ್ನು ಪ್ಯಾರಿಸ್ ಹಾಗೂ ಲಂಡನ್ ಆಗಿ ಪರಿವರ್ತಿಸುವುದಾಗಿ ಕೇಜಿವಾಲ್ ಭರವಸೆ ನೀಡಿದ್ದರು. ಆದರೆ ಎಲ್ಲೆಡೆ ಮಾಲಿನ್ಯ
ತುಂಬಿಕೊಂಡಿದ್ದು, ಜನಜೀವನ ದುಸ್ತರವಾಗಿದೆ’ ಎಂದು ಅವರು ಟೀಕಿಸಿದ್ದಾರೆ.

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜಿವಾಲ್ ಸ್ಪಷ್ಟಪಡಿಸಿದ್ದರು.

2015 ಮತ್ತು 2020ರ ವಿಧಾನಸಭಾ ಚುನಾವಣೆಗಳಲ್ಲಿ, ಕಾಂಗ್ರೆಸ್ ಖಾತೆ ತೆರೆಯಲು ವಿಫಲವಾಗಿತ್ತು. ಎಎಪಿಯು ಈ ಎರಡು ಚುನಾವಣೆಯಲ್ಲಿ 70 ಸ್ನಾನಗಳಲ್ಲಿ ಕ್ರಮವಾಗಿ 67 ಹಾಗೂ 62 ಅನ್ನು ಗೆದ್ದುಕೊಂಡಿತ್ತು.

ಇದನ್ನೂ ನೋಡಿ: ನೋವು ಮೆಟ್ಟಿ ಬದುಕು ಕಟ್ಟಿಕೊಳ್ಳೊಣ – ಪಪ್ಪೆಟ್ ಜಾನು ಜೊತೆ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *