ಕೊವೀಡ್ ಲಸಿಕೆ ಉಚಿತ – ಡಾ.ಹರ್ಷವರ್ಧನ್

ನವದೆಹಲಿ ಜ, 02: ದೇಶಾದ್ಯಂತ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ  ಡಾ. ಹರ್ಷವರ್ಧನ್​ ಹೇಳಿದ್ದಾರೆ. ಇಂದು ದೇಶಾದ್ಯಂತ ಕೋವಿಡ್​ ಲಸಿಕೆಯ ಅಣಕು ಕಾರ್ಯಾಚರಣೆ  ನಡೆಸಲಾಗುತ್ತಿದ್ದು, ದೆಹಲಿಯ ಆರೋಗ್ಯ ಕೇಂದ್ರಕ್ಕೆ ಸಚಿವರು ಭೇಟಿ ನೀಡಿದ್ದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಎಲ್ಲಾ ಅಂಶಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಗಿದೆ. ಲಸಿಕೆಯ ಸುರಕ್ಷತೆಯ ಬಗ್ಗೆ ಯಾವುದೇ ವದಂತಿಗಳನ್ನು ನಂಬಬೇಡಿ. ಎಲ್ಲವನ್ನೂ ವಿವರವಾಗಿ ಪರಿಶೀಲಿಸಲಾಗಿದೆ. ಪೋಲಿಯೊ ಲಸಿಕೆ ನೀಡಲು ಆರಂಭಿಸಿದ ಸಂದರ್ಭದಲ್ಲೂ ವದಂತಿಗಳು ತೇಲಿ ಬಂದಿದ್ದವು. ಆದರೆ ಜನರಿಗೆ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ ಪರಿಣಾಮ ಈಗ ಭಾರತ ಪೋಲಿಯೊ ಮುಕ್ತವಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಎರಡನೇ ಬಾರಿಗೆ ಇಂದು ಕೋವಿಡ್​ ಲಸಿಕೆ  ಅಣಕು ಕಾರ್ಯಾಚರಣೆ ​​ ನಡೆಸಲಾಗುತ್ತಿದೆ. ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 116 ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ತಾಲೀಮು ನಡೆಯುತ್ತಿದೆ. ಇದಕ್ಕೂ ಮುನ್ನ ಡಿ.28 ಮತ್ತು 29 ರಂದು ದೇಶದ 5 ರಾಜ್ಯಗಳಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಗುತ್ತು.

ಇದನ್ನು ಓದಿ : ಕೋವಿಡ್-19 ಲಸಿಕೆಯ ಸುತ್ತ ಪ್ರಶ್ನೆಗಳ ಹುತ್ತ ಏಕೆ? ಏನು? ಎಷ್ಟು? ಯಾವಾಗ? ಹೇಗೆ?

Donate Janashakthi Media

Leave a Reply

Your email address will not be published. Required fields are marked *