ನ್ಯೂಸ್ ಕ್ಲಿಕ್ ಮೇಲೆ ಇಡಿ ದಾಳಿ : ವಿಮರ್ಶಾತ್ಮಕ ಪತ್ರಿಕೋದ್ಯಮವನ್ನು ಬೆದರಿಸುವ ಕ್ರಮಕ್ಕೆ ವ್ಯಾಪಕ ವಿರೋಧ

ನವದೆಹಲಿ ಫೆ 15: ಜನಪರ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿರುವ ನ್ಯೂಸ್ ಕ್ಲಿಕ್ ಮೇಲೆ ನಡೆದ ಇಡಿ ದಾಳಿಗೆ ದೇಶ ವಿದೇಶದಲ್ಲಿ ವ್ಯಾಪಕ ಆಕ್ರೋಶ ಕೇಳಿ ಬರುತ್ತಿದೆ. ವಿಮರ್ಶಾತ್ಮ ಪತ್ರಿಕೋಧ್ಯಮವನ್ನು ಕೇಂದ್ರ ಸರಕಾರ ಬೆದರಿಸುತ್ತಿದೆ ಎಂದು ಆರೋಪಿಸಲಾಗಿದೆ.

ಈ ವಾರದ ಆರಂಭದಲ್ಲಿ ಜಾರಿ ನಿರ್ದೇಶನಾಲಯವು 113 ಗಂಟೆಗಳ ಕಾಲ ನ್ಯೂಸ್ ಕ್ಲಿಕ್  ಮುಖ್ಯಸ್ಥ  ಪ್ರಭೀರ್  ಪುರಕಾಯಸ್ತ ರ ಮೇಲೆ ನಿರಂತರವಾಗಿ ಒತ್ತಡ ಮತ್ತು ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ, ನ್ಯೂಸ್ಕ್ಲಿಕ್ನ ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಯಸ್ಥ ಅವರ ಮನೆಯಲ್ಲಿ ಇಡಿ ತನ್ನ ದಾಳಿಯನ್ನು ಮುಂದುವರಿಸಿತ್ತು.  ಪ್ರಬೀರ್ ಮತ್ತು ಲೇಖಕಿ ಗೀತಾ ಹರಿಹರನ್ ಅವರನ್ನು “ದಾಳಿಯ ಪ್ರಾರಂಭದಿಂದಲೂ ಅವರ ಮನೆಯಲ್ಲಿ ಬಂಧಿಸಲಾಗಿದೆ”. ಅವರ ನಿವಾಸದಲ್ಲಿ 113 ಗಂಟೆಗಳಿಗಿಂತ ಹೆಚ್ಚು ಕಾಲ ತನಿಖೆ ನಡೆಸುತ್ತಿದ್ದು,  ತನಿಖೆಗೆ ಸ್ಪಂದಿಸುತ್ತಿದ್ದಾರೆ, ಆದರೆ ವಿನಾ ಕಾರಣ ಇಡಿ ಅಧಿಕಾರಿಗಳು ಅನಗತ್ಯ ತನಿಖೆಗಳನ್ನು ನಡೆಸುತ್ತಿದ್ದಾರೆ ಎಂಬ ಆರೋಪಗಳು  ಕೇಳಿ ಬರುತ್ತಿವೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ

ನ್ಯೂಸ್ಕ್ಲಿಕ್ ಕಚೇರಿಯಲ್ಲಿ 45 ಗಂಟೆಗಳ ದಾಳಿಯ ಸಮಯದಲ್ಲಿ, “ಸುದ್ದಿ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಪ್ರಮುಖವಾದ” ಕೆಲವು ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂವಹನ ಸಾಧನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ, ಕೆಲಸಗಳು ನಡೆಯದಂತೆ ಅನಗತ್ಯ ತೊಂದರೆ ನೀಡುತ್ತಿದ್ದಾರೆ. ಈ ಕಿರುಕುಳದ ಹೊರತಾಗಿಯೂ, ನ್ಯೂಸ್ಕ್ಲಿಕ್,  ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಿದೆ ಮತ್ತು ಅದನ್ನು ಮುಂದುವರಿಸಲಿದೆ. ನಾವು ಕಾನೂನಿನ ಪ್ರಕಾರ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ನಮಗೆ  ಮುಚ್ಚಿಡಲು ಏನೂ ಇಲ್ಲ, ಎಂದು  ನ್ಯೂಸ್ ಕ್ಲಿಕ್ ನ ಆಡಳಿತ ಮಂಡಳಿ ತಿಳಿಸಿದೆ.

