ಟಿಪ್ಪು ಕಾಲದ ವಿಗ್ರಹ, ಫರಂಗಿ ಗುಂಡು ಪತ್ತೆ!

ಬೆಂಗಳೂರು, ಜ.3– ವಾಣಿವಿಲಾಸ ಕಾಲೇಜು ಬಳಿ ಇರುವ ಪುರಾತನ ಜಲಕಂಠೇಶ್ವರ ದೇವಾಲಯ ಹಿಂಭಾಗ ಕಟ್ಟಡ ಕಾಮಗಾರಿ ಪಾಯ ತೆಗೆಯುವಾಗ ಮದ್ದುಗುಂಡುಗಳು, ಪುರಾತನ ಕಾಲದ ವಿಗ್ರಹಗಳು ಪತ್ತೆಯಾದ ಬಗ್ಗೆ ವರದಿಯಾಗಿದೆ.

ಕಲಾಸಿಪಾಳ್ಯದ ಟಿಪ್ಪು ಕೋಟೆ ಬಳಿ ಇರುವ 1500 ವರ್ಷಗಳ ಹಳೆಯದಾದ ಜಲಕಂಠೇಶ್ವರ ದೇವಾಲಯದ ಬಳಿ ಪಾಯ ತೆಗೆಯುವಾಗ ಪುರಾತನ ಕಾಲದ ವಿಗ್ರಹ, ಮದ್ದು, ಗುಂಡುಗಳು ಪತ್ತೆಯಾಗಿವೆ. ಇವು ಟಿಪ್ಪು ಕಾಲದ್ದು ಇರಬೇಕು ಎಂದು ಸಂಶೋಧಕರು ತಿಳಿಸಿದ್ದಾರೆ. ಈ ದೇವಾಲಯ 1500 ವರ್ಷಗಳಿಗೂ ಹಳೆಯದಾಗಿದ್ದು, ಟಿಪ್ಪು ಕೂಡ ಈ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಿದ್ದ ಪೂಜೆ-ಪುನಸ್ಕಾರಗಳನ್ನು ಮಾಡುತ್ತಿದ್ದನೆಂದು ಹೇಳಲಾಗಿದೆ.

ಇಂದು ಮದ್ದುಗುಂಡುಗಳು, ಪತ್ತೆಯಾಗಿರುವ ವಿಗ್ರಹಗಳನ್ನು ಪುರಾತತ್ವ ಇಲಾಖೆಯವರು ಪರಿಶೀಲನೆ ನಡೆಸಿದ್ದಾರೆ. ಉತ್ಖನನ ಮಾಡಬೇಕೆ, ಬೇಡವೆ ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈ ಹಿಂದೆಯೂ ಕೂಡ ಈ ಭಾಗದಲ್ಲಿ ಬಿಬಿಎಂಪಿಯವರು ಕಾಮಗಾರಿ ನಡೆಸುವಾಗ ದೊಡ್ಡ ಮಟ್ಟದ ಮದ್ದುಗುಂಡುಗಳು ದೊರಕಿದ್ದವು ಎಂದು ಹೇಳಲಾಗುತ್ತಿದೆ.

Donate Janashakthi Media

One thought on “ಟಿಪ್ಪು ಕಾಲದ ವಿಗ್ರಹ, ಫರಂಗಿ ಗುಂಡು ಪತ್ತೆ!

Leave a Reply

Your email address will not be published. Required fields are marked *