ಗುಜರಾತ್: ಭರೂಚ್ ಜಿಲ್ಲೆಯ ಜಂಬೂಸರ್ ಬಳಿ ರಾಸಾಯನಿಕ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾದ ಪರಿಣಾಮ ಉಸಿರಾಟದ ಸಮಸ್ಯೆಯಿಂದಾಗಿ 28 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ʼಸರೋದ್ ಗ್ರಾಮದ ಸಮೀಪದಲ್ಲಿರುವ ಪಿಐ ಇಂಡಸ್ಟ್ರೀಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿತ್ತು. ಬೆಂಕಿಯಿಂದಾಗಿ ಬ್ರೋಮಿನ್ ಅನಿಲ ಸೋರಿಕೆಯಾಗಿದೆ. ಕಾರ್ಖಾನೆಯ ಒಳಗಿದ್ದ 28 ಮಂದಿ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆʼ ಎಂದು ಎಂದು ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌ಆರ್ ಚಾಂಧಲ್ ಬುಧವಾರ ಹೇಳಿದ್ದಾರೆ.
ಇದನ್ನೂ ಓದಿ:‘ಚಂದ್ರಯಾನ-3’ ಸಕ್ಸಸ್, ಇತಿಹಾಸ ಬರೆದ ಭಾರತ!
ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಚಾಂಧಲ್ ತಿಳಿಸಿದ್ದಾರೆ.
#WATCH | 28 hospitalised after gas leakage at a chemical factory in Gujarat’s Bharuch
Resident Additional Collector NR Dhandhal says, "A fire was reported today at P.I. Industries near Sarod village. Bromine gas leaked due to the fire. 28 people complained of breathing and were… pic.twitter.com/pX6niV57JU
— ANI (@ANI) August 23, 2023