ಇದನ್ನು ಓದಿ : ನ್ಯೂಸ್ ಕ್ಲಿಕ್ ಕಚೇರಿ ಹಾಗೂ ಸಿಬ್ಬಂದಿಗಳ ಮನೆ ಮೇಲೆ “ಇಡಿ” ದಾಳಿ! : ವ್ಯಾಪಕ ಖಂಡನೆ

ನ್ಯೂಸ್ ಕ್ಲಿಕ್ ಜನಪರ ಮಾಧ್ಯಮವಾಗಿ ಕಾರ್ಯ ನಿರ್ವಹಿಸುತ್ತಿದೆ, ಸರಕಾರದ ವೈಫಲ್ಯಗಳನ್ನು ಜನರ ಮುಂದ ತೆರೆದಿಡುತ್ತಿದೆ. ಆ ಮೂಲಕ ಸತ್ಯವನ್ನು ಎತ್ತಿಹಿಡಿಯುವ ಮಾದ್ಯಮಗಳನ್ನು ಗುರಿಯಾಗಿಸಲಾಗುತ್ತಿದೆ. ಬೇರೆ ಮಾಧ್ಯಮಗಳಂತೆ ನ್ಯೂಸ್ ಕ್ಲಿಕ್ ಕೇಂದ್ರದ ಪರ ಪುಂಗಿ ಉದಲಿಲ್ಲ. ಗೋದಿ ಮೀಡಿಯಾಗಳ ತಪ್ಪುಗಳು  ಸರಕಾರಕ್ಕೆ ಕಾಣುವುದಿಲ್ಲ, ಆದರೆ  ವಿದೇಶಿ ವ್ಯವಹಾರವೆಂಬ ನೆಪವನ್ನು ಇಟ್ಟುಕೊಂಡು ನ್ಯೂಸ್ ಕ್ಲಿಕ್ ಮೇಲೆ ದಾಳಿ ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ  ಎಂದು ಪ್ರಗತಿಪರ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸ್ವತಂತ್ರ ಪತ್ರಿಕೋದ್ಯಮವನ್ನು ಮುಂದುವರಿಸುತ್ತೇವೆ ಎಂದು ನಮ್ಮ ಹಿತೈಷಿಗಳಿಗೆ ತಿಳಿಸಲು ಬಯಸುತ್ತೇವೆ” ಎಂದು  ನ್ಯೂಸ್ ಕ್ಲಿಕ್ ಸ್ಪಷ್ಟಪಡಿಸಿದೆ.

ಗೋದಿ ಮೀಡಿಯಾ ನೊಣಗಳು ಹೂವನ್ನು ತೊರೆದು ಹೊಲಸು ವಾಸನೆಯತ್ತ ಹಾರಿದ್ದೇಕೆ?

ED ಯ ದಾಳಿಯನ್ನು ಭಾರತ ಮತ್ತು ವಿದೇಶಗಳಲ್ಲಿನ ಹಲವಾರು ಪತ್ರಿಕಾ ಸಂಸ್ಥೆಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳು ಖಂಡಿಸಿವೆ. ಪ್ರೆಸ್ ಕ್ಲಬ್ ಆಫ್ ಇಂಡಿಯಾ (ಪಿಸಿಐ) ಈ ದಾಳಿಗಳನ್ನು “ವಿಮರ್ಶಾತ್ಮಕ ಪತ್ರಿಕೋದ್ಯಮವನ್ನು ಬೆದರಿಸುವ ಮತ್ತು ಮೌನಗೊಳಿಸುವ ಪ್ರಯತ್ನದಲ್ಲಿ ಮಾಧ್ಯಮಗಳ ಮೇಲೆ ಅಹಿತಕರ ದಾಳಿ” ಎಂದಿದೆ.

Donate Janashakthi Media

Leave a Reply

Your email address will not be published. Required fields are marked *