ಗ್ರಾ.ಪಂ ಚುನಾವಣೆ ಮತ ಎಣಿಕೆ ಆರಂಭ – ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಮುನ್ನಡೆ

ಕೆಲವಡೆ ಟಾಸ್ ಮೂಲಕ ಗೆಲವು ಪಡೆದರೆ, ಮತ್ತೊಂದೆಡೆ ಒಂದು ಮತದಿಂದ ಗೆಲುವು

ಬೆಂಗಳೂರು : ರಾಜ್ಯದ 5,728 ಗ್ರಾಮ ಪಂಚಾಯಿತಿಗಳ 82,616 ಸ್ಥಾನಗಳಿಗೆ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. 3 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ  ಸ್ಪರ್ಧಿಸಿದ್ದು, ಗೆಲುವಿನ ದಾರಿಯನ್ನು ಕಾಯುತ್ತಿದ್ದಾರೆ.  ಮುಂದಿನ  ವಿಧಾನ ಸಭಾ ಚುನಾವಣೆಯ ರಾಜಕೀಯ ದಿಗ್ಸೂಚಿ ಎಂದು ಪರಿಗಣಿಸಲಾದ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡಿವೆ.

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಿದೆ. ಬ್ಯಾಲಟ್ ಪೇಪರ್​ನಿಂದ ಮತದಾನ ಆಗಿರುವ ಹಿನ್ನೆಲೆಯಲ್ಲಿ ಮತ ಎಣಿಕೆ ತುಸು ಮಂದಗತಿಯಲ್ಲಿ ಸಾಗುತ್ತಿದೆ. ಸಂಜೆ ಅಥವಾ ರಾತ್ರಿ ವೇಳೆಗೆ ಅಂತಿಮ ಫಲಿತಾಂಶ ಸಿಗುವ ನಿರೀಕ್ಷೆ ಇದೆ.  ಈವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಬಿಜೆಪಿ ಬೆಂಬಲಿತ 3814, ಕಾಂಗ್ರೆಸ್ ಬೆಂಬಲಿತ 1811, ಜೆಡಿಎಸ್ ಬೆಂಬಲಿತ 723 ಸದಸ್ಯರು ಮುನ್ನಡೆ ಅಥವಾ ಗೆಲುವು ಹೊಂದಿದ್ದಾರೆ. ಇತರರು ಹಾಗೂ ಪಕ್ಷೇತರರು 491 ಕಡೆ ಮುಂದಿದ್ದಾರೆ.  

ಸ್ವಾರಸ್ಯಕರ ಘಟನೆಗಳು : ತುಮಕೂರು, ವಿಜಯಪುರದಲ್ಲಿ ಒಂದು ಮತದಿಂದ ಅಭ್ಯರ್ಥಿಗಳು ಗೆದ್ದಿರುವ ವರದಿಯಾಗಿದೆ. ಶಿವಮೊಗ್ಗ, ಮೈಸೂರಿನಲ್ಲಿ ಸಮಬಲ ಮತ ಪಡೆದ ಕಾರಣ ಟಾಸ್ ಮೂಲಕ ಗೆಲವನ್ನು ನಿರ್ಧರಿಸಲಾಗಿದೆ. ಕೆಲವೆಡೆ ಅಭ್ಯರ್ಥಿಗಳ ಏಜೆಂಟರು ನಿಂಬಹಣ್ಣನ್ನು ಜೇಬಿನಲ್ಲಿಟ್ಟುಕೊಂಡು ಬಂದಿರುವುದನ್ನು ಗಮನಿಸಿದ ಅಧಿಕಾರಿಗಳು ನಿಂಬೆಹಣ್ಣುಗಳನ್ನು ವಶಕ್ಕೆ ಪಡೆದಿದ್ದಾರೆ. ಹೊಸಪೇಟೆಯಲ್ಲಿ ಸಂಭ್ರಮಾಚರಣೆ ವೇಳೆ ನೂಕು ನೂಗ್ಗಲು ಉಂಟಾಗಿ ಲಘು ಲಾಠಿ ಪ್ರಹಾರ ನಡೆಸಲಾಗಿದೆ. ಶಿರಸಿ ತಾಲ್ಲೂಕಿನ ಬೈರುಂಬೆ ಗ್ರಾಮದಲ್ಲಿ ಎಂ.ಟೆಕ್ ಪದವೀಧರ ಕಿರಣ್ ಭಟ್ಟ ಗೆಲುವು ಸಾಧಿಸಿದ್ದಾರೆ.  ತಿಪಟೂರಿನಲ್ಲಿ ಮತ ಎಣಿಕೆ ಕಾರ್ಯ ತಡವಾಗಿ ಆರಂಭಗೊಂಡಿದೆ.  

ತಪ್ಪದೆ ಓದಿ : https://janashakthimedia.com/grapam-chunavane-hechu-mata-padedare-matra-geluvu/

ಚುನಾವಣಾಧಿಕಾರಿ ನಿಧನ : ಪಿರಿಯಾ ಪಟ್ಟಣದಲ್ಲಿ  ಚುನಾವಣಾ ಕರ್ತವ್ಯದಲ್ಲಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜನೀಯರ್ ಬೋರೆಗೌಡ (62) ಹೃದಯಾಘಾತದಿಂದ ನಿಧನರಾಗಿದ್ದಾರೆ.  ರಾಯಚೂರಿನಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮತಗಟ್ಟೆ ಅಧಿಕಾರಿ ಚಂದ್ರಶೇಖರ್ ಎನ್ನುವವರು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಅಸ್ವಸ್ಥಗೊಂಡಿದ್ದಾರೆ.   

Donate Janashakthi Media

Leave a Reply

Your email address will not be published. Required fields are marked *