ಪಂಚರಾಜ್ಯ ಚುನಾವಣೆ : ಕೇರಳದಲ್ಲಿ ಎಲ್‌ಡಿಎಫ್‌ ಮತ್ತೆ ಅಧಿಕಾರಕ್ಕೆ ಬರಲು ಕಾರಣವೇನು?

ಗೆಲ್ಲುತ್ತಾರೆಂದವರೆಲ್ಲ ಏನಾದರು?! – ಮೋದಿ ಅಲೆ ಮಂಕಾಯಿಸಿತೆ ಪಂಚರಾಜ್ಯ ಚುನಾವಣೆ

ಪಂಚರಾಜ್ಯ ವಿಧಾನಸಭಾ ಫಲಿತಾಂಶ ಪ್ರಕಟವಾಗಿದ್ದು, ಸರಕಾರ ರಚನೆಗೆ ಪ್ರಕ್ರಿಯೆಗಳು ಆರಂಭವಾಗಿವೆ. ಈ ಬಾರಿಯ ಚುನಾವಣೆಯಲ್ಲಿ ಗೆದ್ದೇ ಗೆಲ್ತಾರೆ ಅಂದು ಕೊಂಡಿದ್ದವರ ಫಲಿತಾಂಶ ಏನಾಯ್ತು? ಮತದಾರನ ತೀರ್ಪುನಲ್ಲಿ ಏನಿದೆ? ಚುನಾವಣೆಯ ಇಣುಕು ನೋಟ ಇಲ್ಲಿದೆ.

ಪಂಚ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶವು ಆಡಳಿತ ವಿರೋಧಿ ಅಲೆಗಿಂತಲೂ ಆಡಳಿತ ಪರ ಅಲೆಗೆ ಸಾಕ್ಷಿಯಾಗಿದೆ.  ಹೌದು..! ಪಶ್ಚಿಮ ಬಂಗಾಳ, ಕೇರಳ, ಹಾಗೂ ಅಸ್ಸಾಂನಲ್ಲಿ ಆಡಳಿತ ಪಕ್ಷವೇ ಮತ್ತೆ ಗೆಲುವನ್ನು ದಾಖಲಿಸಿವೆ. ಕೇರಳದಲ್ಲಿ ಆಡಳತಾರೂಢ ಎಲ್‌.ಡಿ.ಎಫ್‌.ಗೆ ಅಭೂತಪೂರ್ವ ಚಾರಿತ್ರಿಕ ಜನಾದೇಶ ಸಿಕ್ಕಿದ್ದರೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಪ್ರಬಲ ಪೈಪೋಟಿ ನಡುವೆಯೂ ತೃಣಮೂಲ ಕಾಂಗ್ರೆಸ್‌ ಗೆಲುವು ದಾಖಲಿಸಿದೆ. ಅಸಸಾಂ ನಲ್ಲಿ ಬಿಜೆಪಿ ಮಿತ್ರಕೂಟ ಜಯಭೇರಿ ಬಾರಿಸುವ ಮೂಲಕ ಆಡಳಿತವನ್ನು ಮತ್ತೆ ಉಳಸಿಕೊಂಡಿವೆ. ತಮಿಳುನಾಡಿನಲ್ಲಿ ಡಿಎಂಕೆ ಸ್ಪಷ್ಟ ಬಹುಮತ ಪಡೆದಿದ್ದು, ಪುದುಚೇರಿಯಲ್ಲಿ ಎನ್, ಆರ್‌,ಸಿ ಪಕ್ಷ ಬಹುಮತವನ್ನು ಪಡೆದಿದೆ.

ಕೊರೊನಾ ವೈರಸ್ ವಿಚಾರದಲ್ಲಿ ಇಲ್ಲಿನ ಸರ್ಕಾರಗಳು ಕೈಗೊಂಡ ನಿಲುವು ಈ ಗೆಲುವಿಗೆ ಮುಖ್ಯ ಕಾರಣ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.  ಇದರ ಜೊತೆಯಲ್ಲೆ ಜೊತೆಯಲ್ಲೇ ಕೇಂದ್ರದ ಕೃಷಿ ಕಾಯ್ದೆ, ಸಿಎಎ ವಿರೋಧಿ ನಿಲುವು ಕೂಡಾ ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ಆಡಳಿತಾರೂಢ ಪಕ್ಷಗಳಿಗೆ ಲಾಭವಾಗಿದೆ ಎಂಬುದು ರಾಜಕೀಯ ಲೆಕ್ಕಚಾರವಾಗಿದೆ. ಯಾವ ರಾಜ್ಯದಲ್ಲಿ ಯಾರು ಬಹುಮತಪಡೆದಿದ್ದಾರೆ ನೋಡ್ಕೊಂಡು ಬರೋಣ ಬನ್ನಿ

ಕೇರಳದಲ್ಲಿ ಒಟ್ಟು 140 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ  ಎಲ್‌ಡಿಎಫ್‌ : 99 ಕ್ಷೇತ್ರಗಳನ್ನು,  ಯುಡಿಎಫ್-‌ 41 ಕ್ಷೇತ್ರಗಳನ್ನು ಗೆದ್ದಿದ್ದರೆ, ಬಿಜೆಪಿ ಯಾವುದೇ ಸ್ಥಾನ ಪಡೆದುಕೊಂಡಿಲ್ಲ. ಸರಕಾರ ರಚನೆಗೆ ಬೇಕಾಗಿರುವ ಸಂಖ್ಯೆ 71,  ಎಲ್.ಡಿಎಫ್‌ ಇಲ್ಲಿ ಸ್ಪಷ್ಟ ಬಹುಮತವನ್ನು ಪಡೆದಿದೆ.

ಪಶ್ಚಿಮ ಬಂಗಾಳ 394 ವಿಧಾನಸಭಾ ಕ್ಷೇತ್ರಗಳಿವೆ,  2 ಕ್ಷೇತ್ರಕ್ಕೆ ಚುನಾವಣೆ ನಡೆದಿಲ್ಲ, 292 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ, ಟಿಎಂಸಿ -213, ಬಿಜೆಪಿ : 77, ಎಡರಂಗ ಮತ್ತು ಕಾಂಗ್ರೆಸ್‌ : ಯಾವುದೆ ಸ್ಥಾನ ಸಿಕ್ಕಿಲ್ಲ,  ಇತರರು : 3 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದ್ದಾರೆ.  ಸರಕಾರ ರಚನೆಗೆ ಬೇಕಿರುವ ಸಂಖ್ಯೆ 147. ಟಿಎಂಸಿ ಸ್ಪಷ್ಟ ಬಹುಮತ ಪಡೆದಿದೆ

ತಮಿಳುನಾಡು  ಒಟ್ಟು ಕ್ಷೇತ್ರ 234  ಡಿಎಂಕೆ : 133, ಎಐಡಿಎಂಕೆ : 66, ಕಾಂಗ್ರೆಸ್‌ : 18, ಎಡಪಕ್ಷಗಳು : 04 ಬಿಜೆಪಿ : 04  ಇತರರು 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಸರಕಾರ ರಚನೆಗೆ ಬೇಕಾಗಿರುವ ಸಂಖ್ಯೆ 117, ಡಿಎಂಕೆ ಸ್ಪಷ್ಟ ಬಹುಮತ ಪಡೆದಿದೆ.

ಅಸ್ಸಾಂ :  ಒಟ್ಟು  126 ವಿಧಾನಸಭಾ ಕ್ಷೇತ್ರಗಳಿವೆ, ಬಿಜೆಪಿ : 60, ಕಾಂಗ್ರೆಸ್‌ ; 29 ಎಐಯುಡಿಎಫ್‌ : 16, ಎಜಿಎಂ : 9, ಸಿಪಿಐಎಂ 01 ಇತರರು : 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಎನ್.ಡಿ.ಎ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದಿದೆ.

ಪುದುಚೇರಿ  ಒಟ್ಟು ಕ್ಷೇತ್ರ 30,  ಎನ್, ಆರ್‌,ಸಿ : 10, ಬಿಜೆಪಿ : 06, ಡಿಎಂಕೆ : 06 ಕಾಂಗ್ರೆಸ್‌ 02 ಇತರರು : 06 ಸರಕಾರ ರಚನೆಗೆ 16 ಸಂಖ್ಯಾ ಬಲ ಬೇಕು . ಎನ್.ಡಿ.ಎ ಸ್ಪಷ್ಟ ಬಹುಮತ ಪಡೆದಿದೆ.

ಇನ್ನೂ ಗೆದ್ದೆ ಗೆಲ್ತಾರೆ ಎಂದು ಹೇಳಲಾಗುತ್ತಿದ್ದವರಲ್ಲಿ ಬಹುತೇಕರು ಸೋಲುಂಡಿದ್ದಾರೆ. ಪ್ರಮುಖವಾಗಿ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಗೆದ್ದೇ ಗೆಲ್ತಾರೆ ಎಂದು ಅಂದಾಜಿಸಲಾಗಿತ್ತು. ಆದ್ರೆ ಅವರ ಪಕ್ಷ ಟಿಎಂಸಿ ಭರ್ಜರಿ ಗೆಲುವು ದಾಖಲಿಸಿತಾದ್ರೂ ಸ್ವತಃ ಮಮತಾ ಬ್ಯಾನರ್ಜಿ ಸೋತಿರುವುದು ಅಚ್ಚರಿ ಮೂಡಿಸಿದೆ. ಮತ್ತೊಂದು ಕಡೆ ಕರ್ನಾಟಕ ಸಿಂಗಂ ಎಂದು  ಖ್ಯಾತಿ ಗಳಿಸಿದ್ದ ಅಣ್ಣಾಮಲೈ ಬಿಜೆಪಿಯಿಂದ ಚುನಾವಣೆ ಎದುರಿಸಿದ್ರು. ಚುನಾವಣೆಯಲ್ಲಿ ಸೋಲಿನ ಶಾಕ್​ ಗೆ ಒಳಗಾಗಿದ್ದಾರೆ. ಇನ್ನು ಇತ್ತೀಚೆಗಷ್ಟೇ ಬಿಜೆಪಿಗೆ ಸೇರಿದ್ದ ನಟಿ ಖುಷ್ಬೂ ಕಮಲವನ್ನು ಅರಳಿಸುವಲ್ಲಿ ವಿಫಲರಾಗಿದ್ದಾರೆ.‌

ತಮಿಳುನಾಡಿನಲ್ಲಿ ಹೊಸ ಬದಲಾವಣೆ ತರುವ ವಿಶ್ವಾಸದಿಂದ ಕಣಕ್ಕಿಳಿದಿದ್ದ ಹಿರಿಯ ನಟ ಕಮಲ್ ಹಾಸನ್ ಕೂಡ ತಮ್ಮ ಮೊದಲ ಪ್ರಯತ್ನದಲ್ಲಿ ಸೋತಿದ್ದಾರೆ. ಆಂಧ್ರ ಪ್ರದೇಶದ ತಿರುಪತಿ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಕೂಡ ಸೋತಿದ್ದಾರೆ, ಮೆಟ್ರೋ ಮ್ಯಾನ್ ಎಂದೇ ಖ್ಯಾತಿ ಗಳಿಸಿದ್ದ ಕೇರಳದ ಶ್ರೀಧರನ್‌ ಕೂಡ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ.

ಐದು ವಿಧಾನಸಭಾ ಚುನಾವಣಾ ಫಲಿತಾಂಶಗಳು  ಒಟ್ಟಾರೆಯಾಗಿ ಬಿಜೆಪಿಗೆ ತೀವ್ರ ಹಿನ್ನಡೆಯನ್ನು ತೋರಿಸುತ್ತಿವೆ. ಕೋಮು ಭಾವನೆಗಳನ್ನು ಬಡಿದೆಬ್ಬಿಸಲು ಎಷ್ಟೇ ಪ್ರಯತ್ನಿಸಿದರೂ, ಅಗಾಧ ಪ್ರಮಾಣದಲ್ಲಿ ಹಣ ಸುರಿದರೂ, ಆಡಳಿತ ವ್ಯವಸ್ಥೆಯನ್ನು ಮತ್ತು ಚುನಾವಣಾ ಯಂತ್ರವನ್ನು ತನಗೆ ಅನುಕೂಲವಾಗುವಂತೆ ಬಳಸಿಕೊಳ್ಳುವ ಕೈಚಳಕ ನಡೆಸಿದರೂ, ಜನಗಳ ಬೆಂಬಲವನ್ನು ಪಡೆಯುವಲ್ಲಿ ಬಿಜೆಪಿ ವಿಫಲವಾಗಿದೆ ಎಂಬುದನ್ನು ಈ ಚುನಾವಣೆ ಸ್ಪಷ್ಟಪಡಿಸಿದೆ. ನಾವೀಗ ಕೇರಳದಲ್ಲಿ ಆಡಳಿತಾರೂಢ ಎಲ್‌.ಡಿ.ಎಫ್‌ಗೆ  ಅಭೂತಪೂರ್ವ ಐತಿಹಾಸಿಕ ಗೆಲುವು ಸಿಗಲು ಕಾರಣವೇನು ಎನ್ನುವುದರ ಕಡೆ ಗಮನ ಹರಿಸೋಣ

