ನವದೆಹಲಿ: ದೇಶದ ಈಶಾನ್ಯ ಭಾಗದ ಮೂರು ರಾಜ್ಯಗಳಾದ ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯದ ವಿಧಾನಸಭೆ ಚುನಾವಣಾ ಪ್ರಕ್ರಿಯೆ ಮುಗಿದಿದ್ದು, ಮತ ಎಣಿಕೆ ಕಾರ್ಯ ನಾಳೆ(ಮಾರ್ಚ್ 2) ನಡೆಯಲಿದೆ.
ನಾಳಿನ ಮತ ಎಣಿಕೆಗೆ ಸೂಕ್ತ ಬಂದೋಬಸ್ತ್ ಹಾಗೂ ವ್ಯವಸ್ಥೆ ಮಾಡಲಾಗಿದೆ. ಫೆಬ್ರವರಿ 27ರಂದು ಮೇಘಾಲಯದ 59 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದೆ. ಮತ ಎಣಿಕೆಗಾಗಿ ಚುನಾವಣಾ ಆಯೋಗ 13 ಮತ ಎಣಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಮೇಘಾಲಯದ ಮುಖ್ಯ ಚುನಾವಣಾ ಅಕಾರಿ ಎಫ್‍ಆರ್ ಖಾರ್ಕೊಂಗೊರ್ ತಿಳಿಸಿದ್ದಾರೆ.
ವೀಕ್ಷಕರು, ಚುನಾವಣಾಕಾರಿಗಳು ಹಾಗೂ ರಾಜಕೀಯ ಪಕ್ಷಗಳ ಏಜೆಂಟರುಗಳು ಮತ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿ ಪರಿಶೀಲನೆ ನಡೆಸಲಿದ್ದಾರೆ. ಯಾವುದೇ ಸಮಸ್ಯೆ ತಲೆದೋರಿಲ್ಲ ಎಂದರು. ಮೇಘಾಲಯದ ಜತೆಗೆ ತ್ರಿಪುರ, ನಾಗಾಲ್ಯಾಂಡ್ ರಾಜ್ಯಗಳಿಗೆ ನಡೆದ ಚುನಾವಣಾ ಫಲಿತಾಂಶವೂ ನಾಳೆ ಹೊರಬೀಳಲಿದೆ.
11 ಸೂಕ್ಷ್ಮ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಗರೋ ಹಿಲ್ಸ್ ಜಿಲ್ಲೆಯಲ್ಲಿ ಮತ ಎಣಿಕೆ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ವಿದ್ಯುನ್ಮಾನ ಮತಯಂತ್ರಗಳು ಭದ್ರತಾ ಕೋಣೆಯಲ್ಲಿ ಇರಿಸಲಾಗಿದೆ. ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಬಂದೋಬಸ್ತ್ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಮತ ಎಣಿಕೆ ಕೋಠಡಿಗಳು ಸಿದ್ಧವಾಗಿವೆ ಮತ್ತು ಅಗತ್ಯವಿರುವ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ವೆಸ್ಟ್ ಗರೊ ಹಿಲ್ಸ್ ಜಿಲ್ಲೆಯ ಸಹಾಯಕ ಆಯುಕ್ತ ಸ್ವಪ್ನಿಲ್ ಟೆಂಬೆ ತಿಳಿಸಿದ್ದಾರೆ.
ಮೆಘಾಲಯ ರಾಜ್ಯದ ಎಲ್ಲಾ 12 ಜಿಲ್ಲೆಗಳಲ್ಲಿ ಮತ್ತು ಒಂದು ಉಪವಿಭಾಗದಲ್ಲಿ 13 ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. 27 ಮಂದಿ ಎಣಿಕೆ ವೀಕ್ಷಕರು ಮತ್ತು 500 ಮೈಕ್ರೋ ವೀಕ್ಷಣಾಧಿಕಾರಿಗಳನ್ನು ನಿಯೋಜಿಸಲಾಗಿದೆ. ನಾವು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಎಣಿಕೆ ಮಾಡುವವರಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಭದ್ರತೆಗಾಗಿ ಇಸಿಐನ ಪ್ರಮಾಣಿತ ಪ್ರೊಟೋಕಾಲ್ ಇದೆ ಮತ್ತು ಮೂರು ಹಂತದ ಭದ್ರತೆಯ ಉಸ್ತುವಾಗಿ ವಹಿಸಿಕೊಳ ಇದೆ. ಪ್ರತಿ ಎಣಿಕೆ ಹಾಲ್‍ನಲ್ಲಿ ನಮ್ಮಲ್ಲಿ 10 ಟೇಬಲ್‍ಗಳಿವೆ ಮತ್ತು ಪ್ರತಿ ಟೇಬಲ್‍ಗೆ ಮೂರು ಜನರು ಮತ್ತು ವಿಧಾ ಅಸೆಂಬ್ಲಿಗಳಿರುತ್ತವೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