ಗೋವಾ| 3 ಹುಡುಗಿಯರ ಮೇಲೆ ಅತ್ಯಾಚಾರ; ಆರೋಪಿಗಳ ಬಂಧನ

Please follow and like us:
ಗೋವಾ: ಜೂನ್ 8 ಭಾನುವಾರದಂದು ರಾಜ್ಯದ ಹೋಟೆಲ್ನಲ್ಲಿ ಮೂವರು ಹುಡುಗಿಯರ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದೂ, ಈ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಹುಡುಗಿಯರ ಪೋಷಕರು ಪೊಲೀಸರಿಗೆ ನಾಪತ್ತೆ ದೂರು ನೀಡಿದ ನಂತರ ಬೆಳಕಿಗೆ ಬಂದಿದೆ.

ಸಂತ್ರಸ್ತ ಬಾಲಕಿಯರನ್ನ 11, 13 ಮತ್ತು 15 ವರ್ಷ ವಯಸ್ಸಿನವರು ಎಂದು ಗುರುತಿಸಲಾಗಿದೆ. ಅವರಲ್ಲಿ ಇಬ್ಬರು ಒಡಹುಟ್ಟಿದವರು.

ಪೊಲೀಸರ ಪ್ರಕಾರ ಬಾಲಕಿಯರು ಆರೋಪಿಗಳೊಂದಿಗೆ ಸ್ನೇಹಿತರಾಗಿದ್ದರು. ಪಾರ್ಟಿಗೆ ಕರೆದರು ಅಂತ ಬಾಲಕಿಯರು ಹೋಗಿದ್ರು..! ಮಕ್ಕಳು ಕಾಣೆಯಾಗಿದ್ದಾರೆ ಎಂದು ಪೋಷಕರು ಆತಂಕಗೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಜನ ಸಂಖ್ಯೆಗೆ ಸಂಬಂಧಿಸಿದಂತೆ ಮಾತ್ರ ಮರು ಸಮೀಕ್ಷೆ : ಸಿದ್ದರಾಮಯ್ಯ

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅವರನ್ನು ಹುಡುಕಲು ಹಲವಾರು ತಂಡಗಳನ್ನು ರಚಿಸಿದ ನಂತರ ಅದೇ ದಿನ ಅವರನ್ನು ಕ್ಯಾಲಂಗುಟ್ ಬೀಚ್ನಲ್ಲಿರುವ ಹೋಟೆಲ್ನಿಂದ ರಕ್ಷಿಸಲಾಯಿತು. ಪೊಲೀಸರು ಅಲ್ತಾಫ್ (19) ಮತ್ತು ಓಂ (21) ಎಂದು ಗುರುತಿಸಲಾದ ಆರೋಪಿಗಳನ್ನು ಸಹ ಬಂಧಿಸಿದರು. ನಂತರ, ಹುಡುಗಿಯರು ತಮ್ಮ ಹೇಳಿಕೆಯಲ್ಲಿ, ಇಬ್ಬರು ಆರೋಪಿಗಳು ಆಚರಣೆಗಾಗಿ ಕಾಯ್ದಿರಿಸಿದ ಹೋಟೆಲ್ ರೂಮ್ ನಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಗೋವಾ ಮಕ್ಕಳ ಕಾಯ್ದೆಯಡಿಯಲ್ಲಿ ಅತ್ಯಾಚಾರ ಮತ್ತು ಅಪಹರಣದ ಆರೋಪಗಳನ್ನು ಹೊರಿಸಲಾಗಿದೆ.

ನಂತರ, ಪ್ರಕರಣದಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದ ನಂತರ ಪೊಲೀಸರು ಹೋಟೆಲ್ ಮಾಲೀಕರನ್ನು ಬಂಧಿಸಿದರು ಮತ್ತು ಪೋಷಕರ ಅನುಪಸ್ಥಿತಿಯಲ್ಲಿ ಅಪ್ರಾಪ್ತ ವಯಸ್ಕ ಅತಿಥಿಗಳಿಗೆ ಕೊಠಡಿಗಳನ್ನು ಹೇಗೆ ನೀಡಲಾಯಿತು ಎಂದು ಪ್ರಶ್ನಿಸಿದರು. ಪ್ರಕರಣದ ತನಿಖೆ ನಡೆಯುತ್ತಿದೆ.

ಇದನ್ನೂ ನೋಡಿ: ಚರ್ಚೆ | ತ್ಯಾಗದ ಹಬ್ಬ ಬಕ್ರೀದ್- ಆಹಾರ ರಾಜಕಾರಣ – ಸೈಯದ್ ಶಫಿವುಲ್ಲಾ‌ ಮತ್ತು ಕೆ ಎಸ್‌ ವಿಮಲಾ ಮಾತುಕತೆJanashakthi

Please follow and like us:
Donate Janashakthi Media

Leave a Reply

Your email address will not be published. Required fields are marked *