ನಾಲ್ಕು ದಶಕಗಳ ಸಂಪ್ರದಾಯ ಈ ಬಾರಿಯ ಚುನಾವಣೆಯಲ್ಲಿ ಮುರಿದಿದ್ದು, ಎಲ್‌ಡಿಎಫ್ ಸತತ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಿದೆ. ಕೇರಳದಲ್ಲಿ ಒಂದು ಬಾರಿ ಎಲ್.ಡಿ.ಎಫ್.‌ ಅಧಿಕಾರ ನಡೆಸಿದರೆ ಮತ್ತೊಂದು ಬಾರಿ ಯುಡಿಎಫ್‌ ಅಧಿಕಾರ ನಡೆಸುತ್ತಿತ್ತು, 1980 ರಿಂದಲೂ ಇದೇ ಸಂಪ್ರದಾಯ ಮುಂದುವರೆದಿತ್ತು ಅದರೆ ಅಲ್ಲಿನ ಮತದಾರ  ಈ ಬಾರಿ ಮತ್ತೆ ಎಲ್.ಡಿಎಫ್‌‌ಗೆ ಅಧಿಕಾರ ನೀಡಿದ್ದಾರೆ. ಆಡಳಿತ ಪಕ್ಷ ಅಲ್ಲಿನ ಜನರ ಆಶೋತ್ತರಗಳಿಗೆ ತಕ್ಕಂತೆ ಕೆಲಸ ಮಾಡಿದ್ದರಿಂದ ಆಡಳಿತ ವಿರೋಧಿ ಅಲೆ ಅಲ್ಲಿ ಇರಲಿಲ್ಲ, ಆದರೆ ಹೇಗಾದರೂ ಮಾಡಿ ಗೆಲ್ಲಬೇಕು ಎಂದು ಹರ ಸಾಹಸ ಪಟ್ಟಿದ್ದ ಯು.ಡಿ.ಎಫ್‌ ಹೀನಾಯವಾಗಿ ಸೋಲುಂಡಿದೆ. ಎಲ್‌,ಡಿ.ಎಫ್.‌ ಯು.ಡಿ.ಎಫ್‌ ಗೆ ಪರ್ಯಾಯವಾಗಿ ಹುಟ್ಟಿಕೊಂಡ ರಂಗ ಎಂದು ಪ್ರಚಾರ ಮಾಡಿದ್ದ ಬಿಜೆಪಿ ಮತ್ತು ಮಿತ್ರಪಕ್ಷ ಶೂನ್ಯ ಸಾಧನೆಯನ್ನು ಮಾಡಿವೆ.  ಪಕ್ಷಗಳ ಬಲಾಬಲ ಮತ್ತು ಮತಗಳಿಕೆ ಹೇಗಿದೆ ಎನ್ನುವುದನ್ನು ನೋಡೋಣ.

