ಕೇಂದ್ರದ ಕೃಷಿಕಾಯ್ದೆ ವಿರುದ್ಧದ ನಿರ್ಣಯಕ್ಕೆ ಬಿಜೆಪಿ ಶಾಸಕನ ಮತ

ತಿರುವನಂತಪುರಂ : ಕೇರಳ ರಾಜ್ಯದ ಬಿಜೆಪಿ ಏಕೈಕ ಶಾಸಕ ಓ ರಾಜಗೋಪಾಲ ಕೇರಳ ಸರಕಾರ ಮಂಡಿಸಿದ ಕೃಷಿ ವಿರೋಧಿ ಕಾಯ್ದೆ ನಿರ್ಣಯವನ್ನು  ಬೆಂಬಲಿಸಿದ್ದಾರೆ. ಕೇಂದ್ರ ಸರಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಕೋರಿ ಗುರುವಾರ ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯವನ್ನು  ಇವರು ಬೆಂಬಲಿಸಿದರು ಎಂದು ಕೇರಳದ ದಿ ನ್ಯೂಸ್ ಮಿನಿಟ್  ಸುದ್ದಿಯನ್ನು ಮಾಡಿದೆ.

ನಿರ್ಣಯವನ್ನು ಚರ್ಚೆಗೆ ತಂದಾಗ,  ಬಿಜೆಪಿ ಶಾಸಕ ಓ ರಾಜಗೋಪಾಲ್ ಅವರು ಕೃಷಿ ಕಾನೂನುಗಳ ಕೆಲವು ಅಂಶಗಳನ್ನು ಸಮರ್ಥಿಸಿಕೊಂಡರು, ಆದರೆ ಅವರು ನಿರ್ಣಯದ ಮತದಾನ ನಡೆಯುತ್ತಿರುವಾಗ ಸರಕಾರದ ಪ್ರಸ್ಥಾಪಕ್ಕೆ ಮತವನ್ನು ಹಾಕಿದ್ದಾರೆ.

ವಿಶೇಷ ವಿಧಾನಸಭೆ ಅಧಿವೇಶನದ ನಂತರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಓ ರಾಜಗೋಪಾಲ್ ಅವರು ನಿರ್ಣಯದ ಪರವಾಗಿ ಮತ ಚಲಾಯಿಸುವುದನ್ನು ಸಮರ್ಥಿಸಿಕೊಂಡರು. ಕೆಲ ಆಕ್ಷೇಪಣೆಗಳನ್ನು ಸೂಚಿಸಿದ್ದೇನೆ.  ರಾಜ್ಯದ ಹಿತದೃಷ್ಟಿಯಿಂದ, ರೈತರ ಹಿತದೃಷ್ಟಿಯಿಂದ ಸರಕಾರ ವಿಶೇಷ ಅಧಿವೇಶನ ಕರೆದು ಕೃಷಿಕಾಯ್ದೆ ವಿರುದ್ಧ ನಿರ್ಣಯ ಮಂಡಿಸಿದಾಗ ನಾನು ಬಿಜೆಪಿಯವನು ಎಂಬ ಕಾರಣಕ್ಕೆ ವಿರೋಧಿಸಿದರೆ ಅರ್ಥವಿರುವುದಿಲ್ಲ. ರೈತರು ಹಾಗೂ ರಾಜ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಣಯಕ್ಕೆ ಬೆಂಬಲಿಸಿದ್ದೇನೆ ಎಂದು ರಾಜಗೋಪಾಲ್ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *