ಬೆಂಗಳೂರು : ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಲಾಕ್ಡೌನ್ ಜಾರಿ ಮಾಡಿದೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದೆ. ಆದರೆ ಬೀದಿಬದಿ ವ್ಯಾಪಾರ ಮಾಡುವ ಹಣ್ಣು – ತರಕಾರಿ ವ್ಯಾಪಾರಿಗಳ ಮೇಲೆ ಪೊಲೀಸರು ಹಲ್ಲೆ ನಡೆಸುತ್ತಿದ್ದಾರೆ. ವ್ಯಾಪರ ನಡೆಸೆದಂತೆ ತಾಕೀತು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಬೆಂಗಳೂರಿನ ಗಾಂಧಿ ಬಜಾರ್ ಹಾಗೂ ಎನ್.ಆರ್.ಕಾಲೋನಿಯಲ್ಲಿ ಪೋಲೀಸರು ಹಣ್ಣು , ತರಕಾರಿ, ಹೂವು ಮಾರುವ ಬೀದಿ ವ್ಯಾಪಾರಿಗಳನ್ನು ವ್ಯಾಪಾರ ಮಾಡಲು ಬಿಡುತ್ತಿಲ್ಲ. ಈ ಸರ್ಕಾರ ಯಾವ ಪಾರಿಹಾರನು ಕೊಡಲ್ಲ , ದುಡಿಯಕ್ಕು ಬಿಡಲ್ಲ ಅಂದರೆ ಸಾಯಬೇಕೆ ? ಎಂದು ವ್ಯಾಪಾರಿ ವನಜಾಕ್ಷಿ ಪ್ರಶ್ನಿಸಿದ್ದಾರೆ.
ಹೂವು ಹಣ್ಣು ವ್ಯಾಪಾರ ಮಾಡುವವರು 10 ಫಂಟೆ ತನಕ ಮಾಡಬಹುದು, ಆದರೆ ತಳ್ಲೋಗಾಡಿಯವರು 6 ಫಂಟೆ ತನಕಮಾಡಬಹುದು ಎಂದು ಸರಕಾರ ಹೇಳುತ್ತಿದೆ, ಹಾಗಂತಾ ಮಾರುಕಟ್ಟೆಲಿರುವವರೆಲ್ಲ ತಳ್ಲೋ ಗಾಡಿಲಿ ಹೋಗೋಕೆ ಆಗುತ್ತಾ? ಅವರ ಬಳಿ ಗಾಡಿನೂ ಇಲ್ಲ,ಎಷ್ಟೋ ಮಂದಿಗೆ ತಳ್ಲಲು ಆಗುವುದಿಲ್ಲ, ಹಾಗಾಗಿ ಸರಕಾರ ಬೀದಿಬದಿ ವ್ಯಾಪಾರಿಗಳ ಸಹಾಯಕ್ಕೆ ನಿಲ್ಲಬೇಕು ಎಂದು ವಕೀಲ ವಿನಯ್ ಶ್ರೀನಿವಾಸ ರವರು ಆಗ್ರಹಿಸಿದ್ದಾರೆ.