384 ಕೆಎಎಸ್ ಹುದ್ದೆಗಳ ನೇಮಕಾತಿಗೆ ಆ. 25ರಂದು ಪೂರ್ವಭಾವಿ ಪರೀಕ್ಷೆ

ಬೆಂಗಳೂರು: ಪ್ರಸಕ್ತ ಸಾಲಿನ ಗೆಜೆಟೆಡ್ ಪ್ರಬೇಷನರ್ಸ್ 384 ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ಆಗಸ್ಟ್ 25ರಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗುವುದು.

ಆಗಸ್ಟ್ 25ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪತ್ರಿಕೆ-1, ಮಧ್ಯಾಹ್ನ 2 ರಿಂದ 4 ಸಂಜೆ 4 ಗಂಟೆವರೆಗೆ ಪತ್ರಿಕೆ -2 ಪರೀಕ್ಷೆ ಇರಲಿದೆ.

ಇದನ್ನೂ ಓದಿ: ಹತ್ರಾಸ್ ಕಾಲ್ತುಳಿತ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

ಈ ಮೊದಲು ಜುಲೈ 21ರಂದು ಪೂರ್ವಭಾವಿ ಪರೀಕ್ಷೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ, ಸರ್ಕಾರ 2017 -18ರಲ್ಲಿ ಕೆಎಎಸ್ ಪರೀಕ್ಷೆ ಬರೆದಿದ್ದ ಎಲ್ಲಾ ಅಭ್ಯರ್ಥಿಗಳಿಗೂ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಿ ಹೊಸ ದಿನಾಂಕ ನಿಗದಿಪಡಿಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಡಾ. ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಪೂರ್ವಭಾವಿ ಪರೀಕ್ಷೆ ಅಂತಿಮ ವೇಳಾಪಟ್ಟಿ

ಪರೀಕ್ಷೆ ದಿನಾಂಕ ಪರೀಕ್ಷೆ ಸಮಯ ಪರೀಕ್ಷೆ ಪತ್ರಿಕೆ
25-08-2024 10-00 am To 12-00pm ಪತ್ರಿಕೆ-1
25-08-2024 02-00 pm To 04-00pm ಪತ್ರಿಕೆ-2

ಕೆಎಎಸ್‌ ಪರೀಕ್ಷೆ ಮಾದರಿ : ಕೆಪಿಎಸ್‌ಸಿ ಕೆಎಎಸ್ ಪರೀಕ್ಷೆಯಲ್ಲಿ ಮುಖ್ಯವಾಗಿ 3 ಹಂತದ ಪರೀಕ್ಷೆಗಳು ಇರುತ್ತವೆ. ಪೂರ್ವಭಾವಿ ಪರೀಕ್ಷೆ : ತಲಾ 200 ಅಂಕಗಳ 2 ಪತ್ರಿಕೆಗಳಿದ್ದು, 400 ಅಂಕಗಳಿಗೆ ಪರೀಕ್ಷೆ ಮುಖ್ಯ ಪರೀಕ್ಷೆ: ಕಡ್ಡಾಯ ಪತ್ರಿಕೆಗಳು 2, ಐಚ್ಛಿಕ ಪತ್ರಿಕೆಗಳು 5. ವ್ಯಕ್ತಿತ್ವ ಪರೀಕ್ಷೆ : 50 ಅಂಕಗಳಿಗೆ

ಕರ್ನಾಟಕ ಸರ್ಕಾರವು 2017-18 ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ವಯಸ್ಸಿನ ನಿರ್ಬಂಧ ಇಲ್ಲದೇ ಒಂದು ಬಾರಿಗೆ ಸೀಮಿತಗೊಳಿಸಿ, ಈ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಆನ್‌ಲೈನ್‌ ಅರ್ಜಿ ಸಲ್ಲಿಸಲು https://kpsconline.karnataka.gov.in/HomePage/index.htmlವೆಬ್‌ಸೈಟ್‌ಗೆ ಅಭ್ಯರ್ಥಿಗಳು ಭೇಟಿ ನೀಡುವುದು.

ಇದನ್ನೂ ನೋಡಿ: ಬಿಹಾರದಲ್ಲಿ ಸರಣಿ ಸೇತುವೆ ಕುಸಿತ : 15 ದಿನಗಳಲ್ಲಿ 10 ಕುಸಿತ ಪ್ರಕರಣJanashakthi Media

Donate Janashakthi Media

Leave a Reply

Your email address will not be published. Required fields are marked *