2016 ರಲ್ಲಿ ಎಲ್.ಡಿ.ಎಫ್  91 ಸ್ಥಾನಗಳಲ್ಲಿ ಜಯಗಳಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ 99 ಸ್ಥಾನಗಳಿಸಿದೆ.  ಕಳೆದ ಬಾರಿಗಿಂತ ಎಂಟು ಸ್ಥಾನಗಳು ಹೆಚ್ಚಾಗಿ ಗೆದ್ದಿದೆ. ಯುಡಿಎಫ್‌ 2016 ರಲ್ಲಿ 47 ಸ್ಥಾನಗಳಲ್ಲಿ ಜಯಗಳಿಸಿತ್ತು, ಈ ಬಾರಿ 41 ಸ್ಥಾನಗಳಲ್ಲಿ ಗೆಲುವು ಸಾದಿಸುವ ಮೂಲಕ  6 ಸ್ಥಾನಗಳನ್ನು ಕಳೆದು ಕೊಂಡಿದೆ. ಬಿಜೆಪಿ 2016 ರ ಚುನಾವಣೆಯಲ್ಲಿ 01 ಸ್ಥಾನದಲ್ಲಿ ಗೆಲುವು ಸಾಧಿಸಿತ್ತಯ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಶೂನ್ಯ ಸಾಧನೆ ಮಾಡಿದೆ.  ಶೇಕಡಾವಾರು ಮತಪ್ರಮಾಣ ನೋಡುವುದಾದರೆ  2016 ರಲ್ಲಿ ಎಲ್.ಡಿ.ಎಫ್‌ : 43.48%   ಯುಡಿಎಫ್‌ :  38.81%  ಎನ್‌,ಡಿ.ಎ 14.96 ರಷ್ಟು ಇತ್ತು. ಈ ಬಾರಿಯ ಚುನಾವಣೆಯಲ್ಲಿ ಎಲ್.ಡಿ.ಎಫ್‌  ಮತಗಳಿಕೆ 44.05%  ಆಗಿದ್ದರೆ,  ಯುಡಿಎಫ್‌  ಮತಗಳಿಗೆ 37. 06 %  ಎನ್.ಡಿ.ಎ – 12.06% ಮತಗಳನ್ನು ಪಡೆದಿದೆ.

ಇದನ್ನೂ ಓದಿ : ನೂರು ದಿನ ನೂರು ಪ್ರಾಜೆಕ್ಟ್ : ಕೇರಳ ಸರ್ಕಾರದ ಮತ್ತೊಂದು ಮೈಲಿಗಲ್ಲು

 

ಇಲ್ಲಿ ಪ್ರಮುಖವಾಗಿ ಬಿಜೆಪಿ ಎರಡಂಕಿ ದಾಟಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದರು. ಆದರೆ ಬಿಜೆಪಿ ಇದ್ದ ಸ್ಥಾನವನ್ನು ಕಳೆದು ಕೊಂಡಿದೆ. ಬಿಜೆಪಿ ಅಲ್ಲಿ ಸತತವಾಗಿ ಹಿನ್ನಡೆಯನ್ನು ಅನುಭವಿಸುತ್ತಿದೆ.  2011 ರಲ್ಲಿ ಬಿಜೆಪಿ ಮತ ಪ್ರಮಾಣ 6.6 ನಷ್ಟಿದ್ದರೆ 2016 ರಲ್ಲಿ ಅದು 14.96 ಕ್ಕೆ ಏರಿಕೆಯಾಗುತ್ತದೆ.  2019 ರ ಲೋಕಸಭಾ ಚುನಾವಣೆಯಲ್ಲಿ 15.64  ಕ್ಕೆ ಏರಿಕೆಯಾಗುತ್ತದೆ.  2020 ರಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 14.52 ಕ್ಕೆ ಕುಸಿತವನ್ನು ಕಂಡು ಈ ಬಾರಿಯ ಚುನಾವಣೆಯಲ್ಲಿ 11. 35 ಕ್ಕೆ ಇಳಿಕೆಯಾಗಿದೆ.  ಹಾಗಾದರೆ ಬಿಜೆಪಿ ಮತಗಳು ಎಲ್ಲಿ ಹೋದವು ಎನ್ನುವುದನ್ನು ನೋಡುವುದಾದರೆ ಬಿಜೆಪಿಯ ಮತಗಳು ಎಲ್ಲಿಗೆ ಹೋದವು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.  90 ಕ್ಷೇತ್ರಗಳಲ್ಲಿ ಬಿಜೆಪಿಯ ಮತಗಳು ಕಾಂಗ್ರೆಸ್‌ ಗೆ ಹೋಗಿವೆ. ಬಿಜೆಪಿ ಮತಗಳಿಂದಾಗಿ ಕಾಂಗ್ರೆಸ್‌ 10 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪ್ರತಿಕ್ರೀಯಿಸಿದ್ದಾರೆ. ಒಟ್ಟಾರೆ ಕೇರಳ ಚುನಾವಣೆಯಲ್ಲಿ ಸಿಪಿಐಎಂ  62 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದ್ದು, ಎಲ್.ಡಿಎಫ್‌ ನೇತೃತ್ವದಲ್ಲಿ ಸರಕಾರ ರಚಿಸಲು ಮುಂದಾಗಿದೆ.

ಕೇರಳ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ 11 ಮಹಿಳಾ ಶಾಸಕರು ವಿಧಾನಸಭೆಗೆ ಆಯ್ಕೆಯಾಗಿರುವುದು ವಿಶೇಷ ಸಂಗತಿ,  2001ರ ಬಳಿಕ ಶಾಸಕಿಯರ ಸಂಖ್ಯೆ ಇದೇ ಮೊದಲ ಬಾರಿಗೆ ಡಬಲ್‌ ಡಿಜಿಟ್‌ ತಲುಪಿದೆ. 140 ಸದಸ್ಯಬಲದ ವಿಧಾನಸಭೆಯಲ್ಲಿ103 ಕ್ಷೇತ್ರಗಳಿಗೆ ವಿವಿಧ ಪಕ್ಷಗಳಿಂದ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ 11 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ. ಇದರಲ್ಲಿ ಹತ್ತು ಎಲ್‌ಡಿಎಫ್‌ ಹಾಗೂ ಒಬ್ಬರು ಯುಡಿಎಫ್‌ ಕೂಟದ ಶಾಸಕರಾಗಿದ್ದಾರೆ.

1996ರ ವಿಧಾನಸಭೆ ಚುನಾವಣೆಯಲ್ಲಿ13 ಮಹಿಳಾ ಶಾಸಕರು ಕೇರಳ ವಿಧಾನಸಭೆ ಪ್ರವೇಶಿಸಿದ್ದರು. 2016ರಲ್ಲಿ ಎಂಟು ಮಹಿಳಾ ಶಾಸಕರು ಆಯ್ಕೆಯಾಗಿದ್ದರು. ಈ ಸಲ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ದಾಖಲೆಯ 60 ಸಾವಿರ ಮತಗಳ ಅಂತರದಲ್ಲಿ ಮಟ್ಟನ್ನೂರು ಕ್ಷೇತ್ರದಿಂದ  ಆಯ್ಕೆಯಾಗಿದ್ದಾರೆ. ಜಾಗತಿಕವಾಗಿ ಶೈಲಜಾ ಟೀಚರ್‌ ಖ್ಯಾತಿಯನ್ನು ಹೊಂದಿದ್ದರು. ಆರೋಗ್ಯವ್ಯವಸ್ಥೆಯನ್ನು ನಿರ್ವಹಿಸಿದ ರೀತಿ ಜಾಗತಿಕವಾಗಿ ಮೆಚ್ಚುಗೆಯನ್ನು ಪಡೆದಿತ್ತು.

ಇದನ್ನು ಓದಿ: ಬಿಬಿಎಂಪಿ ಬೆಡ್‌ ಹಗರಣ : ಹಗರಣದ ಹಿಂದಿರುವವರು ಯಾರು?

ಎಲ್.ಡಿ.ಎಫ್‌ ಗೆಲ್ಲಲು ಕಾರಣವಾದ ಅಂಶಗಳೇನು ಎಂಬುದರ ಕಡೆ ನಾವೀಗ ಗಮನವನ್ನು ಹರಿಸೋಣ, ನೈಸರ್ಗಿಕ ವಿಪತ್ತುಗಳು ಒಂದೆಡೆಯಾದರೆ, ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಾನುಮತಿ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿತ್ತು.  ಅವೆಲ್ಲವನ್ನು ಎಲ್‌,ಡಿ.ಎಫ್‌ ಸರಕಾರ ಅಲ್ಲಿನ ಜನರ ನಿರೀಕ್ಷೆಗಳಂತೆ ಸಲೀಸಾಗಿ ಎದುರಿಸಿತು.  ಮುಖ್ಯವಾಗಿ  ಎರಡು ಬಾರಿ  ಉಂಟಾದ ಪ್ರವಾಹ, ನಿಫಾ ವೈರಸ್, ಓಖಿ ಬಿರುಗಾಳಿ ಇದೀಗ ಕೊರೊನಾ ವೈರಸ್… ಒಂದಾದ ನಂತರ ಮತ್ತೊಂದು ಎಂಬಂತೆ ಸಮಸ್ಯೆಗಳು ಎದುರಾದಾಗ ನಾವು ಒಗ್ಗಟ್ಟಾಗಿ ಎಲ್ಲವನ್ನೂ ಎದುರಿಸೋಣ ಎಂದು ರಾಜ್ಯದ ಜನರಿಗೆ ಆಶ್ವಾಸನೆ ನೀಡಿದ್ದ ಪಿಣರಾಯಿ ಜನರ ಪರವಾಗಿ ನಿಂತರು, ಜನರ ಬಗ್ಗೆ ಕಾಳಜಿ ವಹಿಸಿ ಜನಪರ ಸರಕಾರ ಎಂದು ಕರೆಸಿಕೊಂಡಿತು.

