ಸಂಡೂರು | ಒಂಟಿ ಮಹಿಳೆಯರಿಗೆ ಬಜೆಟ್‌ನಲ್ಲಿ ಶೇ33ರಷ್ಟು ಪುನರ್ವಸತಿಗೆ ಅನುದಾನ ಮೀಸಲಿಡಿ

ಸಂಡೂರು: ಒಂಟಿ ಮಹಿಳೆಯರಿಗೆ ₹5000 ಮಾಸಿಕ ಸಹಾಯಧನ, ಮಹಿಳೆಯರ ಜನಸಂಖ್ಯೆಗನುಗುಣವಾಗಿ ಒಕ್ಕೂಟ, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುದಾನ ಒದಗಿಸಬೇಕು. ‘ಒಂಟಿ ಮಹಿಳೆಯರ ಗಣತಿ ಮಾಡಿ, ಪುನರ್ವಸತಿಗೆ ಸೂಕ್ತ ಕ್ರಮವಹಿಸಬೇಕು. ಶೇ33ರಷ್ಟು ಮೊತ್ತವನ್ನು ಒಂಟಿ ಮಹಿಳೆಯರ ಪುನರ್ವಸತಿಗೆ ಮೀಸಲಿಡಬೇಕು’ ಎಂದು ಕರ್ನಾಟಕ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣ ಸಂಘದ ಸಂಚಾಲಕಿ ಬಿ.ಮಾಳಮ್ಮ ಹೇಳಿದರು.

ತಾಲ್ಲೂಕಿನ ಕುರೆಕುಪ್ಪ ಪಟ್ಟಣದ ಸುಂಕ್ಲಮ್ಮ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಒಂಟಿ ಮಹಿಳೆಯರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.

ಇದನ್ನೂ ಓದಿ : ಟ್ರಂಪ್‌ನ 500% ತೆರಿಗೆ ಹೇರಿಕೆಯ ಬಗ್ಗೆ ಮೋದಿ ಮೌನ ವಿರೋಧಿಸಿ ಎಡಪಕ್ಷಗಳ ಪ್ರತಿಭಟನೆ

ಅವರು ಕೇವಲ ಲಿಂಗ ತಾತಮ್ಯಕ್ಕೆ, ಜಾತಿ ತಾರತಮ್ಯಕ್ಕೆ ಒಳಗಾದವರು ಮಾತ್ರವಲ್ಲ. ‘ಮಹಿಳೆಯರಲ್ಲಿ ಒಂಟಿ ಮಹಿಳೆಯರ ಪಾಡು ಹೇಳತೀರದಾಗಿದೆ. ಅವರು ತೀವ್ರ ರೀತಿಯ ಸಾಮಾಜಿಕ ಬಹಿಷ್ಕಾರಕ್ಕೊಳಗಾದವರಾಗಿದ್ದಾರೆ’ ಎಂದರು.

ಒಂಟಿ ಮಹಿಳೆಯರ ಸಂಘಟನೆಯ ಸಂಡೂರು ತಾಲ್ಲೂಕು ಅಧ್ಯಕ್ಷೆ ಸುನಿತಾ, ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಹ ಸಂಚಾಲಕ ವಿ.ದೇವಣ್ಣ, ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ಪಂಪನಗೌಡ, ಕುರೆಕುಪ್ಪ ಗ್ರಾಮ ಘಟಕದ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷರಾದ ಸರಸ್ವತಿ, ಅಶ್ವಿನಿ, ಹೇಮಾವತಿ, ಜಯಮ್ಮ ಅಯ್ಯಮ್ಮ, ಪಾರ್ವತಿ, ಕಾರ್ಯದರ್ಶಿ ವಿಜಯಲಕ್ಷ್ಮಿ, ಮುಖಂಡರಾದ ಬಸಿರಮ್ಮ, ಲಕ್ಷ್ಮಿ, ಸುಜಾತಮ್ಮ, ಪದ್ಮಾವತಿ ಯು.ಹಂಪಮ್ಮ, ಸಾರ್ವಜನಿಕರು ಹಾಜರಿದ್ದರು.

ಇದನ್ನೂ ನೋಡಿ : ಕೇಂದ್ರದ ಪ್ರಭಾವದ ನೆರಳಲ್ಲಿ ಕರ್ನಾಟಕದ ರಾಜಪಾಲರು? Janashakthi Media

Donate Janashakthi Media

Leave a Reply

Your email address will not be published. Required fields are marked *