ನವದೆಹಲಿ: ವಿರೋಧಪಕ್ಷಗಳ ಮೈತ್ರಿಕೂಟ ಇಂಡಿಯಾದ ಮೂರನೇ ಸಭೆಯು ಮುಂಬೈನಲ್ಲಿ ಆಗಸ್ಟ್ 25,26ರಂದು ನಡೆಯಲಿದ್ದು, ಪ್ರತಿಪಕ್ಷಗಳ ಉನ್ನತ ನಾಯಕರು ಇಂಡಿಯಾದ ಸಮನ್ವಯ ಸಮಿತಿ ಜಂಟಿ ಕಾರ್ಯದರ್ಶಿ ಹಾಗೂ ಇತರ ಪ್ಯಾನೆಲ್‌ಗಳ ಹೆಸರುನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ನೀಡಲಾದ ಆಹಾರದಲ್ಲಿ ಜಿರಳೆ ಪತ್ತೆ
ಶಿವಸೇನೆ (ಉದ್ಧವ್ ಬಣ) ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ಜಂಟಿಯಾಗಿ ಸಭೆಯ ಅತಿಥ್ಯ ವಹಿಸಿದ್ದು, ಕಾಂಗ್ರೆಸ್ ಪಕ್ಷ ಅಗತ್ಯ ಬೆಂಬಲ ನೀಡಿದೆ ಎಂದು ಹೇಳಿವೆ. ಇಂಡಿಯಾದ ಮೊದಲ ಸಭೆ ಪಟ್ನಾದಲ್ಲಿ ನಡೆದಿದ್ದು ಜೆಡಿಯು ಆತಿಥ್ಯ ವಹಿಸಿದ್ದಾರೆ, ಬೆಂಗಳೂರಿನಲ್ಲಿ ನಡೆದ ಎರಡನೇ ಸಭೆಯ ಆತಿಥ್ಯವನ್ನು ಕಾಂಗ್ರೆಸ್ ಪಕ್ಷ ವಹಿಸಿತ್ತು. ಮುಂಬೈನಲ್ಲಿ ನಡೆಯಲಿರುವ ಸಭೆಯಲ್ಲಿ ಸೀಟು ಹಂಚಿಕೆ ವಿಷಯ ಚರ್ಚೆಗೊಳಪಡುವ ಸಂಭವಿದೆ.