ಜಮ್ಮು ಕಾಶ್ಮೀರ ಡಿಡಿಸಿ ಫಲಿತಾಂಶ : ಗುಪ್ಕಾರ್ ಮೈತ್ರಿಕೂಟ ಮುನ್ನಡೆ.

ಆರಂಭಿಕ ಮುನ್ನಡೆ ಸಾಧಿಸಿದ್ದ ಬಿಜೆಪಿಗೆ ಹಿನ್ನಡೆ

ಶ್ರೀನಗರ :  ಜಮ್ಮು-ಕಾಶ್ಮೀರ ಜಿಲ್ಲಾ ಅಭಿವೃದ್ಧಿ ಪರಿಷತ್ (ಡಿಡಿಸಿ) ಗೆ ಇತ್ತಿಚೆಗೆ  ಚುನಾವಣೆ ನಡೆದಿತ್ತು. ಇಂದು ಫಲಿತಾಂಶ ಪ್ರಕಟವಾಗಿದ್ದು,  ಪೀಪಲ್ಸ್ ಅಲಾಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಷನ್ (ಗುಪ್ಕಾರ್ ಮೈತ್ರಿಕೂಟ, ಪಿಎಜಿಡಿ) 115 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಬಿಜೆಪಿ 69 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಪಕ್ಷ 23 ಸ್ಥಾನಗಳೊಂದಿಗೆ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

280 ಸ್ಥಾನಗಳ ಫಲಿತಾಂಶದ ಪೈಕಿ 270 ಸ್ಥಾನಗಳ ಟ್ರೆಂಡ್ ಲಭ್ಯವಿದ್ದು,  ಹೊಸದಾಗಿ ರಚನೆಗೊಂಡಿದ್ದ ಹಲವು ಪ್ರದೇಶಗಳಲ್ಲಿ ಮೊದಲ ಬಾರಿಗೆ ಡಿಡಿಸಿ ಚುನಾವಣೆ ನಡಿದಿದ್ದು, ಅಲ್ಲಿ ಬಿಜೆಪಿಗೆ ನಿರೀಕ್ಷಿತ ಪ್ರಮಾಣದ ಫಲಿತಾಂಶ ದೊರೆಯುವ ಸೂಚನೆಗಳಿವೆ. ಈ ಮೂಲಕ ಜಮ್ಮು ವಿಭಾಗದಲ್ಲಿ ಬಿಜೆಪಿಯ ಹಿಡಿತ ಮತ್ತಷ್ಟು ಪ್ರಬಲವಾಗಿದ್ದರೆ, ಆರ್ಟಿಕಲ್ 370 ರದ್ದತಿ ನಂತರದಲ್ಲಿ ರಚನೆಯಾಗಿದ್ದ ನ್ಯಾಶಿನಲ್ ಕಾನ್ಫರೆನ್ಸ್ ಮತ್ತು  ಪಿಡಿಪಿಯನ್ನೊಳಗೊಂಡ ಗುಪ್ಕಾರ್ ಮೈತ್ರಿಕೂಟ 115 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಕಣಿವೆಯಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಂತಾಗಿದೆ.

ಬಂಡಿಪೋರಾ ಗುರೇಜ್ ಪ್ರದೇಶದಲ್ಲಿ ಬಿಜೆಪಿ ಗಣನೀಯ ಬೆಳವಣಿಗೆ ಸಾಧಿಸಿದ್ದು, ಭಯೋತ್ಪಾದಕರೊಂದಿಗೆ ಸಂಪರ್ಕವಿದ್ದ ಆರೋಪದಡಿ ಬಂಧನಕ್ಕೊಳಗಾಗಿದ್ದ ಪಿಡಿಪಿ ನಾಯಕ ವಾಹೀದ್ ಪಾರ ಪುಲ್ವಾಮ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಆರ್ಟಿಕಲ್ 3370 ರದ್ದುಗೊಂಡ ನಂತರ ಇದೇ ಮೊದಲ ಬಾರಿಗೆ ಡಿಡಿಸಿ ಚುನಾವಣೆ ನಡೆದಿದೆ. ಪಕ್ಷೇತರ ಅಭ್ಯರ್ಥಿಗಳು 51 ಕ್ಕೂ ಹೆಚ್ಚುಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ನಿರ್ಣಾಯಕರಾಗುವ ಸಾಧ್ಯತೆ ಇದೆ. ಬಹುತೇಕ  ಗುಪ್ಕಾರ್ ಮೈತ್ರಿಕೂಟ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.

Donate Janashakthi Media

Leave a Reply

Your email address will not be published. Required fields are marked *