ಕಳೆದ ಐದು ವರ್ಷಗಳು ಪಿಣರಾಯಿ ವಿಜಯನ್ ವಿರುದ್ಧ ಎಷ್ಟೇ ಟೀಕೆಗಳು ಕೇಳಿಬಂದರೂ ಅದಕ್ಕಿಂತ ದುಪ್ಪಟ್ಟು ಶ್ಲಾಘನೆಗಳು ಕೇಳಿ ಬಂದ ವರ್ಷವಾಗಿದೆ. ಉತ್ತಮ ಅಧಿಕಾರ ನೀಡುವಲ್ಲಿ ಎಲ್​ಡಿಎಫ್ ಸರ್ಕಾರ ಪರಾಭವಗೊಂಡಿದೆ ಎಂದು ವಿಪಕ್ಷಗಳು ಟೀಕಿಸಿದಾಗಲೆಲ್ಲ ಜನಪರ ನೀತಿಗಳೊಂದಿಗೆ ಪಿಣರಾಯಿ ಸರ್ಕಾರ ಮುಂದೆ ಬರುತ್ತಿತ್ತು. ಕೇರಳದಲ್ಲಿ ಪ್ರವಾಹ ಬಂದಾಗ ಮಲಯಾಳಿಗಳೆಲ್ಲರೂ ಒಗ್ಗಟ್ಟಾಗಿ ಇದನ್ನು ಎದುರಿಸೋಣ ಎಂಬ ಪಿಣರಾಯಿ ವಿಜಯನ್ ಕರೆಗೆ ವಿಪಕ್ಷ ಯುಡಿಎಫ್ ಕೂಡಾ ಓಗೊಟ್ಟಿತ್ತು.

ಪ್ರವಾಹ, ಕೊವಿಡ್ ಲಾಕ್​ಡೌನ್​ನಿಂದಾಗಿ ರಾಜ್ಯ ಆರ್ಥಿಕ ಬಿಕ್ಕಟ್ಟು ಅನುಭವಿಸಿದಾಗಲೂ ಯಾರೂ ಹೆದರಬೇಕಾಗಿಲ್ಲ ಎಲ್​ಡಿಎಫ್ ಸರ್ಕಾರ ಜನರೊಂದಿಗೆ ಇರುತ್ತದೆ ಎಂಬ ಭರವಸೆ ನೀಡಿದ್ದರು ಪಿಣರಾಯಿ. ಇದು ಕೇವಲ ಬಾಯಿ ಮಾತು ಆಗಿರಲಿಲ್ಲ. ಜನರಿಗಾಗಿ ಉಚಿತ ಆಹಾರ ಕಿಟ್ ಗಳನ್ನು ವಿತರಿಸುವ ಮೂಲಕ ಹೆಚ್ಚುವರಿ ಪಡಿತರ, ಹಸಿದವರಿಗೆ ಅನ್ನ ನೀಡುನ ಕಮ್ಯೂನಿಟಿ ಕಿಚನ್ ಗಳನ್ನು ಸ್ಥಾಪಿಸಿ ‘ಜನರಿಂದಲೇ ಸರ್ಕಾರ’ ಎಂಬ ಧ್ಯೇಯವನ್ನು ಅಕ್ಷರಶಃ ಪಾಲಿಸಿದರು. ಪ್ರವಾಹದಲ್ಲಿ ಮನೆ ಕಳೆದುಕೊಂಡ ಜನರಿಗೆ ಸುಸಜ್ಜಿತವಾದ ಮನೆಗಳನ್ನು ಎಲ್.ಡಿಎಫ್‌ ಸರಕಾರ ನಿರ್ಮಾಣ ಮಾಡಿಕೊಟ್ಟಿತ್ತು.

ನಿಫಾ ವೈರಸ್, ಕೊರೊನಾ ವೈರಸ್ ವಿರುದ್ಧ ಕೇರಳ ಸರ್ಕಾರ ನಡೆಸಿದ ಹೋರಾಟವನ್ನು ಇಡೀ ಜಗತ್ತೇ ಶ್ಲಾಘಿಸಿತು. ಕೊವಿಡ್ ರೋಗ ಹರಡುವಿಕೆಯ ಬಗ್ಗೆ ಜಾಗೃತಿ ಮೂಡಿಸಿದ್ದು ಮಾತ್ರವಲ್ಲದೆ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವಲ್ಲಿಯೂ ಕೇರಳ ಕ್ರಮ ಕೈಗೊಂಡಿತ್ತು. ಹಲವು ದಶಕಗಳಿಂದ ಎಲ್.ಡಿ.ಎಫ್‌ ಅಧಿಕಾರಕ್ಕೆ ಬಂದಾಗಲೆಲ್ಲ ಆರೋಗ್ಯ ವ್ಯವಸ್ತೆಯನ್ನು ಬಲಪಡಿಸುತ್ತಾ ಬರುತ್ತಿದೆ.  ಮುಖ್ಯವಾಗಿ ಎನ್‌,ಆರ್‌, ಸಿ ಸಿಎಎ ಕಾಯ್ದೆ ಜಾರಿ ವಿಚಾರದಲ್ಲಿ ಕೇರಳ ಸರಕಾರ ತೆಗೆದುಕೊಂಡ ನಿಲುವು ಅಲ್ಲಿನ ಜನರ ಮೆಚ್ಚೆಗೆಗೆ ಕಾರಣವಾಗಿದೆ. ಕೇರಳಲದಲಿ ಎನ್‌,ಆರ್‌,ಸಿ, ಸಿಎಎ ಜಾರಿ ಮಾಡುವುದಿಲ್ಲ ಯಾರೂ ಹೆದರಬೇಕಿಲ್ಲ ಎಂದು ಸರಕಾರ ನೀಡಿದ್ದ ಭರವಸೆ, ಮತ್ತೆ  ಎಲ್‌,ಡಿ,ಎಫ್‌ ಆಯ್ಕೆಗೆ ಕಾರಣವಾಯಿತು.

ಕೇಂದ್ರ ಸರಕಾರ ಜಾರಿಗೆ ತಂದ  ಕೃಷಿ ಮತ್ತು ಕಾರ್ಮಿಕ ಕಾಯ್ದೆಗಳನ್ನು ಜಾರಿ ಮಾಡುವುದಿಲ್ಲ ಎಂದ ಎಡರಂಗ ಸರಕಾರ ಖಡಕ್ಕಾಗಿ ಕೇಂದ್ರಕ್ಕೆ ಸಂದೇಶವನ್ನು ರವಾನಿಸಿತ್ತು. ಎಡರಂಗ ಸರಕಾರ ತೆಗೆದುಕೊಂಡ ನಿರ್ಧಾರಕ್ಕೆ 140 ಶಾಸಕರು ಮತವನ್ನು ಹಾಕಿ ಅಂಗೀಕಾರ ಮಾಡಿದ್ದರು. ಅದರಲ್ಲಿ ಬಿಜೆಪಿಯಿಂದ ಗೆದ್ದಿದ್ದ ಶಾಸಕರು ಸೇರಿದ್ದರು. ರಾಜ್ಯದ ಹಿತದೃಷ್ಟಿಯಿಂದ ಕೇರಳ ಸರಕಾರ ತೆಗೆದುಕೊಂಡ ನಿಲುವು ಸರಿಯಿದೆ ನಾನು ಬೆಂಬಲಿಸುತ್ತೇನೆ ಎಂದು ಹೇಳಿದ್ದರು. ಜನರಿಗೆ ಅಪಾಯ ಎಂದು ಎದುರಾದಾಗ ಹೇಗೆ ಐಕ್ಯತೆಯಿಂದ, ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಪಾಠವನ್ನು ಕೇರಳದ ಎಡರಂಗ ಸರಕಾರ ಕಲಿಸಿಕೊಟ್ಟಿದೆ.

 

Donate Janashakthi Media

Leave a Reply

Your email address will not be published. Required fields are marked *