ಸೃಜನಶೀಲತೆಯಿಂದ ಕಾಗದದ ಬ್ಯಾಗ್‌ ತಯಾರಿಸಿದ 3 ಮಕ್ಕಳು

ಬೆಂಗಳೂರು: ನಗರದಲ್ಲಿ ಮೂವರು ಮಕ್ಕಳು ಸೇರಿ ಹೊಸ ಸ್ಟಾರ್ಟ್‌ ಆಪ್‌ ಆರಂಭಿಸಿ ಎಲ್ಲರಿಗೂ ಸ್ಫೂರ್ತಿ ನೀಡುತ್ತಿದ್ದಾರೆ. ಮೂವರು ಮಕ್ಕಳು ಯಾವುದೇ ಅಂಟು, ಕತ್ತರಿ ಅಗತ್ಯವಿಲ್ಲದ, ಕೇವಲ ಶುದ್ಧ ಸೃಜನಶೀಲತೆಯಿಂದ ಕಾಗದದ ಬ್ಯಾಗ್‌ಗಳನ್ನು ತಯಾರಿಸಿದ್ದಾರೆ. ಶುದ್ಧ

ತಿಂಗಳಿಗೆ ಕೇವಲ ₹10 ಗೆ, ಚಂದಾದಾರಿಕೆ ಸೇವೆಯು ಲಭ್ಯವಿದೆ. ಇದು ಜನರನ್ನು ಪರಿಸರ ಸ್ನೇಹಿಯಾಗಿಸುವ ಯತ್ನ ಎಂದು ಮಕ್ಕಳು ಹೇಳಿದ್ದಾರೆ. ಶುದ್ಧ

ಬಿಸಿನೆಸ್‌ ಆರಂಭಿಸಲು ವಯಸ್ಸು ಮುಖ್ಯವಲ್ಲ ಎಂಬುದನ್ನು ಈ ಮಕ್ಕಳು ಸಾಬೀತುಪಡಿಸಿರಿವುದಷ್ಟೇ ಅಲ್ಲದೇ, . ಇಕೋ ವಾಲಾ ಎಂಬ ಹೆಸರಿನಲ್ಲಿ ಸ್ಟಾರ್ಟ್‌ ಅಪ್‌ ಆರಂಭಿಸಿ ಪೇಪರ್‌ ಬ್ಯಾಗ್‌ಗಳನ್ನು ತಯಾರಿಸಿ, ಮನೆಮನೆಗೆ ಅದನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಎಂಇಎಸ್‌ ನಿಷೇಧಕ್ಕೆ ಚಿಂತನೆ ನಡೆಸಲಾಗಿದೆ: ಸತೀಶ್‌ ಜಾರಕಿಹೊಳಿ

ಒಂದು ತಿಂಗಳಿಗೆ ಕೇವಲ 10 ರೂ. ಗಳ ಚಂದಾದಾರಿಕೆಯನ್ನು ಪಡೆದುಕೊಂಡರೆ ಪ್ರತಿ ವಾರ ಮನೆಗೆ 10ಬ್ಯಾಗ್‌ಗಳನ್ನು ತಲುಪಿಸುತ್ತೇವೆ ಎಂಬುದನ್ನು ಪುಟಾಣಿ ಹುಡುಗಿ ಹೇಳಿದ್ದಾಳೆ. ಆಡುವ ವಯಸ್ಸಿನಲ್ಲಿ ಮಕ್ಕಳು ಬೀದಿಗಿಳಿದು ಕೆಲಸ ಮಾಡುತ್ತಾ, ಪರಿಸರ ಜಾಗೃತಿ ಮೂಡಿಸುತ್ತಿರುವುದು ಜನರ ಪ್ರಶಂಸೆಗೆ ಕಾರಣವಾಗಿದೆ.

ಇಕೋ ವಾಲಾ ಹಿಂದಿನ ಕಥೆ

ಬಸವೇಶ್ವರನಗರದಲ್ಲಿ, ಶಾರದಾ (ಸ್ಥಾಪಕಿ), ನಚಿಕೇತ (ವ್ಯವಸ್ಥಾಪಕ) ಮತ್ತು ಸಮುದ್ಯತ (ಸಹ-ವ್ಯವಸ್ಥಾಪಕಿ) ಎಂಬ ಮೂವರು ಮಕ್ಕಳು ಈ ಪರಿಸರ ಸ್ನೇಹಿ ಯೋಜನೆಯನ್ನು ನಿಜವಾದ ವ್ಯವಹಾರವನ್ನಾಗಿ ಪರಿವರ್ತಿಸಿದ್ದಾರೆ. ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪರಿಸರ ಸ್ನೇಹಿ ಆಯ್ಕೆಗಳನ್ನು ಮಾಡಲು ಜನರನ್ನು ಪ್ರೇರೇಪಿಸಲು ಇಕೋ ವಾಲಾವನ್ನು ಪ್ರಾರಂಭಿಸಿದ್ದಾಗಿ ಹೇಳಿಕೊಂಡಿದ್ದಾರೆ.

