ಪತ್ರಕರ್ತ ಸಿದ್ದೀಕ್ ಕಪ್ಪನ್ ಗೆ 5 ದಿನಗಳ ಮಧ್ಯಂತರ ಜಾಮೀನು

ನವದೆಹಲಿ ಫೆ 15:  ಕೇರಳ ಪತ್ರಕರ್ತ ಸಿದ್ದೀಕ್ ಕಪ್ಪನ್ ಗೆ ಅವರ ತಾಯಿಯ ಭೇಟಿಗಾಗಿ ಐದು ದಿನಗಳ ಕಾಲ ಷರತ್ತುಗಳೊಂದಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಭೇಟಿಯ ಸಮಯದಲ್ಲಿ, ಅವರು ಮಾಧ್ಯಮಗಳೊಂದಿಗೆ ಮಾತನಾಡಲು ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ಸಾಧ್ಯವಿಲ್ಲ ಮತ್ತು ಅವರ ತಾಯಿಯ ಆರೋಗ್ಯಕ್ಕೆ ಸಂಪರ್ಕ ಹೊಂದಿದ ವೈದ್ಯರನ್ನು  ಹೊರತುಪಡಿಸಿ ಯಾರನ್ನೂ ಭೇಟಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಈ ಮೊದಲು, ವೀಡಿಯೊ ಕರೆ ಮೂಲಕ ತಾಯಿಯೊಂದಿಗೆ ಮಾತನಾಡಲು ಅವರಿಗೆ ಅವಕಾಶವಿತ್ತು.

ಕೇರಳದ ಒಂದು ವೆಬ್‍ ಪತ್ರಿಕೆಯ ದಿಲ್ಲಿ ಪ್ರತಿನಿಧಿಯಾಗಿ ಕಳೆದ 9 ವರ್ಷಗಳಿಂದ ಕೆಲಸ ಮಾಡುತ್ತಿರುವ ಕಪ್ಪನ್‍ ಹಾಥ್ರಸ್‍ನಲ್ಲಿ 19ವರ್ಷದ ದಲಿತ ಹುಡುಗಿಯ ಮೇಲೆ ಅತ್ಯಾಚಾರ, ಅದರಿಂದಾಗಿ ಆಕೆಯ ಸಾವಿನ ಘಟನೆಯ ಬಗ್ಗೆ ತಮ್ಮ ಮಾಧ್ಯಮಕ್ಕೆ ವರದಿ ಮಾಡಲು ಹೊರಟಿದ್ದಾಗ , ಅಕ್ಟೋಬರ್ 5ರಂದು ಉತ್ತರ ಪ್ರದೇಶ ಪೋಲೀಸರು ಅವರು, ಮತ್ತು ಜತೆಗೆ ಪಯಣಿಸುತ್ತಿದ್ದ ಇತರ ಮೂವರನ್ನು ಬಂಧಿಸಿ ಮಥುರಾ ಜೈಲಿಗೆ ಹಾಕಿದ್ದರು.

ಉತ್ತರ ಪ್ರದೇಶದ ಮಥುರಾದಲ್ಲಿ ಮೂರು ತಿಂಗಳಿಗೂ ಹೆಚ್ಚು ಸಮಯದಿಂದ ಜೈಲಿನಲ್ಲಿರುವ ಕೇರಳ ಮೂಲದ ದಿಲ್ಲಿಯ ಪತ್ರಕರ್ತ ಸಿದ್ದಿಕಿ ಕಪ್ಪನ್‍ ಬಿಡುಗಡೆಯ ಬಗ್ಗೆ ಮಧ್ಯಂತರ ಆದೇಶ ನೀಡಲು ನವಂಬರ್ 16 ರಂದು  ಮತ್ತು 20 ರಂದು ನಡೆದ ವಿಚಾರಣೆಯಲ್ಲಿ ಸುಪ್ರಿಂ ಕೋರ್ಟ್ ನಿರಾಕರಿಸಿತ್ತು.

ಉತ್ತರ ಪ್ರದೇಶದಿಂದ ಕೇರಳವರೆಗೆ ಅವರ ಜೊತೆ ಬೆಂಗಾವಲು ಪೊಲೀಸ್ ಪಡೆ ಪ್ರಯಾಣ ಬೆಳಸಲಿದ್ದಾರೆ.  ಸಿದ್ದಿಕಿ ಹಾಗೂ  ಬೆಂಗಾವಲು ಪೊಲೀಸರ ಪ್ರಯಾಣದ ಖರ್ಚನ್ನು ಯುಪಿ ಪೊಲೀಸರೆ ಭರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *