ಸಂಸತ್ ಬಜೆಟ್ ಅಧಿವೇಶನ ಆರಂಭ : ರಾಷ್ಟ್ರಪತಿ ಭಾಷಣ ಬಹಿಷ್ಕರಿಸಿದ ವಿಪಕ್ಷಗಳು

ಗಲಭೆಗೆ ರೈತರೆ ಕಾರಣ ರಾಷ್ಟ್ರಪತಿ ವಿವಾದಾತ್ಮಕ ಹೇಳಿಕೆ

ನವದೆಹಲಿ, ಜ 29 : ಇಂದಿನಿಂದ ಸಂಸತ್ತಿನ ಬಜೆಟ್ ಆರಂಭವಾಗಿದ್ದು, ರಾಷ್ಟ್ರಪತಿ ಜಂಟಿ ಭಾಷಣದ ಕಲಾಪವನ್ನು ವಿಪಕ್ಷಗಳು ಬಹಿಷ್ಕರಿಸಿವೆ.  ಕೇಂದ್ರದ ನೂತನ ಕೃಷಿ ಸುದಾರಣಾ ಕಾಯಿದೆ ವಿರೋಧಿಸಿ ರಾಷ್ಟ್ರಪತಿಗಳ ಭಾಷಣ ಬಹಿಷ್ಕರಿಸಿದ್ದಾಗಿ  ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ಸೇರಿದಂತೆ 16 ವಿಪಕ್ಷಗಳ ಬೆಂಬಲವಿದೆ ಎಂದು ತಿಳಿಸಿದ್ದಾರೆ.

ಇನ್ನು ವಿವಾದಿತ ಕೃಷಿ ಕಾನೂನುಗಳಲ್ಲದೆ, ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಭಾರತ ಮತ್ತು ಚೀನಾ ನಡುವಿನ ಸೇನಾ ಘರ್ಷಣೆ ವಿಷಯ ಕಾರಣ ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸಿದ್ದಾಗಿ ಗುಲಾಂ ನಬಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.  ಇದಕ್ಕೆ ಡಿಎಂಕೆ, ಎಡಪಕ್ಷಗಳು, ಟಿಎಂಸಿ ಸೇರಿದಂತೆ ಅನೇಕ ಪಕ್ಷಗಳ ನಾಯರು ಸಹ ಮತ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಎಡಪಕ್ಷಗಳ ಪ್ರತಿಭಟನೆ : ರಾಷ್ಟ್ರಪತಿಗಳ ಭಾಷಣ ಬಹಿಷ್ಕರಿಸಿ ಹಾಗೂ ಕೃಷಿಕಾಯ್ದೆಯನ್ನು ರದ್ದುಗೊಳಿಸುವಂತೆ ಎಡಪಕ್ಷಗಳ ಸಂಸದರು ಸಂಸತ್ತ ಭವನದ ಮುಂದೆ ಪ್ರತಿಭಟನೆ ನಡೆಸಿದರು. ಕೃಷಿಕಾಯ್ದೆ ರದ್ದಾಗುವವರೆಗೂ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸುವುದಾಗಿ ರಾಜ್ಯಸಭಾ ಸದಸ್ಯ ಕೆ.ಕೆ.ರಾಗೇಶ್ ತಿಳಿಸಿದ್ದಾರೆ.

           ಇದನ್ನೂ ಓದಿ : ಸಂಸತ್ತು ಅಧಿವೇಶನದಲ್ಲಿ ‘ಪ್ರಶ್ನೋತ್ತರ ಕಾಲ’ ಯಾಕಿಲ್ಲ?

ಜಂಟಿ ಭಾಷಣದ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಿಂಸಾಚಾರವನ್ನು ಖಂಡಿಸಿದ್ದು, ರೈತರೆ ಇದಕ್ಕೆ ಕಾರಣ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  ರಾಷ್ಟ್ರಪತಿಗಳು ಜನರಪರಾವಾಗಿ ನಿಲ್ಲುವುದನ್ನು ನಿಟ್ಟು, ಸರಕಾರ ಬರೆದುಕೊಟ್ಟ ಭಾಷಣವನ್ನು ಓದಿದ್ದಾರೆ, ಸರಕಾರ ಪೊಲೀಸರ ಮೂಲಕ ಸಾವಿರಾರು ರೈತರ ಮೇಲೆ ಜಲ ಫಿರಂಗಿ ಬಳಸಿದೆ, ಲಾಠಿ ಚಾರ್ಜ್ ಮಾಡಿದ್ದಾರೆ. ಇದು ರಾಷ್ಟ್ರಪತಿಗಳಿಗೆ ಕಾಣಲಿಲ್ಲವೆ ಎಂದು ವಿಪಕ್ಷಗಳು ಆರೋಪಿಸಿವೆ.

Donate Janashakthi Media

Leave a Reply

Your email address will not be published. Required fields are marked *