startupro ಎಂಬ ಇಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, 2 ಲಕ್ಷ ವೀಕ್ಷಣೆಗಳನ್ನು ಈ ವಿಡಿಯೋ ಪಡೆದುಕೊಂಡಿದೆ. ನೆಟ್ಟಿಗರು ಮಕ್ಕಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಹಜವಾಗಿಯೇ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಎಲ್ಲರೂ ಈ ದೃಶ್ಯವನ್ನು ಕಂಡು ಖುಷಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಸಾಕಷ್ಟು ವೀಕ್ಷಣೆ ಮತ್ತು ಮೆಚ್ಚುಗೆಯ ಪ್ರತಿಕ್ರಿಯೆಯನ್ನು ಗಳಿಸುವಲ್ಲಿ ಈ ವಿಡಿಯೋ ಯಶಸ್ವಿಯಾಗಿದೆ.

ಲಾಭದಾಯಕ ಉದ್ಯಮ

ಪರಿಸರ ಸ್ನೇಹಿ ಪ್ಯಾಕೇಜಿಂಗ್‌ನ ಬೇಡಿಕೆ ಹೆಚ್ಚುತ್ತಿರುವ ಕಾರಣ ಈ ವ್ಯವಹಾರವು ಅತ್ಯಂತ ಲಾಭದಾಯಕವಾಗಿದೆ, ವಿಶೇಷವಾಗಿ ಚಿಲ್ಲರೆ ವ್ಯಾಪಾರಿಗಳು, ಆಹಾರ ಉದ್ಯಮಗಳು ಮತ್ತು ದಿನಸಿ ಅಂಗಡಿಗಳಲ್ಲಿ ಪೇಪರ್‌ ಬ್ಯಾಗ್‌ಗಳನ್ನು ಹೆಚ್ಚು ಹೆಚ್ಚು ಬಳಸುತ್ತಾರೆ. ಈ ಮಕ್ಕಳು ಈ ಸ್ಟಾರ್ಟ್‌ ಅನ್ನು ಮುಂದುವರೆಸಿದ್ದೆ ಆದಲ್ಲಿ ಖಂಡಿತ ಲಾಭ ಗಳಿಸಬಹುದಾಗಿದೆ.

ಕಾಗದದ ಚೀಲಗಳ ಲಾಭಗಳು

ಪರಿಸರ ಸ್ನೇಹಿ: ಕಾಗದವು ಮರುಬಳಕೆ ಮಾಡಬಹುದಾದ ಅಂಶವಾಗಿದೆ. ಇದರ ಜೊತೆಗೆ, ಕಾಗದದ ಚೀಲಗಳು ಮಣ್ಣಿನಲ್ಲಿ ಸುಲಭವಾಗಿ ಕರಗುತ್ತವೆ, ಪ್ಲಾಸ್ಟಿಕ್ ಚೀಲಗಳಂತೆ ಪರಿಸರಕ್ಕೆ ಹಾನಿ ಮಾಡುವುದಿಲ್ಲ. ಪ್ಲಾಸ್ಟಿಕ್ ಚೀಲಗಳಿಗಿಂತ ಕಾಗದದ ಚೀಲಗಳನ್ನು ಸುಲಭವಾಗಿ ಮರುಬಳಕೆ ಮಾಡಬಹುದು ಮತ್ತು ಮರುಬಳಕೆ ಮಾಡಬಹುದಾದ ವಸ್ತುಗಳೊಂದಿಗೆ ಹೊಸ ಚೀಲಗಳನ್ನು ತಯಾರಿಸಬಹುದು.

ಪ್ಲಾಸ್ಟಿಕ್ ಚೀಲಗಳ ಉತ್ಪಾದನೆಗೆ ರಾಸಾಯನಿಕಗಳು ಮತ್ತು ಪಳೆಯುಳಿಕೆ ಇಂಧನಗಳ ಬಳಕೆ ಅಗತ್ಯವಿರುತ್ತದೆ. ಕಾಗದದ ಚೀಲಗಳ ಉತ್ಪಾದನೆಗೆ ಈ ರೀತಿಯ ರಾಸಾಯನಿಕಗಳ ಬಳಕೆ ಕಡಿಮೆ ಇರುತ್ತದೆ.

ಇದನ್ನೂ ನೋಡಿ: ನಿರಂಜನರ ಸಾಹಿತ್ಯದಲ್ಲಿ ನಿಜವಾದ ಜನಪರತೆ ಇದೆ – ರಂಗನಾಥ ಕಂಟನಕುಂಟೆ Janashakthi Media

Donate Janashakthi Media

Leave a Reply

Your email address will not be published. Required fields are marked *